ನವದೆಹಲಿ: ಕಿಚಡಿ ಭಾರತದ ಪ್ರಸಿದ್ಧ ಖಾದ್ಯಗಳಲ್ಲಿ ಒಂದು. ತರೇವಾರು ಕಿಚಡಿಗಳನ್ನು ಮಾಡುವುದರಲ್ಲಿ ಭಾರತೀಯರು ನಿಪುಣರು. ಈ ಕಿಚಡಿಯ ಖ್ಯಾತಿಯ ಎಷ್ಟರ ಮಟ್ಟಿಗೆ ಹೆಚ್ಚಿದೆಯೆಂದರೆ ಪ್ರಸಿದ್ಧ ಉದ್ಯಮಿ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕೂಡ ಕಿಚಡಿ ತಯಾರಿಸಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾರ್ಗದರ್ಶನದಲ್ಲಿ ಬಿಲ್ ಗೇಟ್ಸ್ ಕಿಚಡಿ ತಯಾರಿಸಿ ಸೇವಿಸಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral News: 128 ವರ್ಷಗಳ ಹಿಂದೆ ಮುಳುಗಿದ್ದ ಹಡಗಿನ ಅವಶೇಷ ಪತ್ತೆ; ರಕ್ಷಣೆಗಿದ್ದ ಲೈಫ್‌ಬೋಟ್ ಕೂಡ ಮುಳುಗಿತ್ತು!
ಈ ವಿಡಿಯೊವನ್ನು ಸ್ವತಃ ಸ್ಮೃತಿ ಇರಾನಿ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಾಣಲಿ ಒಂದಕ್ಕೆ ಸ್ಮೃತಿ ಇರಾನಿ ಅವರು ಎಣ್ಣೆ ಹಾಕುತ್ತಾರೆ. ಬಿಲ್ ಗೇಟ್ಸ್ ಅವರು ಅದಕ್ಕೆ ಸಾಸಿವೆ ಹಾಕುತ್ತಾರೆ. ಆ ಒಗ್ಗರಣೆಯನ್ನು ಸ್ಮೃತಿ ರಾಗಿಯ ಕಿಚಡಿಗೆ ಹಾಕುತ್ತಾರೆ. ಅದರಲ್ಲಿ ಬಿಲ್ ಗೇಟ್ಸ್ ಹುಟ್ಟಾಡಿಸುತ್ತಾರೆ. ನಂತರ ಸ್ಮೃತಿ ಅವರು ಒಂದು ಚಿಕ್ಕ ಬೌಲ್‌ನಲ್ಲಿ ಕಿಚಡಿಯನ್ನು ಹಾಕಿ ಬಿಲ್ ಗೇಟ್ಸ್‌ಗೆ ಸವಿಯಲು ಕೊಡುತ್ತಾರೆ.
ಈ ವಿಡಿಯೊ ಕ್ಲಿಪ್ ಪೋಷಣೆಯ ಮೂಲಕ ಸಬಲೀಕರಣ ಅಭಿಯಾನದ್ದು ಎನ್ನಲಾಗಿದೆ. ಈ ವಿಡಿಯೊ ಹಂಚಿಕೊಂಡಿರುವ ಸಚಿವೆ, “ಭಾರತದ ಪ್ರಸಿದ್ಧ ಖಾದ್ಯವನ್ನು ಮತ್ತು ಅದರ ಪೋಷಣೀಯ ಲಕ್ಷಣವನ್ನು ಗುರುತಿಸಿರುವುದು. ಬಿಲ್ ಗೇಟ್ಸ್ ಅವರು ಶ್ರೀ ಅನ್ ಕಿಚಡಿಗೆ ಒಗ್ಗರಣೆ ಹಾಕಿದಾಗ” ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಓಡಾಡುತ್ತಿದೆ. ಅನೇಕರು ವಿಡಿಯೊವನ್ನು ಮೆಚ್ಚಿ, ಹಂಚಿಕೊಂಡಿದ್ದಾರೆ. ಕಿಚಡಿಗೆ ಒಗ್ಗರಣೆ ಹಾಕಿದಾಗ ಸಿಗುವ ಮಜವೇ ಬೇರೆ ಎಂದು ಅನೇಕರು ಚರ್ಚೆ ಮಾಡಲಾರಂಭಿಸಿದ್ದಾರೆ. ಬಿಲ್ ಗೇಟ್ಸ್ ಮತ್ತು ಸ್ಮೃತಿ ಕಿಚಡಿ ತಯಾರಿಸಿದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.