Site icon Vistara News

Viral News: ಬಹಳ ವಿಶೇಷವಾಗಿ ಪ್ರಪೋಸ್‌ ಮಾಡಿದ ಯುವಕ; ಕಣ್ಣೀರಿಟ್ಟ ಯುವತಿ ಮಾಡಿದ್ದೇನು?

#image_title

ಬೆಂಗಳೂರು: ಪ್ರತಿಯೊಬ್ಬರ ಬದುಕಿನಲ್ಲೂ ಪ್ರೇಮ ನಿವೇದನೆ ಎನ್ನುವುದು ದೊಡ್ಡದೊಂದು ಸಾಧನೆಯಿದ್ದಂತೆ. ಎಲ್ಲರಿಗಿಂತ ವಿಭಿನ್ನವಾಗಿ, ವಿಶೇಷವಾಗಿ ಪ್ರಪೋಸ್‌ ಮಾಡಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದೇ ರೀತಿ ಇಲ್ಲೊಬ್ಬ ಯುವಕ ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral News) ಆಗಿದೆ.

ಇದನ್ನೂ ಓದಿ: Viral Video : ಸಚಿವೆ ಸ್ಮೃತಿ ಇರಾನಿ ಜತೆ ಸೇರಿಕೊಂಡು ಕಿಚಡಿ ತಯಾರಿಸಿದ ಬಿಲ್‌ ಗೇಟ್ಸ್‌!

ಯುವಕ ಮತ್ತು ಯುವತಿ ಇಬ್ಬರೂ ಚಿತ್ರಕಲೆ ಕಲಾವಿದರು. ಇಬ್ಬರೂ ಚಿತ್ರವನ್ನು ಬರೆದಿದ್ದು, ಅದನ್ನು ಸಭಾಂಗಣದಲ್ಲಿ ಸೇರಿದ್ದ ಜನರಿಗೆ ತೋರಿಸಲೆಂದು ವೇದಿಕೆ ಮೇಲೆ ಹತ್ತುತ್ತಾರೆ. ಇಬ್ಬರೂ ಒಂದೇ ಸಮಯದಲ್ಲಿ ತಮ್ಮ ಚಿತ್ರವನ್ನು ಜನರೆದುರು ತೋರಿಸುತ್ತಾರೆ. ಯುವತಿಯು ಸುಂದರವಾದ ಸೂರ್ಯಾಸ್ತದ ಚಿತ್ರ ಬರೆದಿದ್ದರೆ, ಯುವಕ “ವಿಲ್‌ ಯು ಮ್ಯಾರಿ ಮಿ?” ಎಂದು ದೊಡ್ಡದಾಗಿ ಬರೆದಿದ್ದಾನೆ. ಇದನ್ನು ಕಂಡೊಡನೆ ಸಭಿಕರೆಲ್ಲರೂ ಯುವಕನಿಗೆ ಜೋರಾಗಿ ಪ್ರೋತ್ಸಾಹಿಸಲಾರಂಭಿಸುತ್ತಾರೆ.

ಇದನ್ನೂ ಓದಿ: Shah Rukh Khan: ʼಪಠಾಣ್‌ʼ ಕುರಿತು ಶಾರುಖ್‌ ಖಾನ್‌ಗೆ ಇಷ್ಟವಾಗದ ಅಂಶ ಯಾವುದು? ಅವರು ಹೇಳಿದ್ದೇನು?

ಆ ಕ್ಷಣಕ್ಕೆ ಯುವತಿ ಯುವಕ ಬರೆದಿರುವ ಚಿತ್ರವನ್ನು ನೋಡುತ್ತಾಳೆ. ನೋಡಿದೊಡನೆ ಸಂತಸವಾಗಿ ಕಣ್ಣೀರು ಹಾಕಿ, ಕುಣಿದಾಡಲು ಆರಂಭಿಸುತ್ತಾಳೆ. ಆಗ ಯುವಕ ಮಂಡಿಯೂರಿ ಕುಳಿತು ಉಂಗುರವನ್ನು ಯುವತಿ ಮುಂದೆ ಹಿಡಿದು, ಪ್ರೀತಿ ಹೇಳಿಕೊಳ್ಳುತ್ತಾನೆ. ಆಕೆ ಖುಷಿಯಿಂದ ಪ್ರೀತಿಯನ್ನು ಒಪ್ಪಿ, ಉಂಗುರ ತೊಟ್ಟಿಕೊಳ್ಳುತ್ತಾಳೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ ಆಗಿದೆ. ಜನರು ನವ ಪ್ರೇಮಿಗಳಿಗೆ ಶುಭಾಶಯ ಹೇಳಲಾರಂಭಿಸಿದ್ದಾರೆ.

Exit mobile version