Site icon Vistara News

Viral Video: ಇದೇನಾ ಸಂಸ್ಕೃತಿ? ದಿಲ್ಲಿ ಮೆಟ್ರೋದಲ್ಲಿ ಅನುಚಿತ ವರ್ತನೆ ತೋರಿದ ಜೋಡಿಗೆ ನೆಟ್ಟಿಗರಿಂದ ಫುಲ್‌ ಕ್ಲಾಸ್‌

delhi metro

delhi metro

ನವ ದೆಹಲಿ: ಕೆಲವು ಸಮಯಗಳಿಂದ ದಿಲ್ಲಿ ಮೆಟ್ರೋ ಕೆಟ್ಟ ಕಾರಣಗಳಿಗೆ ಸುದ್ದಿಯಲ್ಲಿದೆ. ಕೆಲ ಜೋಡಿ ಅನುಚಿತ ವರ್ತನೆ ಮೂಲಕ ಪ್ರಯಾಣಿಕರಿಗೆ ಮುಜುಗರ ಉಂಟು ಮಾಡುತ್ತಿದೆ. ಸದ್ಯ ಅಂತಹದ್ದೇ ಇನ್ನೊಂದು ಘಟನೆ ನಡೆದಿದೆ. ಸದ್ಯ ಈ ವಿಡಿಯೊ ವೈರಲ್‌ (Viral Video) ಆಗಿದೆ. ಪ್ರಯಾಣಿಕರ ಮಧ್ಯೆಯೇ ಯುವ ಜೋಡಿಯೊಂದು ತಂಪು ಪಾನಿಯ ಮತ್ತು ನೂಡಲ್ಸ್‌ ಅನ್ನು ಪರಸ್ಪರ ಬಾಯಿಯಲ್ಲೇ ಹಂಚಿಕೊಂಡಿದೆ. ಈ ಅನುಚಿತ ವರ್ತನೆಗೆ ಭಾರೀ ಟೀಕೆ ವ್ಯಕ್ತವಾಗಿದೆ. ಹಲವರು ಜೋಡಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.

ಆಗಿದ್ದೇನು?

ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಜೋಡಿ ಪೈಕಿ ಯುವಕ ಮೊದಲಿಗೆ ತಂಪು ಪಾನೀಯವನ್ನು ತನ್ನ ಪ್ರೇಯಸಿಗೆ ಕುಡಿಸುತ್ತಾನೆ. ಆಕೆ ತನ್ನ ಬಾಯಿಯಿಂದ ಆ ಪಾನೀಯವನ್ನು ಪ್ರಿಯಕರನ ಬಾಯಿಗೆ ಉಗುಳುತ್ತಾಳೆ. ಪುನಃ ಆತ ಮತ್ತೆ ಆಕೆಯ ಬಾಯಿಗೆ ಉಗುಳುವ ದೃಶ್ಯ ಸೆರೆಯಾಗಿದೆ. ಹೀಗೆ ಅವರು ಇದನ್ನು ಪುನರಾವರ್ತಿಸುತ್ತಾರೆ. ಅಲ್ಲೇ ಇದ್ದ ಪ್ರಯಾಣಿಕರು ಈ ಅನಿರೀಕ್ಷಿತ ಘಟನೆಯಿಂದ ಶಾಕ್‌ಗೆ ಒಳಗಾಗಿದ್ದಾರೆ.

ಇವರ ಅಸಹ್ಯ ವರ್ತನೆ ಇಲ್ಲಿಗೆ ಮುಗಿದಿಲ್ಲ. ಇನ್ನೊಂದು ವಿಡಿಯೊದಲ್ಲಿ ಅದೇ ಯುವಕ ಯುವತಿಯ ಬಾಯೊಳಗೆ ನೂಡಲ್ಸ್‌ ಹಾಕುತ್ತಾನೆ. ಬಳಿಕ ಸ್ಪೂನ್‌ನಲ್ಲಿ ತೆಗೆದು ಅದನ್ನು ಆತ ಸೇವಿಸುತ್ತಾನೆ. ಸದ್ಯ ಈ ಎರಡು ವಿಡಿಯೊ ವೈರಲ್‌ ಆಗಿದ್ದು ನೆಟ್ಟಿಗರು ಈ ಜೋಡಿಯ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Viral Video: ಊಸರವಳ್ಳಿ ಜೀವ ಕಾಪಾಡಿದ ವ್ಯಕ್ತಿ; ಮಾನವೀಯತೆ ಇನ್ನೂ ಜೀವಂತ ಎಂದ ನೆಟ್ಟಿಗರು

ನೆಟ್ಟಿಗರು ಏನಂದ್ರು?

