ಹೈದರಾಬಾದ್: ವಾಕಿಂಗ್ ಗೆ ತೆರಳುತ್ತಿದ್ದ ಮಹಿಳೆಯೊಬ್ಬರ ಮೇಲೆ ಬೀದಿ ನಾಯಿಗಳು ದಾಳಿ (dog attack) ನಡೆಸಿರುವ ಭೀಕರ ಘಟನೆ ಹೈದರಾಬಾದ್ ನ (Hyderabad) ಮಣಿಕೊಂಡದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಈ ದೃಶ್ಯ ಕೆಮರಾದಲ್ಲಿ ಸೆರೆಯಾಗಿದ್ದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ (Viral Video) ಆಗಿದೆ.
ಬೆಳಗ್ಗೆ 6 ಗಂಟೆ ಸುಮಾರಿಗೆ ಮಣಿಕೊಂಡ ಪ್ರದೇಶದ ಚಿತ್ರಪುರಿ ಹಿಲ್ಸ್‌ನಲ್ಲಿ ಮಹಿಳೆ ತನ್ನ ನಿವಾಸದಿಂದ ಬೆಳಗಿನ ವಾಕಿಂಗ್‌ಗೆ ಬಂದಾಗ ಈ ಘಟನೆ ಸಂಭವಿಸಿದೆ. ಸುಮಾರು 15 ನಾಯಿಗಳು ಮಹಿಳೆಯ ಮೇಲೆ ದಾಳಿ ಮಾಡಿದ್ದು, ಮಹಿಳೆ ಭಯಭೀತರಾಗಿ ನಾಯಿಗಳ ಗುಂಪಿನಿಂದ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಮಹಿಳೆ ಕೈಗಳನ್ನು ಎತ್ತಿ, ಚಪ್ಪಲಿಯನ್ನು ಬಳಸಿ ನಾಯಿಗಳನ್ನು ದೂರವಿರಿಸಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಹಿಳೆ ತನ್ನ ಒಂದು ಕೈಯಲ್ಲಿ ಚಪ್ಪಲಿಯನ್ನು ಹಿಡಿದುಕೊಂಡು ನಾಯಿಗಳನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದು, ಒಂದು ನಿಮಿಷಕ್ಕೂ ಹೆಚ್ಚು ಕಾಲ ಜೀವನ್ಮರಣ ಹೋರಾಟ ನಡೆಸಿದರು. ಮಹಿಳೆಗೆ ಸಹಾಯ ಮಾಡಲು ಸ್ಥಳದಲ್ಲಿ ಯಾರೂ ಇರಲಿಲ್ಲ. ನಾಯಿಗಳನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದ ಮಹಿಳೆ ಸುಸ್ತಾಗಿ ಒಂದು ಹಂತದಲ್ಲಿ ನೆಲಕ್ಕೆ ಬಿದ್ದರು.
Today this incident happend in Chitrapuri hills MIG Manikonda, in this community there are almost 20 stray dogs.many kids got bitten be these dogs this year already.maintainence wont take any action. Ghmc is anyhow useless in this case. @sudhakarudumula @TheNaveena @TV9Telugu pic.twitter.com/uzmnmLjvt1
— vidyasagarReddy (@Sagarnani909) June 21, 2024
ಆದರೂ ಎದ್ದು ನಿಂತ ಮಹಿಳೆ ಮತ್ತೆ ನಾಯಿಗಳಿಂದ ಎದುರಿಸಲು ಮುಂದಾದರು. ಸ್ವಲ್ಪ ಸಮಯದ ಅನಂತರ ಮಹಿಳೆ ಸೊಸೈಟಿಯ ಗೇಟ್ ಬಳಿ ತೆರಳಿದ್ದು, ವ್ಯಕ್ತಿಯೊಬ್ಬರು ಸ್ಕೂಟರ್‌ನಲ್ಲಿ ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ಹಿಂಬಾಲಿಸುತ್ತಿದ್ದ ಎಲ್ಲಾ ನಾಯಿಗಳನ್ನು ಓಡಿಸಿದರು. ಮಹಿಳೆ ತುಂಬಾ ಕಷ್ಟಪಟ್ಟು ನಾಯಿಗಳ ಗುಂಪಿನಿಂದ ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಯಿತು. ಆದರೂ ಅವರಿಗೆ ಗಂಭೀರ ಗಾಯಗಳಾಗಿವೆ.
ಇದನ್ನೂ ಓದಿ: Road Accident : ವೇಗವಾಗಿ ಬಂದು ಬೈಕ್‌ಗೆ ರಭಸವಾಗಿ ಗುದ್ದಿದ ಬಸ್; ನಜ್ಜುಗುಜ್ಜಾದ ಸವಾರ
ಮಹಿಳೆಯ ಪತಿ ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಪ್ರದೇಶದಲ್ಲಿ ನಾಯಿಗಳ ಹಾವಳಿ ಹೆಚ್ಚುತ್ತಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಅನೇಕ ಮಕ್ಕಳು ಸಹ ನಾಯಿಗಳ ದಾಳಿಗೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಪ್ರದೇಶದಲ್ಲಿನ ನಾಯಿಗಳಿಗೆ ಆಹಾರ ನೀಡದಂತೆ ಸ್ಥಳೀಯರು ಒತ್ತಾಯಿಸಿದ್ದು, ಇದರಿಂದ ಈ ಪ್ರದೇಶದ ಜನರಿಗೆ ಅನಗತ್ಯ ತೊಂದರೆ ಉಂಟಾಗುತ್ತಿದೆ. ಅದೃಷ್ಟವಶಾತ್ ಮಹಿಳೆ ನಾಯಿಗಳ ದಾಳಿಯಿಂದ ಪಾರಾಗಿದ್ದಾರೆ.