ಫ್ರ್ಯಾಂಕ್ ಮಾಡುವಂತಹ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಹರಿದಾಡುತ್ತಿರುತ್ತವೆ. ವ್ಯಕ್ತಿಗಳು ಎಲ್ಲೆಂದರಲ್ಲಿ ಜನರನ್ನು ಫ್ರ್ಯಾಂಕ್ ಮಾಡುತ್ತಾ ಹೆದರಿಸಿ ತಮಾಷೆ ಮಾಡುತ್ತಾರೆ. ಇದು ಅನೇಕ ವೀಕ್ಷಕರಿಗೆ ಖುಷಿಯನ್ನು ನಿಡುತ್ತದೆ ನಿಜ. ಆದರೆ ಅವರ ಈ ತಮಾಷೆ ಅತಿರೇಕಕ್ಕೆ ಹೋಗಬಾರದು. ಇದರಿಂದ ಸಾರ್ವಜನಿಕರು ಕೋಪಗೊಳ್ಳಬಹುದು. ಆದರೆ ಇತ್ತೀಚೆಗೆ ಫ್ರ್ಯಾಂಕ್ ಮಾಡಲು ಕ್ಲೋಯಿ ಲೋಪೆಜ್ ಎಂಬ ಮಹಿಳೆ ತನ್ನ ಒಳ ಉಡುಪುಗಳನ್ನು ತೆಗೆದು ಮರ್ಕಡೋನಾ ಸೂಪರ್ ಮಾರ್ಕೆಟ್‍ನಲ್ಲಿ ಬ್ರೆಡ್ ನಡುವೆ ಇಡುತ್ತಿರುವ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೊದಲ್ಲಿ ಲೋಪೆಜ್ ಬ್ರೆಡ್ ವಿಭಾಗದಲ್ಲಿ ನಿಂತು, ಆಕೆ ತನ್ನ ಒಳ ಉಡುಪುಗಳನ್ನು ತೆಗೆದು, ಅದನ್ನು ಬ್ರೆಡ್ ಟ್ರೇಯಲ್ಲಿ ಇರಿಸಿ, ನಂತರ ತನ್ನ ಟ್ರಾಲಿಯೊಂದಿಗೆ ಹೊರಟು ಹೋಗುವಾಗ ಕ್ಯಾಮೆರಾವನ್ನು ನೋಡಿ ನಗುತ್ತಿರುವುದನ್ನು ಕಾಣಬಹುದು. ವೈರಲ್ ಆಗಿರುವ ಈ ವಿಡಿಯೊವನ್ನು ಕಂಡು ಅನೇಕರು ಅಸಹ್ಯವನ್ನು ವ್ಯಕ್ತಪಡಿಸಿದ್ದಾರೆ. ಮತ್ತು ವೀಕ್ಷಕರು ಆಕೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಕರೆ ನೀಡಿದ್ದಾರೆ. ಸೂಪರ್ ಮಾರ್ಕೆಟ್‍ನಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಮತ್ತು ಗ್ರಾಹಕರ ಆರೋಗ್ಯಕ್ಕೆ ಆದ್ಯತೆ ನೀಡದಿದ್ದರೆ ಮರ್ಕಡೋನಾ ಸೂಪರ್ ಮಾರ್ಕೆಟ್ ಅನ್ನು ಬಹಿಷ್ಕರಿಸುವುದಾಗಿ ಕೆಲವರು ಬೆದರಿಕೆ ಹಾಕಿದ್ದಾರೆ.
Una "influencer" se quita las bragas en el Mercadona y las esconde en el pan para unos cuántos likes… Pienso que @Mercadona debe denunciar a ésta cerda, ¿Alguien más? pic.twitter.com/4efGUDnSQu
— Muy.Mona/🇪🇸💚 (@Capitana_espana) August 13, 2024
ಮರ್ಕಡೋನಾ ಮಹಿಳೆಗೆ ಈ ಬಗ್ಗೆ ಎಚ್ಚರಿಕೆ ನೀಡಿ, ಅವರು ತಮ್ಮ ಗ್ರಾಹಕರ ಆರೋಗ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಮಾಹಿತಿ ನೀಡದಿದ್ದರೆ, ತಾವು ಮತ್ತೆ ಮರ್ಕಡೋನಾದಿಂದ ಬ್ರೆಡ್ ಖರೀದಿಸುವುದಿಲ್ಲ ಮತ್ತು ತಾವು ಅಂತಹ ಮಹಿಳೆ ಯಾವುದೇ ಸೂಪರ್ ಮಾರ್ಕೆಟ್, ಡಿಪಾರ್ಟ್ಮೆಂಟ್ ಸ್ಟೋರ್ ಅಥವಾ ಶಾಪಿಂಗ್ ಸೆಂಟರ್ ಗೆ ಪ್ರವೇಶಿಸುವುದನ್ನು ಜೀವನಪರ್ಯಂತ ನಿಷೇಧಿಸುತ್ತೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಜನರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಈ ಮೀನಿನ ದೇಹದಲ್ಲಿದೆ 860 ವೋಲ್ಟ್ ವಿದ್ಯುತ್! ಇದನ್ನು ತಿನ್ನಲು ಹೋದ ಮೊಸಳೆ ಕತೆ ಏನಾಯ್ತು ನೋಡಿ!
ಟಿಕ್‍ಟಾಕ್‍ನಲ್ಲಿ ವಯಸ್ಕರಿಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ರೀಲ್ಸ್ ಮಾಡಲು ಹೆಸರುವಾಸಿಯಾದ ಲೋಪೆಜ್, ಈ ಕೃತ್ಯವನ್ನು ಮಾಡಿದ್ದಾರೆ ಎಂದು ವರದಿಯಾಗಿದೆ. ಮರ್ಕಡೋನಾ ಪ್ರಸ್ತುತ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಲೋಪೆಜ್ ಅವರ ಈ ನಡವಳಿಕೆಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ ಎನ್ನಲಾಗಿದೆ.