Site icon Vistara News

Viral Video: ಮನೆ ಕಟ್ಟಿಸಿದ; ಆ ಮನೆಯ ಮೇಲೆ ಆಟೊ ನಿಲ್ಲಿಸಿದ! ಇದರ ಕಥೆ ಕುತೂಹಲಕರ!

Viral Video:

ಕೆಲವರು ತಮ್ಮ ವಾಹನಗಳನ್ನು (own vehicle) ಪ್ರಾಣಕ್ಕಿಂತ ಹೆಚ್ಚು ಜೋಪಾನ ಮಾಡುತ್ತಾರೆ. ಮನೆಯಲ್ಲಿರುವ ಅಪ್ಪ. ಆಮ್ಮ, ಹೆಂಡತಿ, ಮಕ್ಕಳಿಗಿಂತ ಹೆಚ್ಚು ಮುದ್ದಿಸುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ (social media) ಹರಿದಾಡುತ್ತಿರುವ ಆಟೋ ಚಾಲಕನ (auto driver) ಈ ವಿಡಿಯೋವೊಂದು (Viral Video) ನೆಟ್ಟಿಗರಿಂದ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

ವೃತ್ತಿ ಯಾವುದೇ ಇರಲಿ. ತಾವು ಮಾಡುವ ಕೆಲಸದ ಬಗ್ಗೆ ಎಲ್ಲರಿಗೂ ಗೌರವ, ಪ್ರೀತಿ ಇದ್ದೇ ಇರುತ್ತದೆ. ಇದಕ್ಕೆ ಸಾಕ್ಷಿ ಈ ಆಟೋ ಚಾಲಕ. ಬದುಕಿಗೆ ಆಸರೆಯಾಗಿರುವ ಆಟೋ ಮೇಲಿನ ಆತನ ಪ್ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ.

ಏನು ಮಾಡಿದ್ದಾನೆ ಈ ಆಟೋ ಚಾಲಕ?

ಆಟೋ ಚಾಲಕ ತನ್ನ ವೃತ್ತಿ ಗೆ ತೋರಿದ ಪ್ರೀತಿ ಮತ್ತು ಗೌರವ ಲಕ್ಷಾಂತರ ಮಂದಿಯ ಗಮನ ಸೆಳೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾನ್ಯವಾಗಿ ಹೊಸದಾಗಿ ಖರೀದಿ ಮಾಡಿದ ವಾಹನದ ಮೇಲೆ ಒಂದಷ್ಟು ದಿನ ಹೆಚ್ಚಿನ ಪ್ರೀತಿ ತೋರಿಸುತ್ತೇವೆ. ಆದರೆ ದಿನ ಕಳೆದಂತೆ ಆ ಪ್ರೀತಿ ಕಡಿಮೆಯಾಗುತ್ತ ಹೋಗುತ್ತದೆ. ಆಟೋ, ಟ್ಯಾಕ್ಸಿ ಚಾಲಕರಿಗೆ ಅದು ಅವರ ಹೊಟ್ಟೆಪಾಡು ಮಾತ್ರವಲ್ಲ ಬದುಕಿನ ಸಂಪೂರ್ಣ ಆಸರೆಯಾಗಿರುತ್ತದೆ. ಈ ಆಟೋ ಚಾಲಕನಿಗೆ ಆಟೋ ಇಲ್ಲದೇ ಇದ್ದರೆ ತನ್ನ ಒಂದು ಕನಸು ನನಸಾಗುತ್ತಲೇ ಇರಲಿಲ್ಲ ಎಂಬ ಯೋಚನೆ ಬಂದಿದ್ದೇ ತಡ ತನ್ನ ಆಟೋಗೆ ಅತ್ಯುನ್ನತ ಸ್ಥಾನ ನೀಡಬೇಕೆಂದು ನಿರ್ಧರಿಸಿದ.


ಏನಾಗಿತ್ತು ಕನಸು?

ಸ್ವಂತ ಮನೆ ಕಟ್ಟಬೇಕು ಎನ್ನುವ ಕನಸು ಎಲ್ಲರಲ್ಲಿ ಇರುವಂತೆ ಈ ಆಟೋ ಚಾಲಕನಲ್ಲೂ ಇತ್ತು. ಅದಕ್ಕಾಗಿ ಹಗಲು ರಾತ್ರಿ ಆಟೋದಲ್ಲಿ ದುಡಿದು ಕಷ್ಟಪಟ್ಟ. ಒಂದು ವೇಳೆ ತನ್ನ ಬಳಿ ಆಟೋ ಇಲ್ಲದೇ ಇದ್ದಿದ್ದರೆ ಸ್ವಂತ ಮನೆಯ ಕನಸು ಯಾವತ್ತೂ ನನಸಾಗುತ್ತಿರಲಿಲ್ಲ. ಆದ್ದರಿಂದ ಆಟೋಗೆ ತನ್ನ ಬದುಕಿನಲ್ಲಿ ಅತ್ಯುನ್ನತ ಸ್ಥಾನ ನೀಡಬೇಕೆಂದು ನಿರ್ಧರಿಸಿ ಆಟೋ ವನ್ನು ಕ್ರೇನ್ ನ ಸಹಾಯದಿಂದ ಹೊಸ ಮನೆಯ ಮೇಲೆ ಇರಿಸಿದ್ದಾನೆ. ಹೊಸ ಮನೆಯ ಛಾವಣಿಯ ಮೇಲೆ ತನ್ನ ಪ್ರೀತಿಯ ಆಟೋವನ್ನು ನಿಲ್ಲಿಸಿ ಅದಕ್ಕೆ ಗೌರವ ನೀಡಿದ್ದಾನೆ.

ಇದನ್ನೂ ಓದಿ: Viral News: ಕಂಪನಿಯಲ್ಲಿ 1 ವರ್ಷ ವೇತನ ಸಹಿತ ರಜೆ ಪಡೆದ ಉದ್ಯೋಗಿ; ಈ ಲಕ್‌ ನಿಮ್ಮದಾಗಬೇಕೆ? ಹೀಗೆ ಮಾಡಿ

ಇದರ ವಿಡಿಯೋ ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಈವರೆಗೆ ಸುಮಾರು 16 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

ಇದಕ್ಕೆ ಸಾಕಷ್ಟು ಮಂದಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಮನೆ ಕಟ್ಟುವ ಕನಸು ಹೊಂದಿರದ ಆಟೋ ಚಾಲಕ ತನ್ನ ಸ್ವಂತ ಆಟೋದಲ್ಲಿ ಕಷ್ಟಪಟ್ಟು ದುಡಿದು ಗಳಿಸಿದ ಹಣದಲ್ಲಿ ಮನೆ ಕಟ್ಟಿರುವುದಕ್ಕೆ ಮೆಚ್ಚುಗೆಯ ಹೊಳೆಯೇ ಹರಿದು ಬರುತ್ತಿದೆ.

Exit mobile version