ಬೆಂಗಳೂರು: ಅಮೆರಿಕ ಸೇರಿ ಹಲವು ರಾಷ್ಟ್ರಗಳಲ್ಲಿ ಇದು ಹಿಮ ಮಳೆಯ ಕಾಲ. ಆಗಸದಿಂದ ಸುರಿವ ಹಿಮಕ್ಕೆ ಮೈ ಒಡ್ಡಿ ಸಂಭ್ರಮಿಸುವ ಮಜವೇ ಬೇರೆ. ಈ ಹಿಮ ಮಳೆಯನ್ನು ಮೊದಲನೇ ಬಾರಿ ಕಂಡ ನಾಯಿಯೊಂದರ ಸಂಭ್ರಮದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral Video | ಮುಂದಿನ 2 ಚಕ್ರಗಳೇ ಇಲ್ಲದೆ ವೇಗವಾಗಿ ಓಡುವ ಟ್ರಕ್, ಇದೆಲ್ಲ ಭಾರತದಲ್ಲಿ ಮಾತ್ರ ಸಾಧ್ಯ
ಕಪ್ಪು ಬಣ್ಣದ ನಾಯಿಯೊಂದು ಆಗಸಕ್ಕೆ ಮುಖ ಮಾಡಿ ಕುಳಿತಿದೆ. ಸುರಿಯುತ್ತಿರುವ ಹಿಮವನ್ನು ಬೆರಗು ಕಣ್ಣಿನಲ್ಲಿ ನೋಡುವುದರ ಜತೆಯಲ್ಲಿ ಅದನ್ನು ಬಾಯಿಯಲ್ಲಿ ಹಿಡಿದು ರುಚಿ ನೋಡುವ ಪ್ರಯತ್ನವನ್ನೂ ಮಾಡುತ್ತಿದೆ. ಇಂತಹ ಸುಂದರ ದೃಶ್ಯವಿರುವ ವಿಡಿಯೋವನ್ನು ವಿರೇಟ್ ಡಾಗ್ಸ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. “ಇವನ ಹೆಸರು ಕೆಲೆಕ್ಸ್. ಇದು ಇವನಿಗೆ ಮೊದಲನೇ ಹಿಮ ಮಳೆ. ಇವನು ಹಿಮವನ್ನು ಇಂಚಿಂಚಾಗಿಯೂ ಸಂಭ್ರಮಿಸಲು ಬಯಸುತ್ತಿದ್ದಾನೆ. ಹಾಗೆಯೇ ಅದರ ರುಚಿಯನ್ನೂ ನೋಡ ಬಯಸುತ್ತಿದ್ದಾನೆ” ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ. 17 ಸೆಕೆಂಡುಗಳಿಷ್ಟಿರುವ ಈ ವಿಡಿಯೋವನ್ನು 13 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 29 ಸಾವಿರದಷ್ಟು ಮಂದಿ ಲೈಕ್ ಕ್ಲಿಕ್ಕಿಸಿದ್ದಾರೆ.
“ಏಕೋ ಗೊತ್ತಿಲ್ಲ, ಕೆಲೆಕ್ಸ್ ತುಂಬ ಮುದ್ದಾಗಿ ಕಾಣುತ್ತಿದ್ದಾನೆ” ಎಂದು ಕೆಲವರು ಹೇಳಿದರೆ, ಕೆಲೆಕ್ಸ್ ಅನ್ನು ಎತ್ತಿ ಮುದ್ದಾಡಬೇಕು ಎನಿಸುತ್ತಿದೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video | ಮನದೊಡತಿ ಮಡದಿಗೆ ಅದ್ಭುತ ಉಡುಗೊರೆ ಕೊಟ್ಟ ಪತಿ; ರಿಸೆಪ್ಷನ್ನಲ್ಲಿ ವಿಶೇಷ ಕ್ಷಣ