Site icon Vistara News

Viral Video: ಕರುವನ್ನು ಹೆರುವುದಕ್ಕೆ ಸಹಾಯ ಮಾಡಿದನಿಗೆ ವಿಶೇಷ ರೀತಿಯಲ್ಲಿ ಕೃತಜ್ಞತೆ ತಿಳಿಸಿದ ಹಸು

cow saying thanks to man

#image_title

ಬೆಂಗಳೂರು: ಮನುಷ್ಯನಿಗೆ ನಿಯತ್ತು ಕಡಿಮೆ. ಆದರೆ ಪ್ರಾಣಿಗಳು ಹಾಗಿಲ್ಲ. ಯಾರೇ ತಮಗೆ ಸಹಾಯ ಮಾಡಿದರೂ ಅವರಿಗೆ ಅವು ನಿಯತ್ತಿನಿಂದ ನಡೆದುಕೊಳ್ಳುತ್ತವೆ. ಅದೇ ರೀತಿಯಲ್ಲಿ ತಾನು ಕರು ಹೆರುವುದಕ್ಕೆ ಸಹಾಯ ಮಾಡಿದ ವ್ಯಕ್ತಿಗೆ ಹಸುವೊಂದು ವಿಶೇಷ ರೀತಿಯಲ್ಲಿ ಧನ್ಯವಾದ ತಿಳಿಸಿದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ ಆಗಿದೆ.

ವ್ಯಕ್ತಿಯೊಬ್ಬ ಹಸುವಿಗೆ ಕರುವನ್ನು ಹೆರುವುದಕ್ಕೆ ಸಹಾಯ ಮಾಡಿರುತ್ತಾನೆ. ಕರುವನ್ನು ಅದರ ಎದುರಿನಲ್ಲೇ ಕೂರಿಸಿಕೊಂಡು ಅದನ್ನು ಸ್ವಚ್ಛಗೊಳಿಸುತ್ತಿರುತ್ತಾನೆ. ಆಗ ಆತನಿಗೆ ಕೃತಜ್ಞತೆ ತಿಳಿಸಲು ನಿರ್ಧರಿಸುವ ಹಸುವು ಅವನ ಕೈಯನ್ನು ತನ್ನ ನಾಲಿಗೆಯಿಂದ ನೆಕ್ಕಲಾರಂಭಿಸುತ್ತದೆ. ಅದನ್ನು ಕಂಡು ಆತ ಸಂತೋಷದಿಂದ ಹಸುವಿನ ಮುಖವನ್ನು ಹಿಡಿದು ಮುದ್ದಾಡುತ್ತಾನೆ.

ಇದನ್ನೂ ಓದಿ: Viral video: ನಾನೊಬ್ಳೇ ಎಷ್ಟೂಂತ ಮಾಡ್ಲಿ, ಆಗಲ್ಲ ನಂಗೆ; ಆಧಾರ್‌ ಕೇಂದ್ರದ ಒತ್ತಡಕ್ಕೆ ಮಹಿಳಾ ಸಿಬ್ಬಂದಿ ಕಣ್ಣೀರು
ಕೊನೆಯಲ್ಲಿ ಆತ ತನ್ನ ತಲೆಯನ್ನು ಹಸುವಿನಿಂದ ಮುಂದೆ ಹಿಡಿಯುತ್ತಾನೆ. ಆಗ ಹಸುವು ಆತನ ತಲೆಯನ್ನೂ ಅತ್ಯಂತ ಪ್ರೀತಿಯಿಂದ ನೆಕ್ಕಿ ಕೃತಜ್ಞತೆ ತಿಳಿಸುತ್ತದೆ. ಈ ದೃಶ್ಯವಿರುವ ವಿಡಿಯೊವನ್ನು ರೆಡ್ಡಿಟ್‌ ಆಪ್‌ನಲ್ಲಿ ಹಂಚಿಕೊಳ್ಳಲಾಗಿದೆ.

Mama cow shows gratitude to the kind man who saved her and helped deliver her calf
by u/westcoastcdn19 in AnimalsBeingBros


ಈ ವಿಡಿಯೊವನ್ನು 14 ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ವಿಡಿಯೊ ಸಾವಿರಾರು ಮಂದಿಯಿಂದ ವೀಕ್ಷಣೆ ಪಡೆದುಕೊಂಡಿದೆ. 46 ಸಾವಿರಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಹಾಗೆಯೇ ನೂರಾರು ಮಂದಿ ವಿಡಿಯೊ ಬಗ್ಗೆ ಮೆಚ್ಚುಗೆಯ ಕಾಮೆಂಟ್‌ಗಳನ್ನು ಹಾಕಿದ್ದಾರೆ. “ಈ ವಿಡಿಯೊ ನೋಡಿದ ಮೇಲೆ ನನಗೆ ಹಸುವಿನ ಮೇಲೆ ಪ್ರೀತಿ ಜಾಸ್ತಿಯಾಗಿದೆ”, “ಮನುಷ್ಯರಿಗೆ ಇಲ್ಲದ ಬುದ್ಧಿ ಪ್ರಾಣಿಗಳಿಗೆ ಇರುತ್ತದೆ” ಎನ್ನುವಂತಹ ಹಲವಾರು ಕಾಮೆಂಟ್‌ಗಳನ್ನು ನೀವಿಲ್ಲಿ ಕಾಣಬಹುದಾಗಿದೆ.

Exit mobile version