Site icon Vistara News

Viral Video: ಸಫಾರಿ ಕೇಂದ್ರದಲ್ಲಿ ಮಾವುತನನ್ನು ಬರ್ಬರವಾಗಿ ತುಳಿದು ಸಾಯಿಸಿದ ಆನೆ

Viral Video

ತಿರುವನಂತಪುರ: ಮಾವುತನನ್ನು ಸಾಕಾನೆಯೊಂದು (Elephant) ತುಳಿದು ಕೊಂದು ಹಾಕಿರುವ ಭಯಾನಕ ಘಟನೆಯ ವಿಡಿಯೋ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದೆ. ಈ ಘಟನೆ ಕೇರಳದ (kerala) ಇಡುಕ್ಕಿಯಲ್ಲಿ (Idukki) ನಡೆದಿದೆ.

ಮಾವುತನ್ನು ಸೊಂಡಿಲಿನಿಂದ ಬೀಳಿಸಿ, ಎರಡು ಕಾಲುಗಳನ್ನು ಆತನ ಮೇಲಿಟ್ಟು ನಿರ್ದಯ

ವಾಗಿ ಮಾವುತನನ್ನು ಕೊಂದಿರುವ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿವೆ. ಮೊದಲು ಮಾವುತನನ್ನು ಸೊಂಡಿಲಿನಿಂದ ಬೀಳಿಸಿದ ಆನೆ ಬಳಿಕ ಆತನನ್ನು ಕಾಲಿನಿಂದ ತುಳಿದು ಕೊಂದು ಹಾಕಿದೆ.

ಬಾಲಕೃಷ್ಣ (62) ಮೃತ ಮಾವುತ. ಬಾಲಕೃಷ್ಣ ನೀಲೇಶ್ವರಂ ನಿವಾಸಿಯಾಗಿದ್ದು, ಕೇರಳದ ಅಡಿಮಲಿ ಸಮೀಪದ ಕಲ್ಲರ್ ಬಳಿಯ ಖಾಸಗಿ ಫಾರ್ಮ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಪ್ರವಾಸಿಗರನ್ನು ಸಫಾರಿಗೆ ಕರೆದುಕೊಂಡು ಹೋಗಲು ಸಿದ್ಧತೆ ನಡೆಸಿದ್ದ ಮಾವುತನ ಮೇಲೆ ಆನೆ ದಾಳಿ ನಡೆಸಿದೆ.
ಇಡುಕ್ಕಿಯಲ್ಲಿರುವ ಸಫಾರಿಯ ಎಂಟು ಕೇಂದ್ರಗಳಲ್ಲಿ 35 ಆನೆಗಳನ್ನು ಸಾಕಲಾಗುತ್ತಿದೆ. ಕೇವಲ ನಾಲ್ಕು ಕೇಂದ್ರಗಳು ಮಾತ್ರ ನೋಂದಾಯಿಸಲ್ಪಟ್ಟಿದೆ. ಮಾವುತ ಬಾಲಕೃಷ್ಣನನ್ನು ಕೊಂದಿರುವ ಆನೆ ಈ ಹಿಂದೆಯೂ ಹಲವು ಬಾರಿ ಆಕ್ರಮಣಕ್ಕೆ ಮುಂದಾಗಿತ್ತು ಎನ್ನಲಾಗಿದೆ.


ಈ ಸಫಾರಿ ಕೇಂದ್ರಕ್ಕೆ ಜಿಲ್ಲಾಡಳಿತದಿಂದ ಯಾವುದೇ ಅನುಮತಿ ಪಡೆದಿಲ್ಲ. ಅರಣ್ಯ ಇಲಾಖೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದೆ. ಅಕ್ರಮ ಸಫಾರಿ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತರುವಂತೆ ಇಡುಕ್ಕಿ ಜಿಲ್ಲಾಧಿಕಾರಿ ಶೀಬಾ ಜಾರ್ಜ್ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಮಹಿಳೆ ಮೇಲೆ 15 ಬೀದಿ ನಾಯಿಗಳ ದಾಳಿ; ಆಕೆ ಪಾರಾಗಿದ್ದು ಹೇಗೆ ನೋಡಿ

ಈ ಆನೆ ಕೇಂದ್ರವನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಲ್ಲ. ಮಾವುತನ ಮೇಲೆ ದಾಳಿ ನಡೆಸಿರುವ ಆನೆಯನ್ನು ಕೊಟ್ಟಾಯಂಗೆ ಸ್ಥಳಾಂತರಿಸುವಂತೆ ಇಡುಕ್ಕಿಯ ಅರಣ್ಯಾಧಿಕಾರಿ ಡಿಎಫ್‌ಓ ವಿಪಿನ್‌ದಾಸ್‌ ಪಿ.ಕೆ, ಮಾಲೀಕರಿಗೆ ಸೂಚಿಸಿದ್ದಾರೆ. ಈ ಕುರಿತು ಪ್ರಕರಣವನ್ನೂ ದಾಖಲಿಸಲಾಗಿದೆ.

ಮಾವುತ ಬಾಲಕೃಷ್ಣ ಸಾವಿಗೆ ಸಂಬಂಧಿಸಿ ಸಫಾರಿ ಕೇಂದ್ರಕ್ಕೆ ಅರಣ್ಯ ಇಲಾಖೆ ನೊಟೀಸ್ ನೀಡಿದೆ. ಮೃತ ಮಾವುತನ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

Exit mobile version