ಹೊಸದಿಲ್ಲಿ: ಇತ್ತೀಚಿನ ಕೆಲವು ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ(Electric Scooter battery) ಸ್ಫೋಟಗೊಂಡು ಅನಾಹುತಗಳು ಸಂಭವಿಸುತ್ತಿರುವ ಬಗ್ಗೆ ಆಗಾಗ ವರದಿ ಆಗುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಲಿಫ್ಟ್‌ನಲ್ಲಿ ಲೀಥಿಯಂ ಬ್ಯಾಟರಿ(lithium battery) ಸ್ಫೋಟಗೊಂಡು ಯುವಕನೋರ್ವ ದಾರುಣವಾಗಿ ಮೃತಪಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗುತ್ತಿದೆ.
The lithium battery suddenly caught fire in the elevator and the man was reduced to ashes.
— Vuslat Bayoglu (@VuslatBayoglu) July 25, 2024
Electric scooters have also lithium batteries. One has to be very careful using them in closed spaces. pic.twitter.com/2SrMJqohpX
ವಸ್ಲಟ್ ಬಯೋಗ್ಲು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಯುವಕನೋರ್ವ ಕೈಯಲ್ಲಿ ಲೀಥಿಯಂ ಬ್ಯಾಟರಿ ಹಿಡಿದು ಲಿಫ್ಟ್ ಒಳಗೆ ಹೋಗುತ್ತಾನೆ. ಲಿಫ್ಟ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ತಕ್ಷಣ ಸ್ಫೋಟವಾಗುತ್ತದೆ. ಇಡೀ ಲಿಫ್ಟ್‌ನಲ್ಲಿ ಹೊಗೆ ಮತ್ತು ಬೆಂಕಿ ಕಾಣಿಸಿಕೊಳ್ಳುತ್ತದೆ. ಲಿಫ್ಟ್‌ನ ಹೊರಗಿದ್ದವರು ಅಗ್ನಿ ಶಾಮಕ ಸಾಧನಗಳನ್ನು ಹಿಡಿದು ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕ್ಷಣಾರ್ಧದಲ್ಲಿ ಯುವಕ ಸುಟ್ಟು ಕರಕಲಾಗಿರುವ ಘಟನೆ ವರದಿಯಾಗಿದೆ.
ಇನ್ನು ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್, ಕಾರು ಬಳಸುವವರಿಗೆ ಇದೊಂದು ದೊಡ್ಡ ಶಾಕ್ ಆಗಿದೆ. ಇಂತಹ ಅಪಾಯಕಾರಿ ಬ್ಯಾಟರಿಗಳ ಬಗ್ಗೆ ಜನ ಅತ್ಯಂತ ಎಚ್ಚರದಿಂದ ಇರಬೇಕು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಇಕ್ಕಟ್ಟಾದ ಸ್ಥಳಗಳಲ್ಲಿ ಇಂತಹ ಬ್ಯಾಟರಿಗಳನ್ನು ಬಳಸುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: Sharia Law: “ಅಮೆರಿಕನ್ನರ ಮೇಲೂ ಷರಿಯಾ ಕಾನೂನು ಹೇರಲಾಗುತ್ತದೆ…”; ಸಂಚಲನ ಮೂಡಿಸಿದ ವೈರಲ್ ವಿಡಿಯೋ
ಕೆಲವು ತಿಂಗಳ ಹಿಂದೆ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು (Electric scooter) ಮನೆಯೊಂದು ಬೆಂಕಿಗೆ (Fire Accident) ಆಹುತಿಯಾಗಿತ್ತು. ಧಾರವಾಡದ ಕಲಘಟಗಿ ತಾಲೂಕಿನ ಬಿ.ಗುಡಿಹಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಎಲೆಕ್ಟ್ರಿಕ್ ಬೈಕ್ ಬ್ಯಾಟರಿಯನ್ನು ಚಾರ್ಜಿಂಗ್‌ಗೆ ಹಾಕಲಾಗಿತ್ತು. ಈ ವೇಳೆ ಬ್ಯಾಟರಿ ಸ್ಫೋಟಗೊಂಡು ಬೈಕ್ ಹೊತ್ತಿ ಉರಿದಿದೆ. ಈ ವೇಳೆ ಬೆಂಕಿ ಕಿಡಿ ಮನೆಗೆ ಆವರಿಸಿ ಕ್ಷಣಾರ್ಧದಲ್ಲಿ ಹೊತ್ತಿಕೊಂಡಿದೆ. ಬಸಯ್ಯ ಹಿರೇಮಠ್ ಎಂಬುವವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಬೆಂಕಿ ಕಾಣಿಸಿಕೊಳ್ಳುವಾಗಲೇ ಕುಟುಂಬಸ್ಥರು ಹೊರಗೆ ಓಡಿ ಹೋಗಿದ್ದಾರೆ. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದರು. ರಾಜ್ಯದಲ್ಲಿ ಇಂತಹ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ.