Site icon Vistara News

Viral Video : ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಮ್ಮನನ್ನು ತಬ್ಬಿಕೊಂಡ ಮರಿ ಕೋತಿ; ಇದು ಕರುಳು ಹಿಂಡುವ ವಿಡಿಯೊ

#image_title

ಬೆಂಗಳೂರು: ರಸ್ತೆ ಅಪಘಾತಗಳಲ್ಲಿ ಹೆಚ್ಚು ಬಲಿಯಾಗುವುದೆಂದರೆ ಅದು ಪ್ರಾಣಿಗಳು. ಪ್ರಾಣಿಗಳಿಗೆ ವಾಹನದಿಂದ ಡಿಕ್ಕಿ ಹೊಡೆಸಿ, ಅದನ್ನು ತಿರುಗಿಯೂ ನೋಡದೆ ಹೋಗುವ ಕೆಟ್ಟ ಮನಸ್ಥಿತಿಗೆ ಮಾನವರು ತಲುಪಿಬಿಟ್ಟಿದ್ದಾರೆ. ಅದೇ ರೀತಿ ಅಪಘಾತವಾಗಿ ಸಾವನ್ನಪ್ಪಿದ ಕೋತಿಯೊಂದನ್ನು ಅದರ ಮರಿ ತಬ್ಬಿಕೊಂಡು ಎಬ್ಬಿಸಲು ಯತ್ನಿಸುವ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಕರುಳು ಹಿಂಡುವಂತಿರುವ ಆ ವಿಡಿಯೊ ವೈರಲ್ (Viral Video) ಆಗಿದೆ.

ಇದನ್ನೂ ಓದಿ: Viral Video : ಅಳುತ್ತಲೇ ವರದಿ ಮಾಡಿದ ಪತ್ರಕರ್ತೆ; ಕ್ಷಮಿಸಿ ಬಿಡಿ ಎಂದು ಕೇಳಿಕೊಂಡ ವಿಡಿಯೊ ವೈರಲ್
ಈ ವಿಡಿಯೊ ಅಸ್ಸಾಂನದ್ದು ಎನ್ನಲಾಗಿದೆ. ಅರಣ್ಯ ಅಧಿಕಾರಿಯಾಗಿರುವ ಸುಶಾಂತ್ ನಂದ ಅವರು ವಿಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೋತಿಯೊಂದು ರಸ್ತೆ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದೆ. ಅದರ ಮರಿಯು ತಾಯಿಯನ್ನು ತಬ್ಬಿ ಹಿಡಿದುಕೊಳ್ಳುತ್ತಿದೆ. ಮುಖವನ್ನು ಹಿಡಿದುಕೊಳ್ಳುತ್ತಿದೆ. ಸುತ್ತಲೂ ನಿಂತ ಜನರನ್ನು ಕಂಡು ಭಯಗೊಂಡು, “ಅಮ್ಮಾ, ಎದ್ದೇಳು ಹೋಗೋಣ” ಎನ್ನುವಂತೆ ಕೂಗುತ್ತಿದೆ.


ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅನೇಕರು ವಿಡಿಯೊವನ್ನು ತಮ್ಮ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. “ಕಣ್ಣೀರು ತರಿಸುವ ವಿಡಿಯೊ” ಎಂದು ಕಮೆಂಟ್ ಮಾಡಲಾರಂಭಿಸಿದ್ದಾರೆ.

Exit mobile version