Site icon Vistara News

Viral video: ಈ ಚಿರತೆ ನಿಮ್ಮನ್ನು ತಿನ್ನಲ್ಲ, ಬದಲಾಗಿ, ನೀವು ಚಿರತೆಯನ್ನು ತಿನ್ನಬಹುದು!

chocolate leopard

ಈ ಚಿರತೆ ಎಲ್ಲ ಕಲಾಕೃತಿಗಳಂತಲ್ಲ. ಈ ಚಿರತೆ ನಮ್ಮನ್ನು ತಿನ್ನಲು ಬರುವುದಿಲ್ಲ ಎಂಬ ಗ್ಯಾರೆಂಟಿ ನಿಮಗಿದ್ದರೂ, ನಾವು ಇದನ್ನು ತಿನ್ನಲು ಯಾವುದೇ ಅಡ್ಡಿಯಿಲ್ಲ! ಅರೆ, ಚಿರತೆಯನ್ನು ತಿನ್ನುವುದೇ ಎಂದು ಹುಬ್ಬೇರಿಸಬೇಡಿ. ಈ ಚಿರತೆ ಚಾಕೋಲೇಟ್‌ ಚಿರತೆ. ಪೂರ್ತಿಯಾಗಿ ಚಾಕೋಲೇಟ್‌ನಿಂದಲೇ ಮಾಡಿದ ಚಿರತೆ (chocolate leopard) ಎಂದರೆ ನೀವು ನಂಬಲೇಬೇಕು.

ಹೌದು. ಪೇಸ್ಟ್ರಿ ಶೆಫ್‌ ಅಮೌರಿ ಗುಯ್ಚಾನ್‌ ಯಾವತ್ತಿಗೂ ಕೇಕ್‌ ಹಾಗೂ ಚಾಕೋಲೇಟ್‌ ಪ್ರಿಯರನ್ನು ಎಂದಿಗೂ ನಿರಾಸೆಗೊಳಿಸಿದ್ದೇ ಇಲ್ಲ ಎನ್ನಬೇಕು. ಪ್ರತಿ ಬಾರಿಯೂ ಯಾವ ಆರ್ಟ್‌ ವರ್ಕ್‌ಗಳಿಗೂ ಕಡಿಮೆಯಿರದ ಕೇಕ್‌ಗಳೂ, ಚಾಕೋಲೇಟ್‌ಗಳೂ ಇವರ ಕೈಯಿಂದ ತಯಾರಾಗುತ್ತವೆ. ಒಂದೊಂದು ಬಗೆಯ ಚಾಕೋಲೇಟುಗಳೂ ಒಂದೊಂದು ಆಕೃತಿಯಲ್ಲಿ ಕೇವಲ ಆಹಾರಪ್ರಿಯರಷ್ಟೇ ಅಲ್ಲ, ಕಲಾಸಕ್ತರ ಮನಸ್ಸನ್ನೂ ಸೆಳೆಯುತ್ತದೆ. ಇಷ್ಟು ಕಷ್ಟ ಪಟ್ಟು ಮಾಡಿದ ಕಲಾಕೃತಿಯನ್ನೇ ತಿಂದು ಮುಗಿಸುವುದು ಹೇಗೆ ಎಂದು ಪ್ರತಿಯೊಬ್ಬರಿಗೂ ಅನಿಸದೆ ಇರದು. ರೊಬೋಟ್‌ನಿಂದ ಹಿಡಿದು ಡ್ರ್ಯಾಗನ್‌ವರೆಗೆ, ತಿಮಿಂಗಿಲದಿಂದ ಹಿಡಿದು ವಾಹನದ ಪ್ರತಿಕೃತಿಯವರೆಗೆ ಪೇಸ್ಟ್ರಿಗಳು ನೈಜಕ್ಕೆ ಸೆಡ್ಡು ಹೊಡೆಯುವಂತೆ ರೂಪುಗೊಳ್ಳುತ್ತದೆ. ಈ ಬಾರಿ ಗುಯ್ಚಾನ್‌ ಅವರ ಚಿರತೆಯ ಪ್ರತಿಕೃತಿ ಚಾಕೋಲೇಟ್‌ನಲ್ಲಿ ಅರಳಿ, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಇನ್ಸ್‌ಟಾಗ್ರಾಂನಲ್ಲಿ ಈ ವಿಡಿಯೋ 58 ಲಕ್ಷಕ್ಕೂ ಹೆಚ್ಚು ವೀಕ್ಷಣೆ (viral video) ಕಂಡಿದೆ.

