ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೋ ಕೆಟ್ಟ ಕೆಟ್ಟ ವಿಚಾರಗಳು ಹರಿದಾಡುತ್ತಿರುತ್ತವೆ. ಆದರೆ ಎಲ್ಲೋ ಕೆಲವು ಎನ್ನುವಂತೆ ಒಳ್ಳೆಯ ವಿಚಾರಗಳು, ವಿಡಿಯೊಗಳು ಕೂಡ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ವೈರಲ್ ಆಗುತ್ತವೆ. ಅಂತಹ ಒಂದು ಒಳ್ಳೆಯ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. 13 ವರ್ಷದ ಬಾಲಕನೊಬ್ಬ ಹತ್ತಾರು ಜೀವಗಳನ್ನು ಉಳಿಸಿದ ವಿಡಿಯೊ ಅದಾಗಿದೆ.
ಇದನ್ನೂ ಓದಿ: Viral Photo: ಗಾಂಧೀಜಿ, ಅಂಬೇಡ್ಕರ್, ನೇತಾಜಿ ಅವರುಗಳ ಸೆಲ್ಫೀ ಇಲ್ಲಿದೆ ನೋಡಿ!
ಶಾಲೆಯೊಂದರ ಬಸ್ಸಿನಲ್ಲಿ ಹತ್ತಾರು ಮಕ್ಕಳು ಹೋಗುತ್ತಿರುತ್ತಾರೆ. ಮಾಮೂಲಾಗಿ ಬಸ್ಸನ್ನು ಚಲಾಯಿಸುತ್ತಿದ್ದ ಚಾಲಕನಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗುತ್ತದೆ. ಆಗ ಬಸ್ಸಿನಲ್ಲಿದ್ದ ಮಕ್ಕಳೆಲ್ಲರು ಗಾಬರಿಯಾಗುತ್ತಾರೆ. ಸಮಯಪ್ರಜ್ಞೆ ಮೆರೆದ ಬಾಲಕನೊಬ್ಬ ಓಡಿ ಬಂದು ಬಸ್ಸನ್ನು ಹಿಡಿತಕ್ಕೆ ತೆಗೆದುಕೊಂಡು ಬಸ್ಸನ್ನು ನಿಲ್ಲಿಸುತ್ತಾನೆ. ಹೃದಯಾಘಾತವಾಗಿದ್ದ ಚಾಲಕನಿಗೆ ಎದೆ ಒತ್ತಿ ಸಿಪಿಆರ್ ಮಾಡುವುದಕ್ಕೂ ಯತ್ನಿಸುತ್ತಾನೆ.
ಈ ಎಲ್ಲ ದೃಶ್ಯಗಳು ಬಸ್ಸಿನಲ್ಲಿದ್ದ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುತ್ತದೆ. ಈ ಘಟನೆ 2013ರಲ್ಲಿ ನಡೆದಿದ್ದು. ಆಗ ಈ ವಿಡಿಯೊ ಎಲ್ಲೆಡೆ ಹರಿದಾಡಿ ವೈರಲ್ ಆಗಿತ್ತು. ಅದೇ ವಿಡಿಯೊವನ್ನು ಗ್ರೇಟ್ ವಿಡಿಯೊಸ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮಾರ್ಚ್ 22ರಂದು ಹಂಚಿಕೊಳ್ಳಲಾದ ಈ ವಿಡಿಯೊ ಈಗಾಗಲೇ 1.4 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ವಿಡಿಯೊವನ್ನು ಲಕ್ಷಾಂತರ ಮಂದಿ ಮೆಚ್ಚುಕೊಂಡಿದ್ದು, ತಮ್ಮ ವಾಲ್‌ಗಳಲ್ಲಿ ಹಂಚಿಕೊಂಡಿದ್ದಾರೆ. “ಈ ಬಾಲಕ ನಿಜವಾದ ಹೀರೋ. ಹಲವರ ಪ್ರಾಣ ರಕ್ಷಿಸಿದ ಈ ಬಾಲಕನಿಗೆ ಪ್ರಶಸ್ತಿ ಕೊಡಬೇಕು” ಎನ್ನುವ ಹಲವಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.
ಈ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ 2013ರಲ್ಲೇ ಹಂಚಿಕೊಳ್ಳಲಾಗಿತ್ತು. ವಿದೇಶಿ ಮಾಧ್ಯಮಗಳು ವಿಡಿಯೊವನ್ನು ಹಂಚಿಕೊಂಡಿದ್ದು, ಎಲ್ಲರ ಪ್ರಾಣ ರಕ್ಷಿಸಿದ್ದ ಬಾಲಕನನ್ನು ಸಂದರ್ಶನ ಕೂಡ ಮಾಡಿದ್ದವು.