Site icon Vistara News

Viral Video | ಕಾಮ್‌ ಡೌನ್‌ ಹಾಡಿಗೆ ಹೆಜ್ಜೆ ಹಾಕಿದ ಆಫ್ರಿಕಾದ ಮಕ್ಕಳು; ವೈರಲ್‌ ಆಯ್ತು ವಿಡಿಯೊ

ಬೆಂಗಳೂರು: ʼಕಾಮ್‌ ಡೌನ್‌ʼ ಹೆಸರಿನ ಇಂಗ್ಲಿಷ್‌ ಹಾಡೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಇನ್‌ಸ್ಟಾಗ್ರಾಂ ರೀಲ್ಸ್‌ಗಳಲ್ಲಂತೂ ಎಲ್ಲರೂ ಈ ಹಾಡಿಗೆ ನೃತ್ಯ ಮಾಡುವವರೇ ಆಗಿದ್ದಾರೆ. ನೈಜೀರಿಯಾ ಮೂಲದ ಗಾಯಕ ರೆಮಾ ಮತ್ತು ಅಮೆರಿಕದ ಗಾಯಕಿ ಸಲೆನಾ ಗೊಮೆಜ್‌ ಹಾಡಿರುವ ಈ ಹಾಡಿಗೆ ಇದೀಗ ಆಫ್ರಿಕಾದ ಮಕ್ಕಳೂ ಹೆಜ್ಜೆ ಹಾಕಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಇದನ್ನೂ ಓದಿ: Viral Pic | ಸ್ವಿಗ್ಗಿ ಬ್ಯಾಗ್‌ ಹೆಗಲಿಗೇರಿಸಿ ಬುರ್ಖಾ ಧರಿಸಿದ ಮಹಿಳೆಯೀಗ ಇಂಟರ್ನೆಟ್‌ ಸೆನ್ಸೇಶನ್!

ಮೂರು ಮಕ್ಕಳು ರಸ್ತೆಯ ಮೇಲೆ ನಿಂತು ಅದ್ಭುತವಾಗಿ ʼಕಾಮ್‌ ಡೌನ್‌ʼ ಹಾಡಿಗೆ ನೃತ್ಯ ಮಾಡಿದ್ದಾರೆ. ಅವರಿಗಿಂತ ಸ್ವಲ್ಪ ಹಿಂದೆ ಎತ್ತರದ ಸ್ಥಳದಲ್ಲಿ ನಿಂತ ಹಲವು ಪುಟಾಣಿಗಳೂ ಕೂಡ ಈ ಹಾಡಿಗೆ ಹೆಜ್ಜೆ ಹಾಕುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಮುಂದೆ ನಿಂತಿರುವ ಮಕ್ಕಳ ಮುಖಭಾವನೆಯು ನೆಟ್ಟಿಗರ ಮನಸ್ಸನ್ನು ಗೆದ್ದಿದೆ.


ಈ ವಿಡಿಯೊವನ್ನು ಮಸಾಕಾ ಕಿಡ್ಸ್‌ ಆಫ್ರಿಕಾನಾ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೆಲವೇ ದಿನಗಳಲ್ಲಿ ಲಕ್ಷಾಂತರ ಜನರು ವಿಡಿಯೊ ವೀಕ್ಷಿಸಿದ್ದಾರೆ. ವಿಡಿಯೊಗೆ ಲೈಕ್‌ ಒತ್ತಲಾರಂಭಿಸಿದ್ದಾರೆ. “ಈ ವಿಡಿಯೊದಲ್ಲಿರುವ ಒಂದೇ ಒಂದು ಸಮಸ್ಯೆ ಎಂದರೆ ಅದು ಈ ವಿಡಿಯೊ ಕೊನೆಯಾಗಿಬಿಡುವುದು”, “ಮುಂದಿರುವ ಪುಟಾಣಿಗಳ ಜತೆ ಹಿಂದಿರುವ ಪುಟಾಣಿಗಳೂ ಅದ್ಭುತವಾಗಿ ನೃತ್ಯ ಮಾಡಿದ್ದಾರೆ” ಎನ್ನುವ ಹಲವಾರು ಕಾಮೆಂಟ್‌ಗಳು ಈ ವಿಡಿಯೊಗೆ ಬಂದಿವೆ.

ಇದನ್ನೂ ಓದಿ: Viral tweet | ʼಭೂಮಿ ಮೇಲಿನ ಸ್ವರ್ಗʼ ಎಂದು ಫೋಟೋ ಶೇರ್ ಮಾಡಿದ ರೈಲ್ವೇ ಸಚಿವ, ಎಲ್ಲಿಯದು?

ಮಸಾಕಾ ಕಿಡ್ಸ್‌ ಆಫ್ರಿಕಾನಾ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಮಕ್ಕಳ ಇನ್ನಷ್ಟು ನೃತ್ಯಗಳನ್ನು ನೀವು ನೋಡಬಹುದಾಗಿದೆ. ಈ ಖಾತೆಗೆ 60 ಲಕ್ಷಕ್ಕೂ ಅಧಿಕ ಹಿಂಬಾಲಕರೂ ಇದ್ದಾರೆ.

Exit mobile version