ಮುಂಬೈ: ಭಾರತದಲ್ಲಿ ದೇವರಂತೆಯೇ ಸನ್ಯಾಸಿಗಳು, ಸ್ವಾಮಿಗಳ ಸಂಖ್ಯೆಯೂ ಕಡಿಮೆಯಿಲ್ಲ. ಪವಾಡ ಮಾಡುವ ಪವಾಡ ಪುರುಷರನ್ನೂ ನಾವು ನೋಡಿದ್ದೇವೆ. ಇದೀಗ ಮಹಾರಾಷ್ಟ್ರದಲ್ಲಿ ಬಿಸಿ ಕಾವಲಿ ಮೇಲೆ ಕುಳಿತುಕೊಂಡೇ ಭಕ್ತರಿಗೆ ಆಶೀರ್ವದಿಸುವ ಕಾವಲಿ ಸ್ವಾಮಿಯೊಬ್ಬರು ಸುದ್ದಿಯಾಗಿದ್ದಾರೆ. ಅವರ ಈ ಪವಾಡದ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral Video: ಬೇಕರಿ ಎದುರು ನಿಂತಿದ್ದ ಬಿಜೆಪಿ ಕಾರ್ಯಕರ್ತನ ಮೇಲೆ ಬಾಂಬ್ ದಾಳಿ; ಹೊಗೆಯ ಮಧ್ಯೆ ಹೊಡೆದು ಕೊಂದರು
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ತಿವಾಸ ತಾಲೂಕಿನಲ್ಲಿ ಗೋ ರಕ್ಷಣಾ ಸಂಘಟನೆಯೊಂದನ್ನು ನಡೆಸುತ್ತಿರುವ ಗುರುದಾಸ ಮಹಾರಾಜ ಸಂತರು ಈ ಪವಾಡ ಮಾಡುವವರು. ಅವರು ಕಾವಲಿ ಮೇಲೆ ಕುಳಿತುಕೊಂಡು ಆಶೀರ್ವಾದ ಮಾಡಿರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್ ಆಗಿದೆ. ಈ ಕುರಿತಾಗಿ ಗುರುದಾಸ ಅವರೇ ಪ್ರತಿಕ್ರಿಯೆಯನ್ನೂ ಕೊಟ್ಟಿದ್ದಾರೆ.
ಕಾದ ಕಾವಲಿಯ ಮೇಲೆ ಕುಳಿತ ಗುರುದಾಸ ಮಹಾರಾಜ ಅವರ ವಿಡಿಯೋ(Viral Video)
“ನಾನೇನು ಪವಾಡ ಪುರುಷನಲ್ಲ. ಶಿವರಾತ್ರಿ ದಿನದಂದು ಆಶ್ರಮದಲ್ಲಿ ಸಮುದಾಯದ ಕಾರ್ಯಕ್ರಮವಿತ್ತು. ಆಗ ನಾನು ಕಾವಲಿ ಮೇಲೆ ಕುಳಿತಿದ್ದೆ. ಭಕ್ತರು ಯಾರೋ ಅದರ ವಿಡಿಯೊವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ನನ್ನಲ್ಲಿ ದೈವೀಕ ಶಕ್ತಿ ಸೇರಿಕೊಂಡಾಗ ನಾನು ಎಲ್ಲಿ ಕೂರುತ್ತೇನೆ ಎನ್ನುವುದು ನನಗೇ ಗೊತ್ತಾಗುವುದಿಲ್ಲ. ನಾನು ಗೌತಮ ಬುದ್ಧ, ರಾಮಚಂದ್ರ, ಜೀಸಸ್ ಕ್ರೈಸ್ಟ್, ಬಾಬಾ ಕ್ರುಖ್ನಾಂಜಿಯ ಅನುಯಾಯಿ. ನಾನೇನು ಪವಾಡ ಬಾಬಾ ಅಲ್ಲ. ಯಾರೂ ನನ್ನನ್ನು ಬಾಬಾ ಎಂದು ಕರೆಯಬೇಡಿ” ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Viral Video : ಟ್ರಕ್‌ಗೆ ಗುದ್ದಿದರೂ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರ! ವೈರಲ್ ಆಯ್ತು ವಿಡಿಯೊ
ಈ ಬಗ್ಗೆ ಮಹಾರಾಷ್ಟ್ರದ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಕಾರ್ಯದರ್ಶಿಗಳಾದ ಹರೀಶ್ ಕೇದಾರವವ ಅವರೂ ಮಾತನಾಡಿದ್ದು, “ಅವರು ಕಾವಲಿ ಮೇಳೆ ಕುಳಿತಿದ್ದು ಪವಾಡವೇನಲ್ಲ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಬೇಕೆಂದು ಕೇಳುತ್ತೇನೆ” ಎಂದು ಹೇಳಿದ್ದಾರೆ.