Site icon Vistara News

Viral Video: ಇದು ಬಾಲ್‌ ಬ್ಯಾಲೆನ್ಸಿಂಗ್‌ ಡಾಗ್‌, ಹೇಗಿದೆ ನೋಡಿ ವೈರಲ್‌ ವಿಡಿಯೊ

#image_title

ಬೆಂಗಳೂರು: ನಾಯಿಗಳು ಆಟವಾಡುವುದನ್ನು ನೋಡುವುದಕ್ಕೇ ಖುಷಿಯಾಗುತ್ತದೆ. ಅದರಲ್ಲೂ ಅವುಗಳ ಕೈಗೆ ಬಾಲ್‌ ಸಿಕ್ಕುಬಿಟ್ಟರಂತೂ ಆಟವನ್ನು ತಡೆಯಲಾಗದು. ಅದೇ ರೀತಿಯ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಇದನ್ನೂ ಓದಿ: Viral Dance: ಮಾಧುರಿ ದೀಕ್ಷಿತ್‌ ಅವರಂತೆ ನೃತ್ಯ ಮಾಡಿದ ಟೀಮ್​ ಇಂಡಿಯಾದ ಆಟಗಾರ್ತಿಯರು; ವಿಡಿಯೊ ವೈರಲ್​
ನಾಯಿಯೊಂದಕ್ಕೆ ದೊಡ್ಡದೊಂದು ಬಾಲ್‌ ಕೊಡಲಾಗುತ್ತದೆ. ಅದರೊಂದಿಗೆ ಆಟ ಆರಂಭಿಸುವ ನಾಯಿ, ಅದನ್ನು ತನ್ನ ತಲೆಯ ಮೇಲೇ ಬ್ಯಾಲೆನ್ಸ್‌ ಮಾಡಲಾರಂಭಿಸುತ್ತದೆ. ಸಾಕಷ್ಟು ಸಮಯದ ಕಾಲ ಬಾಲನ್ನು ತಲೆ ಮೇಲೆ ಬ್ಯಾಲೆನ್ಸ್‌ ಮಾಡುತ್ತಲೇ ಅತ್ತಿಂದಿತ್ತ ಓಡಾಡುತ್ತದೆ. ಈ ವಿಡಿಯೊವನ್ನು Buitengebieden ಹೆಸರಿನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.


21 ಸೆಕೆಂಡುಗಳಷ್ಟಿರುವ ಈ ವಿಡಿಯೊವನ್ನು ಬುಧವಾರ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ ವಿಡಿಯೋ ಲಕ್ಷಾಂತರ ಮಂದಿಯಿಂದ ವೀಕ್ಷಣೆ ಪಡೆದಿದೆ. ಸಾವಿರಾರು ಮಂದಿ ವಿಡಿಯೊಗೆ ಲೈಕ್‌ ಮಾಡಿ, ಶೇರ್‌ ಮಾಡಿಕೊಂಡಿದ್ದಾರೆ. “ಸಾಕರ್‌ ಆಟಕ್ಕೆ ಈ ನಾಯಿಯನ್ನು ಸೇರಿಸಿಕೊಳ್ಳಬಹುದು”, “ಮನುಷ್ಯರಿಗಿಂತ ಎಷ್ಟೋ ಚೆನ್ನಾಗಿ ಆಟವಾಡುತ್ತಿದೆ”, “ನಾಯಿಗಳ ಷೋನಲ್ಲಿ ಈ ನಾಯಿಯನ್ನು ಆಟವಾಡಿಸಿದರೆ ಇದಕ್ಕೇ ಮೊದಲ ಬಹುಮಾನ ಗ್ಯಾರಂಟಿ” ಎನ್ನುವಂತಹ ಹಲವಾರು ಕಾಮೆಂಟ್‌ಗಳು ಬಂದಿವೆ.

Exit mobile version