ಗುಲ್ಚಾನ್‌ ಅವರು ತಮ್ಮ ವಿಡಿಯೋನಲ್ಲಿ ತಾನು ಹೇಗೆ ಈ ಚಿರತೆಯ ಪ್ರತಿಕೃತಿಯನ್ನು ಮಾಡಿದ್ದೇನೆಂದೂ ವಿಡಿಯೋದ ಮೂಲಕ ವಿವರಿಸುತ್ತಾರೆ. ಚಿರತೆಯ ದೇಹದಿಂದ ಶುರು ಮಾಡಿ, ಮಾಂಸಖಂಡಗಳು, ಆಮೇಲೆ ಕಾಲುಗಳು, ಕೈಗಳು, ಪಾದ ಬಾಲ ಹೀಗೆ ದೇಹದ ಒಂದೊಂದೇ ಬಾಗಗಳನ್ನು ಮಾಡುತ್ತಾ ಸ್ಪ್ರೇ ಬಣ್ಣಗಳ ಮುಖಾಂತರ ಕೊನೆಯಲ್ಲಿ ಚಿರತೆ ಚರ್ಮದ ಬಣ್ಣವನ್ನು ಚಿತ್ರಿಸಿದೆ. ಚಿರತೆಯ ಮೈಯ ಮೇಲಿನ ಅಂತಿಮ ಹೊಳಪಿಗೆ ಸಕ್ಕರೆಯ ಪಾಕವನ್ನು ಬಳಸಿದೆ ಎಂದು ವಿವರಿಸುತ್ತಾರೆ.

ಇದನ್ನೂ ಓದಿ: Viral Video: ಹೆರಿಗೆ ನೋವಿಂದ ಆಸ್ಪತ್ರೆಗೆ ದಾಖಲಾದ ಮಗಳು; ಆಕೆಯ ಮಾವ-ಅತ್ತೆಗೆ ಥಳಿಸಿದ ಅಪ್ಪ-ಅಮ್ಮ!

ಸಾಮಾಜಿಕ ಜಾಲತಾಣದಲ್ಲಿ ಈತನ ಈ ಅಸಾಮಾನ್ಯ ಪ್ರತಿಭೆಯನ್ನು ನೋಡಿ ಜನರು ಫಿದಾ ಆಗಿದ್ದು, ಇದೊಂದು ಚಾಕೇಲೇಟ್‌ ಪ್ರತಿಮೆ ಎಂದು ನಂಬಲಸಾದ್ಯ ಎಂದಿದ್ದಾರೆ. ಕೆಲವರು, ನಮಗೆ ಚಿರತೆಯ ಚಿತ್ರ ಬಿಡಿಸಲೂ ಸಾಧ್ಯವಿಲ್ಲ, ಅಂಥದ್ದರಲ್ಲಿ ಚಾಕೋಲೇಟಿನಲ್ಲಿ ಚಿರತೆಯನ್ನೇ ಸೃಷ್ಠಿಸುವುದೆಂದರೆ ಸಾಮಾನ್ಯ ಮಾತಾ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಗುಯ್ಚಾನ್‌ ಅವರು ಚಾಕೋಲೇಟ್‌ ಮೃಗಾಲಯವನ್ನೇ ಮಾಡಬಹುದು ಎಂದು ಸಲಹೆ ನೀಡಿದ್ದಾರೆ. ಇನ್ನೂ ಹಲವರು, ನಿಮಗೆ ದೇವರು ಕೊಟ್ಟ ಉಡುಗೊರೆ ಎಂದರೆ ಅದು ಈ ಪ್ರತಿಭೆ ಎಂದು ಅವರ ವಿಶೇಷ ಕೌಶಲಕ್ಕೆ ಬೆರಗಾಗಿ ಹೊಗಳಿದ್ದಾರೆ. ಅನೇಕರು, ಚಾಕೋಲೇಟ್‌ ಚಿರತೆಯನ್ನು ಆಮೇಲೆ ಏನು  ಮಾಡುತ್ತೀರಿ ಎಂದು ಕುತೂಹಲಕರ ಪ್ರಶ್ನೆಗಳನ್ನೂ ಮುಂದಿಟ್ಟಿದ್ದಾರೆ.

ಅಂದಹಾಗೆ ಈ ಚಿರತೆ, ನಿಜವಾದ ಚಿರತೆಯ ಗಾತ್ರವನ್ನೇ ಹೊಂದಿರುವುದು ವಿಶೇಷ. ಚಿರತೆಯ ಕಣ್ಣುಗಳು ನಿಜವಾದ ಚಿರತೆಯ ಕಣ್ಣುಗಳನ್ನೇ ಹೋಲುತ್ತಿರುವುದು ಬಹಳ ಮಂದಿಯನ್ನು ನಿಬ್ಬೆರಗಾಗಿಸಿದೆ. ಸ್ವತಃ ಗುಯ್ಚಾನ್‌ ಈ ಚಿರತೆಯ ಕಣ್ಣು ನನಗೂ ಬಹಳ ಇಷ್ಟವಾಯಿತು ಎಂದು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ: Viral Video : ಅತಿಯಾಸೆ ಗತಿಗೇಡು ಎನ್ನುವುದಕ್ಕೆ ಇದೇ ಸಾಕ್ಷಿ; ಭಾರೀ ಬೇಟೆಯ ನಿರೀಕ್ಷೆಯಲ್ಲಿದ್ದ ಚಿರತೆಗೆ ಸಿಕ್ಕಿದ್ದೇನು?

Exit mobile version