Site icon Vistara News

Viral Video : ಆನೆಗಳ ಹಿಂಡು ಮರಿಗಳನ್ನು ಸಿಂಹದಿಂದ ರಕ್ಷಿಸಿಕೊಳ್ಳುವುದಕ್ಕೆ ಏನೆಲ್ಲ ಮಾಡುತ್ತವೆ ನೋಡಿ

elephant secures calves

ಬೆಂಗಳೂರು: ಪ್ರಾಣಿಗಳ ಬೇಟೆ, ಅವುಗಳ ತುಂಟಾಟದಂತಹ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹರಿದಾಡಿ ವೈರಲ್‌ ಆಗುತ್ತಿರುತ್ತದೆ. ಅದೇ ರೀತಿ ಇದೀಗ ಆನೆಯ ಹಿಂಡಿನ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಆನೆಗಳು ತಮ್ಮ ಮರಿಗಳನ್ನು ಸಿಂಹದ ಬಾಯಿಯಿಂದ ರಕ್ಷಿಸಿಕೊಳ್ಳಲು ಮಾಡುವ ಕೆಲಸ ನೆಟ್ಟಿಗರಿಂದ ಮೆಚ್ಚುಗೆ (Viral Video) ಪಡೆದುಕೊಳ್ಳುತ್ತಿದೆ.

ಆನೆಗಳ ಹಿಂಡು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿರುತ್ತದೆ. ಹಿಂಡಿನಲ್ಲಿ ಐದು ದೊಡ್ಡ ಆನೆಗಳು ಹಾಗೂ ಎರಡು ಆನೆ ಮರಿಗಳು ಇರುತ್ತವೆ. ಆಗ ಇದ್ದಕ್ಕಿದ್ದಂತೆ ಅಲ್ಲೊಂದು ಸಿಂಹ ಇರುವುದು ಆನೆಗಳಿಗೆ ಕಾಣಿಸಿಕೊಳ್ಳುತ್ತದೆ. ತಕ್ಷಣ ಆನೆಗಳು ತಮ್ಮ ಮರಿಗಳನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ವೃತ್ತವೊಂದನ್ನು ಮಾಡಿಕೊಂಡು ಮರಿಗಳನ್ನು ಅದರ ಒಳಗೆ ಬಿಟ್ಟುಕೊಂಡು ರಕ್ಷಿಸುತ್ತವೆ.

ಇದನ್ನೂ ಓದಿ: Viral Video: ಮದುವೆ ಮನೆಯಲ್ಲಿ ವರನಿಗೆ ಥಳಿಸಿದ ವಧುವಿನ ಕುಟುಂಬ; ಬೋಳುತಲೆ ತಂದಿಟ್ಟ ಫಜೀತಿ
ಈ ದೃಶ್ಯವಿರುವ ವಿಡಿಯೊವನ್ನು ಭಾರತೀಯ ಅರಣ್ಯ ಅಧಿಕಾರಿಯಾಗಿರುವ ಸುಶಾಂತ್‌ ನಂದ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಜತೆ, “ಸಿಂಹವನ್ನು ನೋಡಿದ ನಂತರ, ಆನೆಗಳು ಎಳೆಯ ಮರಿಗಳ ಸುತ್ತಲೂ ವೃತ್ತವನ್ನು ರಚಿಸುತ್ತವೆ ಮತ್ತು ಅದನ್ನು ರಕ್ಷಿಸುತ್ತವೆ. ಕಾಡಿನಲ್ಲಿ, ಆನೆ ಹಿಂಡಿಗಿಂತ ಯಾವುದೇ ಪ್ರಾಣಿ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.


ಈ ವಿಡಿಯೊವನ್ನು ಸುಶಾಂತ್‌ ಅವರು ಜುಲೈ 12ರಂದು ಹಂಚಿಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೆ ವಿಡಿಯೊ ಎರಡು ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. 8,200ಕ್ಕೂ ಅಧಿಕ ಮಂದಿ ವಿಡಿಯೊವನ್ನು ಲೈಕ್‌ ಮಾಡಿದ್ದಾರೆ. ನೂರಾರು ಮಂದಿ ಈ ಟ್ವೀಟ್‌ ಅನ್ನು ರಿಟ್ವೀಟ್‌ ಮಾಡಿದ್ದಾರೆ. ಹಾಗೆಯೇ ನೂರಾರು ಮಂದಿ ವಿಡಿಯೊಗೆ ಮೆಚ್ಚುಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: Viral News: ಟೊಮ್ಯಾಟೊ ಬೆಲೆ, ಏನು ನಿನ್ನ ಲೀಲೆ; ಪತ್ನಿಯ ಕೇಳದೆ ಅಡುಗೆಗೆ ಟೊಮ್ಯಾಟೊ ಹಾಕಿದ್ದಕ್ಕೆ ಕೋಲಾಹಲ!
“ಆನೆಗಳಿಗೆ ತಕ್ಷಣಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಸಾಮರ್ಥ್ಯವಿರುತ್ತದೆ. ಅವುಗಳು ಮರಿಗಳನ್ನು ರಕ್ಷಣೆ ಮಾಡುವ ರೀತಿಯೇ ಅದ್ಭುತ. ಪ್ರಪಂಚ ಸೂಪರ್‌ ತಾಯಂದಿರೆಂದರೆ ಅದು ಆನೆಗಳೇ”, “ಆನೆಗಳನ್ನು ದ್ವೇಷಿಸುವುದಕ್ಕೆ ಕಾರಣಗಳೇ ಸಿಗುವುದಿಲ್ಲ. ಈ ರೀತಿ ಅವುಗಳು ಮಕ್ಕಳನ್ನು ರಕ್ಷಣೆ ಮಾಡುವುದನ್ನು ನೋಡಿದರೆ ಪ್ರೀತಿ ಇನ್ನಷ್ಟು ಹೆಚ್ಚಾಗುತ್ತದೆ”, “ಈ ವಿಡಿಯೊ ನೋಡುತ್ತಿದ್ದರೆ ಆನೆಗಳು ನಮ್ಮನ್ನೇ ರಕ್ಷಿಸಿದವೇನೋ ಅನಿಸುತ್ತದೆ” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಅದಷ್ಟೇ ಅಲ್ಲದೆ, “ವಾವ್‌”, “ಸೂಪರ್”‌ ಎನ್ನುವಂತಹ ಹತ್ತಾರು ಕಾಮೆಂಟ್‌ಗಳನ್ನು ನಾವಿಲ್ಲಿ ಕಾಣಬಹುದು.

ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version