Site icon Vistara News

Viral Video: ಮಗನಿಗೆ ಮುಸಲ್ಮಾನರ ಕ್ಯಾಪ್‌ ಹಾಕಿದ ನಟಿ; ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ!

Viral Video

ಕಿರುತೆರೆ ನಟಿ (TV actress) ಕಿಶ್ವರ್ ಮರ್ಚೆಂಟ್ (Kishwer Merchantt) ಅವರು ಸಾಮಾಜಿಕ ಜಾಲತಾಣದಲ್ಲಿ (social media) ಮಗ ಸ್ಕಲ್ ಕ್ಯಾಪ್ (skull cap) ಧರಿಸಿರುವ ವಿಡಿಯೋವನ್ನು (Viral Video) ಪೋಸ್ಟ್ ಮಾಡಿದ್ದು, ಇದು ಭಾರಿ ಚರ್ಚೆ ಹುಟ್ಟಿಸಿದೆ. ನಟಿಯನ್ನು ಟ್ರೋಲ್ ಮಾಡಿ ಅನೇಕರು ಕಾಮೆಂಟ್‌ಗಳನ್ನು ಮಾಡಿದ್ದಾರೆ.

ನಟ ಸುಯ್ಯಶ್ ರಾಯ್‌ (Suyyash Rai) ಅವರನ್ನು ವಿವಾಹವಾಗಿರುವ ಕಿಶ್ವರ್ ಮರ್ಚೆಂಟ್ ಅವರ ಮಗ ನಿರ್ವೈರ್ ಸ್ಕಲ್ ಕ್ಯಾಪ್ ಧರಿಸಿರುವ ವಿಡಿಯೋವನ್ನು ಪೋಸ್ಟ್ ಮಾಡಿದ ಬಳಿಕ ಟ್ರೋಲ್‌ಗೆ ಗುರಿಯಾಗಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿಶ್ವರ್, ನಾನು ಹಿಂದೂವನ್ನು ಮದುವೆಯಾಗಿರುವ ಮುಸ್ಲಿಂ. ಆದರೂ ನಾನು ಚರ್ಚ್, ಗುರುದ್ವಾರ ಅಥವಾ ದೇವಸ್ಥಾನಕ್ಕೆ ಹೋಗುತ್ತೇನೆ. ನಾನು, ನನ್ನ ಮಗನನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತೇನೆ ಮತ್ತು ದೇವರು ನಿಜವಾಗಿ ಒಬ್ಬನೇ ಎಂದು ನಂಬುವಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಕಿಶ್ವರ್ ಮರ್ಚೆಂಟ್ ಅವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಅವರ ಮಗ ನಿರ್ವೈರ್ ಮುಸ್ಲಿಂ ಆಚರಣೆಗಳನ್ನು ಮಾಡುತ್ತಿರುವುದು ಕಂಡು ಬಂದಿದೆ. ಕಿಶ್ವರ್ ಅವರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಅವರ ಪತಿ ಮತ್ತು ನಟ ಸುಯ್ಯಾಶ್ ರಾಯ್‌ ಅವರು ಮಗ ನಿರ್ವೈರ್‌ಗೆ ಮುಸ್ಲಿಮರು ನಡೆಸುವ ಪ್ರಾರ್ಥನೆ ವಿಧಿಗಳನ್ನು ಕಲಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ಯುವಕ ಸ್ಕಲ್ ಕ್ಯಾಪ್ ಧರಿಸಿದ್ದಾನೆ.
ಇದರಿಂದ ಕಿಶ್ವರ್ ಸಾಕಷ್ಟು ದ್ವೇಷದ ಕಾಮೆಂಟ್‌ಗಳನ್ನು ಸ್ವೀಕರಿಸಿದರು ಮತ್ತು ಅವರ ಮಗ ನಿರ್ವೈರ್‌ ನನ್ನು ಟ್ರೋಲ್ ಮಾಡಲಾಯಿತು.

ಮುಸ್ಲಿಂ ಆಗಿರುವ ಕಿಶ್ವರ್ ಅವರು ಹಿಂದೂ ಆಗಿರುವ ಸುಯ್ಯಶ್ ರಾಯ್‌ ಅವರನ್ನು ವಿವಾಹವಾಗಿದ್ದಾರೆ. ಮುಸ್ಲಿಮರು ಎಂದಾದರೂ ಭಗವಾನ್ ಅಥವಾ ರಾಮ್ ಎಂಬ ಪದವನ್ನು ಹೇಳುತ್ತಾರಾ? ಮುಸ್ಲಿಂ ಎಂದಾದರೂ ದೇವಸ್ಥಾನಕ್ಕೆ ಹೋಗುತ್ತಾನಾ? ಹಾಗೆ, ನಾವು ಇನ್ನೂ ಮಸೀದಿಗಳಿಗೆ ಹೋಗುತ್ತೇವೆ ಎಂದು ಪ್ರಶ್ನಿಸುವ ಕಾಮೆಂಟ್‌ಗಳು ಇದ್ದವು.

ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಕಿಶ್ವರ್‌, ನಾನು ಮುಸ್ಲಿಂ ಆದರೂ ಗುರುದ್ವಾರ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ. ದೀಪಾವಳಿ ಮತ್ತು ಕ್ರಿಸ್‌ಮಸ್‌ನಂತಹ ಎಲ್ಲಾ ಹಬ್ಬಗಳನ್ನು ಆಚರಿಸುತ್ತೇನೆ. ಪತಿ ಹಿಂದೂವಾದರೂ ಮಗ ಬೇರೆ ಧರ್ಮದ ಬಗ್ಗೆ ಕಲಿಯುವ ಬಗ್ಗೆ ಅವರಲ್ಲಿ ಯಾವುದೇ ಆತಂಕ ವಿಲ್ಲ ಎಂದು ಹೇಳಿದ್ದಾರೆ.


ತಂದೆ ಮಗನ ಮುದ್ದಾದ ವಿಡಿಯೋ

ಈ ವಿಡಿಯೋ ತಂದೆ ಮಗನದ್ದು ತುಂಬಾ ಮುದ್ದಾಗಿದೆ. ಆದ್ದರಿಂದ ನಾನು ಅದನ್ನು ಪೋಸ್ಟ್ ಮಾಡಿದ್ದೇನೆ. ನಾನು ಹಿಂದೂವನ್ನು ಮದುವೆಯಾಗಿರುವ ಮುಸ್ಲಿಂ ಎಂದು ಹೆಚ್ಚಿನವರಿಗೆ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ ಮಗ ಸಣ್ಣ ವಯಸ್ಸಿನಿಂದಲೇ ಎಲ್ಲ ಆಚರಣೆಗಳನ್ನು ನೋಡುತ್ತಿದ್ದಾನೆ. ಈ ಮುದ್ದಾದ ವಿಡಿಯೋಗಾಗಿ ಟ್ರೋಲ್ ಮಾಡುವುದು ಮೂರ್ಖತನ. ಆ ಜನರು ಕೇವಲ ಬುದ್ಧಿಹೀನರು ಮತ್ತು ಅವರು ಕೇವಲ ದ್ವೇಷವನ್ನು ಹರಡಲು ಅಲ್ಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: YouTuber Dhruv Rathee: ಧ್ರುವ ರಾಥಿಯ ಮೋದಿ ವಿರೋಧಿ ವಿಡಿಯೊ ಗೊತ್ತು; ಅವರ ಲವ್‌ ಸ್ಟೋರಿ ಗೊತ್ತಾ?

ಮಗನಿಗೆ ಹಿಂದೂ ಹೆಸರನ್ನು ಇಟ್ಟಿದ್ದೇನೆ. ದೇವರು ಒಬ್ಬನೇ ಎಂದು ನಂಬುವ ಮೂಲಕ ತನ್ನ ಮಗನಿಗೆ ಪ್ರತಿಯೊಂದು ಧರ್ಮವನ್ನು ಕಲಿಸಲು ಬಯಸುತ್ತಾನೆ ಎಂದು ಕಿಶ್ವರ್ ತಿಳಿಸಿದ್ದಾರೆ.

ಅವನು ಮುಸಲ್ಮಾನರ ಟೋಪಿ ಧರಿಸಿ ಮುಂದೆ ಎಲ್ಲವನ್ನೂ ಕೆಟ್ಟದಾಗಿ ಮಾಡುತ್ತಾನೆ ಎನ್ನುವುದು ಅಸಹ್ಯಕರವಾಗಿದೆ. ಹೀಗೆ ಹೇಳುವವರ ಬಗ್ಗೆ ನನಗೆ ಅನುಕಂಪವಿದೆ. ಯಾಕೆಂದರೆ ಮಕ್ಕಳ ಚಿಂತನೆಗಳು ಅವರ ಪಾಲನೆಯಲ್ಲಿರುತ್ತದೆ. ನನ್ನ ಮಗು ಹಾಗೆ ಇರಬೇಕೆಂದು ನಾನು ಬಯಸುವುದಿಲ್ಲ ಮತ್ತು ಅದಕ್ಕಾಗಿಯೇ ನಾನು ಅವನನ್ನು ಎಲ್ಲೆಡೆ ಕರೆದುಕೊಂಡು ಹೋಗುತ್ತೇನೆ. ದೇವರು ಒಬ್ಬನೇ ಎಂದು ನಂಬುವಂತೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Exit mobile version