Site icon Vistara News

Viral video | ಅಟ್ಯಾಕ್‌, ಅಟ್ಯಾಕ್‌ ಮತ್ತು ಅಟ್ಯಾಕ್! ಹುಲಿಯನ್ನು ಸೋಲಿಸಲು ಮೊಲ ಬಳಸಿದ ಸೂತ್ರ ಇದು

ಒಂದು ಪುಟ್ಟ ಮೊಲ ತನ್ನ ಚಾಣಾಕ್ಷ ಬುದ್ಧಿಯಿಂದ ಹುಲಿಮರಿಯನ್ನು ಹೆದರಿಸುತ್ತದೆ ಎಂದರೆ ಬಹುಶಃ ಯಾರೂ ನಂಬುವುದಿಲ್ಲ! ಮೊಲ ಹಾಗೂ ಹುಲಿಮರಿಯ ಸುಂದರ ಫೈಟ್‌ನ ವಿಡಿಯೊ (Viral video) ಇಲ್ಲಿದೆ ನೋಡಿ.

ಇಲ್ಲೊಂದು ಮೊಲ ಹಾಗೂ ಹುಲಿಮರಿ ಆಟವಾಡುತ್ತಿವೆ. ಅಲ್ಲ, ಈ ಮೊಲ ಹುಲಿಮರಿಯನ್ನು ಹೆದರಿಸುತ್ತಿದೆ. ಎದುರು ಇರುವುದು ಹುಲಿಮರಿ ಎಂದು ಹೆದರದೇ ಮೊಲ ಹಾರಿ ಹಾರಿ ಆ ಹುಲಿಮರಿಯ ಮೇಲೆ ಅಟ್ಯಾಕ್‌ ಮಾಡುತ್ತಿದೆ. ಹುಲಿಮರಿ ಬೆಚ್ಚಿಬೀಳುತ್ತಿದೆ. ಆ ಹುಲಿ ಮರಿ ತನ್ನ ಸಮೀಪವೂ ಸುಳಿಯದಂತೆ ಚಾಣಾಕ್ಷ ಮೊಲ ಹೆದರಿಸಿ ಓಡಿಸುತ್ತಿದೆ. ಈ ಪ್ರಾಣಿಗಳ ನಡುವಿನ ಈ ಜಟಾಪಟಿ ಈಗ ಎಲ್ಲೆಡೆ ವೈರಲ್‌ ಆಗಿದೆ. ಧೈರ್ಯವೊಂದಿದ್ದರೆ ಮೊಲ ಕೂಡ ಹುಲಿಯನ್ನು ಎದುರಿಸಬಹುದು ಎಂಬ ಸಂದೇಶವನ್ನು ಈ ವಿಡಿಯೊ ರವಾನಿಸಿದೆ.

ಇದನ್ನೂ ಓದಿ: Viral Video | ಯಂತ್ರಕ್ಕಿಂತಲೂ ವೇಗವಾಗಿ ಟಿಕೆಟ್‌ ಕೊಡುವ ರೈಲ್ವೆ ಉದ್ಯೋಗಿ !

Exit mobile version