Site icon Vistara News

Viral Video : ರಕ್ಷಿಸಿದವನ ತೋಳು ಬಿಡದ ಬೆಕ್ಕು; ವೈರಲ್ ಆಗ್ತಿದೆ ಈ ವಿಡಿಯೊ

#image_title

ಟರ್ಕಿ: ಪ್ರಾಣಿಗಳಿಗೆ ನಿಯತ್ತು ಜಾಸ್ತಿ ಎನ್ನುವ ಮಾತಿದೆ. ಮನುಷ್ಯ ಸಹಾಯವನ್ನು ಮರೆತುಬಿಡುತ್ತಾನೆ, ಆದರೆ ಪ್ರಾಣಿಗಳು ಎಂದಿಗೂ ಮರೆಯುವುದಿಲ್ಲ ಎನ್ನುವುದನ್ನು ಕೇಳಿರುತ್ತೀರಿ. ಅದಕ್ಕೆ ಸಾಕ್ಷಿಯಂತಿದೆ ಈ ವಿಡಿಯೊ. ಭೂಕಂಪನದಿಂದಾಗಿ ಉರುಳಿದ್ದ ಕಟ್ಟಡದಡಿಗೆ ಸಿಲುಕಿದ್ದ ಬೆಕ್ಕೊಂದು ತನ್ನನ್ನು ರಕ್ಷಿಸಿದ ವ್ಯಕ್ತಿಯ ತೋಳು ಬಿಡದ ವಿಶೇಷ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.

ಇದನ್ನೂ ಓದಿ: Viral Video: ಕರಾಚಿ ಪೊಲೀಸ್​ ಮುಖ್ಯಸ್ಥರ ಕಚೇರಿಯನ್ನು ಅತಿಕ್ರಮಿಸಿದ್ದ ಐವರು ಟಿಟಿಪಿ ಉಗ್ರರ ಹತ್ಯೆಗೈದ ಪಾಕ್​ ಭದ್ರತಾ ಪಡೆ
ಬೆಕ್ಕೊಂದು ವ್ಯಕ್ತಿಯ ತೋಳಿನ ಮೇಲೆ ಕುಳಿತಿದೆ. ಎಷ್ಟು ಹೊತ್ತಾದರೂ ತೋಳಿನಿಂದ ಇಳಿಯದ ಬೆಕ್ಕು ಆತನ ಮುಖದ ಹತ್ತಿರ ಮುಖ ತೆಗೆದುಕೊಂಡು ಹೋಗಿ ಪ್ರೀತಿ ಮಾಡುತ್ತದೆ. ಅಲ್ಲಿಯೇ ಕುಳಿತುಕೊಂಡು ಆತ ಮೈ ಸವರುವುದನ್ನು ಆನಂದಿಸಲಾರಂಭಿಸುತ್ತದೆ. ಈ ದೃಶ್ಯವಿರುವ ವಿಡಿಯೊವನ್ನು ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವರ ಸಲಹೆಗಾರರಾಗಿರುವ ಆಂಟನ್ ಗೆರಾಶ್ಚೆಂಕೊ ಅವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


36 ಸೆಕೆಂಡುಗಳಷ್ಟು ಕಾಲವಿರುವ ಈ ವಿಡಿಯೊವನ್ನು ಗುರುವಾರದಂದು ಹಂಚಿಕೊಳ್ಳಲಾಗಿದೆ. “ಟರ್ಕಿಯಲ್ಲಿ ಬೆಕ್ಕನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ. ಅದು ಈಗ ತನ್ನ ರಕ್ಷಕನ ತೋಳನ್ನು ಬಿಟ್ಟು ಹೋಗಲು ನಿರಾಕರಿಸುತ್ತಿದೆ” ಎಂದು ವಿಡಿಯೊಗೆ ಕ್ಯಾಪ್ಶನ್ ಕೊಡಲಾಗಿದೆ. ಈ ವಿಡಿಯೊ ಈಗಾಗಲೇ 2.4 ಕೋಟಿಗೂ ಅಧಿಕ ಮಂದಿಯಿಂದ ವೀಕ್ಷಿಸಲ್ಪಟ್ಟಿದೆ. ಲಕ್ಷಾಂತರ ಮಂದಿ ವಿಡಿಯೊವನ್ನು ಲೈಕ್ ಮಾಡಿದ್ದು, ಹಂಚಿಕೊಂಡಿದ್ದಾರೆ. “ಮನುಷ್ಯನಿಗಿಂತ ಪ್ರಾಣಿಯೇ ಲೇಸು” ಎಂದು ಕಾಮೆಂಟ್ ಮಾಡಲಾರಂಭಿಸಿದ್ದಾರೆ.

Exit mobile version