Site icon Vistara News

Viral Video: ನಾಗರಹಾವು ಟಾಯ್ಲೆಟ್ ಕಮೋಡ್ ನೊಳಗೂ ಇರಬಹುದು, ಹುಷಾರ್! ಈ ವಿಡಿಯೊ ನೋಡಿ

Viral video

ಇಂದೋರ್: ಟಾಯ್ಲೆಟ್ ಕಮೋಡ್ ನಲ್ಲಿ (toilet commode) ನಾಗರಹಾವು (cobra) ಪತ್ತೆಯಾದ ಘಟನೆ ಇಂದೋರ್ ನಲ್ಲಿ (Indore) ನಡೆದಿದ್ದು, ಭಯ ಹುಟ್ಟಿಸುವ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ (social media) ಇನ್ ಸ್ಟಾಗ್ರಾಮ್ ನಲ್ಲಿ (Instagram) ಹಾವು ರಕ್ಷಕ ರಾಜೇಶ್ ಜಾಟ್ ಅವರು ಹಂಚಿಕೊಂಡಿದ್ದಾರೆ. ಈ ವಿಡಿಯೊ ಭಾರೀ ವೈರಲ್ (Viral Video) ಆಗಿದೆ.

ಇಂದೋರ್‌ನ ವಾಯ್ಸ್ 4 ವೈಲ್ಡ್‌ಲೈಫ್ ಫೌಂಡೇಶನ್‌ನ ( Voice4Wildlife Foundation) ನಿರ್ದೇಶಕ ಮತ್ತು ಸಂಸ್ಥಾಪಕ ಜಾಟ್ ಅವರು ತಮ್ಮ ಫೌಂಡೇಶನ್ ನಗರಕ್ಕೆ ಬರುವ ವನ್ಯಜೀವಿ ಪ್ರಾಣಿಗಳಾದ ವಿಷಕಾರಿ ಹಾವು ಮತ್ತು ಉಡ ವನ್ನು ರಕ್ಷಿಸುತ್ತಿದೆ. ಗೂಗಲ್ ನಲ್ಲಿ ನಮ್ಮ ಫೌಂಡೇಶನ್ ಮಾಹಿತಿ ಇದೆ. ಇಂತಹ ಸಂದರ್ಭದಲ್ಲಿ ಜನರು ನಮ್ಮ ವೆಬ್‌ಸೈಟ್ ‘voice4wildlife.in’ ಮೂಲಕ ನಮ್ಮನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದ್ದಾರೆ.

ಏಪ್ರಿಲ್ 1ರಂದು ಮಧ್ಯರಾತ್ರಿ ವನ್ಯಜೀವಿಯೊಂದು ನಗರಕ್ಕೆ ಬಂದಿರುವುದಾಗಿ ಫೌಂಡೇಷನ್ ಗೆ ಕರೆ ಬಂದಿತ್ತು. ಇಂದೋರ್‌ನ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿ ಹಾವನ್ನು ನೋಡಿ ಕರೆ ಮಾಡಿದ್ದರು ಎಂದು ರಾಜೇಶ್ ಜಾಟ್ ಹೇಳಿದ್ದಾರೆ. ಕೂಡಲೇ ಹಾವಿನ ಮೇಲೆ ನಿಗಾ ಇಡಲು ಮತ್ತು ಅಂತರವನ್ನು ಕಾಯ್ದುಕೊಳ್ಳಲು ನಾನು ಅವರನ್ನು ಕೇಳಿದೆ. ಆದರೆ ಅವರು ಹೆದರಿದರು ಮತ್ತು ಹೊರಗಿನಿಂದ ಬಾಗಿಲು ಹಾಕಿದರು. ನಾನು ಬಂದಾಗ ನನಗೆ ಹಾವು ಕಾಣಿಸಲಿಲ್ಲ. ಅನಂತರ ಕಮೋಡ್ ಒಳಗೆ ನೋಡಿದೆ. ಕಪ್ಪು ಬಣ್ಣದ, ಹೆಚ್ಚು ವಿಷಪೂರಿತ ನಾಗರ ಹಾವಿನಂತೆ ಕಾಣುತ್ತಿತ್ತು ಎಂದರು. ಜಾಟ್ ಅವರು ಇದರ ವಿಡಿಯೋ ಹಂಚಿಕೊಂಡಿದ್ದು, ಐದು ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಸಾಕಷ್ಟು ಮಂದಿ ಇದನ್ನು ಭಯಾನಕ ಎಂದು ಪ್ರತಿಕ್ರಿಯಿಸಿದ್ದಾರೆ.