ʼʼಮೆಟ್ರೋದ ಒಳಗೆ ತಿನ್ನುವುದು ಮತ್ತು ಕುಡಿಯುವುದನ್ನು ನಿಷೇಧಿಸಲಾಗಿದೆ. ಆದರೆ ಈ ರೀತಿಯ ಜೋಡಿಯ ಅಸಹ್ಯಕರ ವರ್ತನೆ ಇತರರನ್ನು ಪ್ರಚೋದಿಸುತ್ತದೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಇದು ದಿಲ್ಲಿ ಮೆಟ್ರೋವೇ ಆಗಿರಬೇಕುʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ಇನ್ನೊಬ್ಬರು, ʼʼಸದ್ಯ ನಾವು ಅದೃಷ್ಟವಂತರು. ಪುಣ್ಯಕ್ಕೆ ಅವರು ವಿಮಲ್‌ ತಿಂದಿಲ್ಲʼʼ ಎಂದು ಇನ್ನೊಬ್ಬರು ಸಮಾಧಾನ ಪಟ್ಟುಕೊಂಡಿದ್ದಾರೆ. ಮಗದೊಬ್ಬರು ವ್ಯಂಗ್ಯವಾಗಿ ʼʼಅದ್ಭುತʼʼ ಎಂದು ಹೇಳಿದ್ದಾರೆ. ದಿಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುವವರ ಸುರಕ್ಷತೆ ಬಗ್ಗೆ ಕಳವಳ ಪಡುವಂತಾಗಿದೆ ಎಂದು ಹಲವರು ಹೇಳಿದ್ದಾರೆ. ಇಂತಹ ಘಟನೆ ಪುನರಾವರ್ತೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಕೆಲವು ತಿಂಗಳಿಂದ ಈ ಜೋಡಿ ಹಲವು ವಿಡಿಯೊ ಅಥವಾ ಇಸ್ಟಾಗ್ರಾಮ್‌ ರೀಲ್‌ಗಳ ಮೂಲಕ ವಿವಾದ ಸೃಷ್ಟಿಸುತ್ತಿದೆ. ಇವರು ನೃತ್ಯ ಮಾಡುವ ಮೂಲಕ ಸಾರ್ವಜನಿಕವಾಗಿ ಚುಂಬಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಇಂತಹ ಘಟನೆ ನಡೆದಾಗ ಕೂಡಲೇ ವರದಿ ಮಾಡುವಂತೆ ದಿಲ್ಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಸಹ ಪ್ರಯಾಣಿಕರಲ್ಲಿ ಮನವಿ ಮಾಡಿದೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದೆ. ಇತರ ಪ್ರಯಾಣಿಕರಿಗೆ ತೊಂದರೆಯಾಗುವ ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಡಿಎಂಆರ್‌ಸಿ ಮಾರ್ಗಸೂಚಿಗಳನ್ನು ಹೊಂದಿದೆ. ಇದರ ಭಾಗವಾಗಿ ಮಾರ್ಚ್‌ನಲ್ಲಿ ದಿಲ್ಲಿ ಮೆಟ್ರೋ ರೈಲಿನ ಒಳಗೆ ಚಿತ್ರೀಕರಣ ನಿಷೇಧಿಸಲಾಗಿದೆ. ಎಕ್ಸ್‌ ಮೂಲಕ ಡಿಎಂಆರ್‌ಸಿ, ʼಪ್ರಯಾಣಿಸಿ ಆದರೆ ತೊಂದರೆ ಉಂಟು ಮಾಡಬೇಡಿʼ ಎಂದು ಮನವಿ ಮಾಡಿದೆ.

ಇನ್ನಷ್ಟು ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version