ತಿರುವನಂತಪುರಂ: ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಹಲವಾರು ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಲೇ ಇರುತ್ತದೆ. ಆದರೂ ಕೆಲವರು ನಿಯಮ ಮೀರಿ ವಾಹನ ಚಲಾಯಿಸಿ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಅದೇ ರೀತಿಯಲ್ಲಿ ಕೇರಳದಲ್ಲಿ ಇಬ್ಬರು ವಿದ್ಯಾರ್ಥಿಗಳು ಬಸ್ಸನ್ನು ಓವರ್ ಟೇಕ್ ಮಾಡಲು ಹೋಗಿ ಅಪಾಯಕ್ಕೆ ಸಿಲುಕಿದ ಘಟನೆ ನಡೆದಿದೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಕೋಯಿಕ್ಕೋಡ್‌ನಲ್ಲಿ ಈ ಘಟನೆ ನಡೆದಿದೆ. ಸ್ಕೂಲ್ ಬಸ್ಸೊಂದು ರಸ್ತೆಯಲ್ಲಿ ಸಾಗುತ್ತಿದ್ದು, ಅದರ ಹಿಂದೆಯೇ ಇಬ್ಬರು ವಿದ್ಯಾರ್ಥಿಗಳು ಸ್ಕೂಟರ್‌ನಲ್ಲಿ ಬರುತ್ತಿರುತ್ತಾರೆ. ಕಿರಿದಾದ ದಾರಿ ಅದಾಗಿರುತ್ತದೆಯಾದರೂ ಬಸ್ಸನ್ನು ಓವರ್ ಟೇಕ್ ಮಾಡಿಬಿಡೋಣ ಎಂದು ಅವರು ಸ್ಕೂಟಿಯನ್ನು ಬಸ್ಸಿನ ಪಕ್ಕದಲ್ಲಿ ತರುತ್ತಾರೆ. ಅಷ್ಟರಲ್ಲಿ ಇನ್ನೊಂದು ಬದಿಯಿಂದ ಲಾರಿಯೊಂದು ಬರುತ್ತದೆ. ಹಾಗಾಗಿ ವಿದ್ಯಾರ್ಥಿಗಳಿದ್ದ ಸ್ಕೂಟರ್ ಲಾರಿ ಮತ್ತು ಬಸ್ಸಿನ ಮಧ್ಯ ಸಿಲುಕಿಕೊಳ್ಳುತ್ತದೆ.
ಇದನ್ನೂ ಓದಿ: Viral News: ರಿಂಕು ಸಿಂಗ್ ಹಿಂದೆ ಬಿದ್ದ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗನ ತಂಗಿ; ಇನ್ಸ್ಟಾದಲ್ಲಿ ರಿವೀಲ್ ಆಯ್ತು ಪ್ರೇಮ್ ಕಹಾನಿ
ಸ್ಕೂಟರ್‌ಗೆ ಲಾರಿ ತಾಕುತ್ತಿದ್ದಂತೆಯೇ ಸ್ಕೂಟರ್ ರಸ್ತೆಗೆ ಬೀಳುತ್ತದೆ. ಅದರಲ್ಲಿದ್ದ ಇಬ್ಬರೂ ವಿದ್ಯಾರ್ಥಿಗಳು ಕೆಳಗೆ ಬೀಳುತ್ತಾರೆ. ಅವರು ಧರಿಸಿದ್ದ ಹೆಲ್ಮೆಟ್ ಕೂಡ ಸಾಕಷ್ಟು ದೂರ ಹೋಗಿ ಬೀಳುತ್ತದೆ. ಅದೃಷ್ಟವಶಾತ್ ವಿದ್ಯಾರ್ಥಿಗಳಿಗೆ ಯಾವುದೇ ಗಂಭೀರ ಪೆಟ್ಟು ಬಿದ್ದಿರುವುದಿಲ್ಲ. ಸ್ಕೂಟರ್ ಬಿದ್ದಿದ್ದು ತಿಳಿದ ತಕ್ಷಣ ಬಸ್ಸು ಮತ್ತು ಲಾರಿಯ ಚಾಲಕರಿಬ್ಬರೂ ವಾಹನ ನಿಲ್ಲಿಸಿ ಅವರ ಸಹಾಯಕ್ಕೆ ಮುಂದಾಗುತ್ತದೆ.
Content Warning.#CCTV Visuals show two students having a miraculous escape in #Kozhikode's Mavoor while being stuck between a bus and a lorry.#Kerala pic.twitter.com/1cAFWN42Fh
— Shibimol K G (@KGShibimol) June 8, 2023
ಈ ದೃಶ್ಯಗಳು ಶಾಲೆಯ ಬಸ್ಸಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ವೈರಲ್ ಆಗಿದೆ.
ಇತ್ತೀಚೆಗೆ ಕೇರಳದ ಪಥನಂತಿಟ್ಟಾದಲ್ಲಿ ಸರ್ಕಾರಿ ಸ್ವಾಮ್ಯದ ಕೆಎಸ್‌ಆರ್‌ಟಿಸಿ ಬಸ್ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಚರ್ಚ್‌ಗೆ ಅಪ್ಪಳಿಸಿತ್ತು. ಅದರಲ್ಲಿ ಒಟ್ಟು 16 ಮಂದಿಗೆ ಗಾಯವಾಗಿತ್ತು. ಆ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.