ಒಬ್ಬ ಬಳಕೆದಾರ ನನ್ನ ಬಾಲ್ಯದಿಂದಲೂ ಹಾವಿಗೆ ಹೆದರುತ್ತಿದ್ದೆ ಎಂದು ಬರೆದಿದ್ದಾರೆ. ಮತ್ತೊಬ್ಬರು ನನ್ನ ಭಯವು ಈಗ ವಾಸ್ತವವಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಹೊಸ ಭಯವನ್ನು ಅನ್ಲಾಕ್ ಮಾಡಲಾಗಿದೆ ಎಂದು ಹೇಳಿದರು. ಕೆಲವು ಬಳಕೆದಾರರು ಜಾಟ್ ಅವರ ಕೆಲಸವನ್ನು ಶ್ಲಾಘಿಸಿದ್ದು, ನಿಮ್ಮ ಕೆಲಸವು ಪ್ರಶಂಸನೀಯವಾಗಿದೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ನಗರಗಳಲ್ಲಿನ ಒಳಚರಂಡಿ ವ್ಯವಸ್ಥೆಯ ಮೂಲಕ ಹಾವುಗಳು ಸ್ನಾನಗೃಹದೊಳಗೆ ಬರುತ್ತವೆ ಎಂದು ಜಾಟ್ ವಿವರಿಸಿದರು. ಈ ಸನ್ನಿವೇಶದಲ್ಲಿ ಇಂದೋರ್‌ನಲ್ಲಿನ ಹೆಚ್ಚಿನ ತಾಪಮಾನ ಮತ್ತು ಇಲಿಗಳು ಒಳಚರಂಡಿ ಪೈಪ್‌ಗಳಲ್ಲಿ ರಂಧ್ರಗಳನ್ನು ಅಗೆಯುವುದರಿಂದ, ಹಾವುಗಳು ಈ ಪೈಪ್‌ಗಳ ಮೂಲಕ ಚಲಿಸುತ್ತವೆ ಮತ್ತು ಟಾಯ್ಲೆಟ್ ಕಮೋಡ್‌ಗಳು ಮತ್ತು ಅಡುಗೆ ಮನೆಯ ಪೈಪ್‌ಗಳನ್ನು ಸಹ ತಲುಪುತ್ತವೆ ಎಂದು ಜಾಟ್ ಹೇಳಿದರು.

ಬಿಸಿ ವಾತಾವರಣದಿಂದಾಗಿ ಅವು ಹಗಲಿನಲ್ಲಿ ಡ್ರೈನೇಜ್ ಪೈಪ್‌ಗಳೊಳಗೆ ಅಡಗಿಕೊಳ್ಳುತ್ತವೆ ಮತ್ತು ರಾತ್ರಿಯಲ್ಲಿ ತಂಪಾಗಿರುವಾಗ ಹೊರಬರುತ್ತವೆ. ಇದರ ಚಲನವಲನವನ್ನು ಪತ್ತೆಹಚ್ಚಿದ ತಕ್ಷಣ ಅದು ಮತ್ತೆ ಅಡಗಿಕೊಳ್ಳುವುದರಿಂದ ಅವುಗಳನ್ನು ಹಿಡಿದು ರಕ್ಷಿಸುವುದು ಸವಾಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಮೋಡ್ ನೊಳಗೆ ಸೇರಿದ್ದ ಹಾವನ್ನು ರಕ್ಷಿಸಲು, ನಾವು ಕಮೋಡ್‌ಗೆ ನೀರು ಹಾಕಿದ್ದೇವೆ. ಡ್ರೈನೇಜ್ ಪೈಪ್‌ನೊಳಗೆ ನಿರಂತರ ನೀರು ಹರಿಯುವುದರಿಂದ ಹಾವು ಆಮ್ಲಜನಕದ ಕೊರತೆಯನ್ನು ಅನುಭವಿಸಿ ಹೊರಗೆ ಬರಲು ಪ್ರಯತ್ನಿಸುತ್ತದೆ. ಅದು ಆಮ್ಲಜನಕಕ್ಕಾಗಿ ಹೊರಬಂದ ತಕ್ಷಣ ನಾನು ಬಾಯಿಗೆ ನೀರು ಸುರಿಯಲು ಪ್ರಾರಂಭಿಸಿದೆ ಮತ್ತು ಅದನ್ನು ಹಿಡಿದು ರಕ್ಷಿಸಿದೆ ಎಂದು ಅವರು ತಿಳಿಸಿದರು. ಪ್ರತಿಯೊಂದು ಹಾವನ್ನು ಹಿಡಿಯುವುದು ಸುಲಭವಲ್ಲ. ಇದನ್ನು 15 ನಿಮಿಷಗಳಲ್ಲಿ ಹಿಡಿಯಲಾಗಿದೆ. ಕೆಲವೊಮ್ಮೆ ಸ್ನಾನಗೃಹದಲ್ಲಿ ಅವಿತುಕೊಳ್ಳುವ ಹಾವುಗಳು ಮೂರು ದಿನಗಳವರೆಗೆ ಇರುತ್ತದೆ. ಹಾವು ಯಾವ ಮಹಡಿಯಲ್ಲಿ ಕಾಣಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಅವು ನೆಲಮಹಡಿಗೆ ಮಾತ್ರ ಬರುತ್ತವೆ ಎಂಬುದು ತಪ್ಪು ಕಲ್ಪನೆ. ಯಾವುದೇ ಮಹಡಿಗೆ ಅವು ಬಹಳ ಸುಲಭವಾಗಿ ಪ್ರಯಾಣಿಸಬಲ್ಲವು ಎಂದು ಜಾಟ್ ತಿಳಿಸಿದರು.

