Site icon Vistara News

Viral Video | ‘ಕಮರ್ ತೇರಿ ಲೆಫ್ಟ್, ರೈಟ್’ ಎನ್ನುತ್ತ ಕುಣಿದ ಬಾಲಕಿಗೆ ಎಲ್ಲರೂ ಫಿದಾ!

ಬೆಂಗಳೂರು: ಈಗ ಸೋಶಿಯಲ್ ಮೀಡಿಯಾಗಳದ್ದೇ ಹವಾ. ಚಿಕ್ಕ ಪುಟ್ಟ ಮಕ್ಕಳು ಕೂಡ ವಿಡಿಯೋ ಕ್ರಿಯೇಟ್ ಮಾಡಿ ಟ್ರೆಂಡ್ ಆಗಲಾರಂಭಿಸಿದ್ದಾರೆ. ಅದೇ ರೀತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚಿಕ್ಕ ಬಾಲಕಿಯೊಬ್ಬಳ ನೃತ್ಯ ಭಾರೀ ವೈರಲ್ (Viral Video) ಆಗಿದೆ. ಪ್ರಸಿದ್ಧ ಗಾಯಕ ಅಜಯ್ ಹೂಡಾ ಅವರೊಂದಿಗೆ ‘ಕಮರ್ ತೇರಿ ಲೆಫ್ಟ್, ರೈಟ್’ ಹಾಡಿಗೆ ಕುಣಿದಿರುವ ಬಾಲಕಿಯ ವಿಡಿಯೋಗೆ ಮೆಚ್ಚುಗೆಯ ಸುರಿಮಳೆಯೇ ಸುರಿದಿದೆ.

ಇದನ್ನೂ ಓದಿ: Viral Video | ಹುಡುಗಿಯರ ಮಸ್ತ್ ಡ್ಯಾನ್ಸ್, ಬೆಸ್ಟ್‌ನಲ್ಲಿ ಬೆಸ್ಟ್ ಅಂತಿದ್ದಾರೆ ನೆಟ್ಟಿಗರು

ಈ ರೀತಿ ಸೊಂಟ ಕುಣಿಸಿರುವ ಬಾಲಕಿಯ ಹೆಸರು ದಿಶು ಯಾದವ್. ಇತ್ತೀಚೆಗೆ ಅಜಯ್ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಅವರೊಂದಿಗೆ ನೃತ್ಯ ಕಲಾವಿದರು ಹೆಜ್ಜೆ ಹಾಕಿದ್ದಾರೆ. ಅವರಿಗೆ ಜತೆಯಾದ ದಿಶು ವೇದಿಕೆಯ ಮೇಲೆ ನಿಂತು ನೃತ್ಯ ಮಾಡಿದ್ದಾರೆ. ಖುಷಿಯಿಂದ ಅಜಯ್ ಕೂಡ ದಿಶು ಅವರ ಜತೆಯಲ್ಲೇ ನಿಂತು ಹಾಡು ಹೇಳಿ ತಾವೂ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ದಿಶು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋವನ್ನು 6 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದು, 58 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ಹಳದಿ ಬಣ್ಣದ ಡ್ರೆಸ್ ಹಾಗೂ ಬ್ಲೂ ಜೀನ್ಸ್ ಕೋಟ್ ತೊಟ್ಟಿರುವ ದಿಶು ತಮ್ಮ ಮುದ್ದಾದ ನೃತ್ಯದಿಂದ ನೆಟ್ಟಿಗರ ಮನಸ್ಸನ್ನು ಗೆದ್ದಿದ್ದಾರೆ. ಅಂದ ಹಾಗೆ ದಿಶು ಕೂಡ ಒಬ್ಬ ವಿಡಿಯೋ ಕ್ರಿಯೇಟರ್ ಆಗಿದ್ದಾರೆ. ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 4 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

ಇದನ್ನೂ ಓದಿ: Viral Post | ತಿಂಗಳಿಂದಲೂ ಮೂಗಲ್ಲಿ ರಕ್ತಸ್ರಾವ, ನೋವು ಎಂದು ವೈದ್ಯರ ಬಳಿ ಹೋದವನ ಮೂಗಿನೊಳಗೆ ನೋಡಿದ ವೈದ್ಯರೇ ಕಂಗಾಲು!

ಕಮರ್ ತೆರಿ ಲೆಫ್ಟ್, ರೈಟ್ ಹಾಡನ್ನು 2022ರಲ್ಲಿ ಬಿಡುಗಡೆ ಮಾಡಲಾಗಿದೆ. ಅಜಯ್ ಹೂಡಾ ಬ್ಲಾಕ್ ಬಸ್ಟರ್ ಸಾಂಗ್ಸ್ ಹೆಸರಿನ ಆಲ್ಬಂ ಮೂಲಕ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ.

Exit mobile version