ಇದನ್ನೂ ಓದಿ: Viral Video: ತಲೆ ಮೇಲೆ ಎರಡು ಗ್ಯಾಸ್ ಸಿಲಿಂಡರ್, ಅದರ ಮೇಲೆ ಬಿಂದಿಗೆ! ಅಬ್ಬಾ ಎಂಥ ಅದ್ಭುತ!

ಇಂತಹ ಘಟನೆಗಳನ್ನು ತಡೆಗಟ್ಟಲು ಸಲಹೆ ನೀಡಿದ ಅವರು, ಒಳಚರಂಡಿ ಪೈಪ್‌ಗಳ ಸುತ್ತಲಿನ ಪ್ರದೇಶವನ್ನು ತೆರೆದಿಡಬಾರದು ಅಥವಾ ಅವುಗಳ ಬಳಿ ಕಸವನ್ನು ಎಸೆಯಬಾರದು. ಇದು ಇಲಿಗಳು ಪೈಪ್‌ಗಳ ಒಳಗೆ ರಂಧ್ರಗಳನ್ನು ಅಗೆಯಲು ಕಾರಣವಾಗುತ್ತದೆ. ಹಾವುಗಳಿಗೆ ಮಾರ್ಗವನ್ನು ಸೃಷ್ಟಿಸುತ್ತದೆ. ತೆರೆದ ಒಳಚರಂಡಿ ಪೈಪ್ ಅನ್ನು ಕಂಡುಕೊಂಡರೆ, ಅಂತಹ ಘಟನೆಗಳನ್ನು ತಡೆಗಟ್ಟಲು ನಗರದ ಪುರಸಭೆಯನ್ನು ಸಂಪರ್ಕಿಸಿ ಮತ್ತು ಅದಕ್ಕೆ ಸಿಮೆಂಟ್ ಹಾಕಿಸಿ ಎಂದರು.

ವಾಯ್ಸ್ 4 ವೈಲ್ಡ್‌ಲೈಫ್ ಫೌಂಡೇಶನ್‌ ಇಂದೋರ್ ಮತ್ತು ಹತ್ತಿರದ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಜಾಟ್ ಐದರಿಂದ ಆರು ಸದಸ್ಯರ ತಂಡವನ್ನು ಮುನ್ನಡೆಸುತ್ತಿದ್ದಾರೆ. ನಮ್ಮಲ್ಲಿ ನಾಲ್ಕು ಜನರು ಮಾತ್ರ ಪೂರ್ಣ ಸಮಯ ಲಭ್ಯವಿರುತ್ತಾರೆ. ಉಳಿದ ಇಬ್ಬರು ಅವರ ಬಿಡುವಿನ ಸಮಯದಲ್ಲಿ ಮಾತ್ರ ಸಿಗುತ್ತಾರೆ. ಪ್ರತಿ ನಗರದಲ್ಲಿ ಹೆಚ್ಚಿನ ರಕ್ಷಣಾ ತಂಡಗಳನ್ನು ಸ್ಥಾಪಿಸುವ ಗುರಿಯನ್ನು ಜಾಟ್ ಹೊಂದಿರುವುದಾಗಿ ಹೇಳಿದ್ದಾರೆ.

Exit mobile version