ಅಹಮದಾಬಾದ್: ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಮತ್ತು ಆಟಗಾರರನ್ನು ನೋಡಲು ಮೈದಾನಕ್ಕೆ ಬರುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಬ್ಬ ಭೂಪ ಕೆಕೆಆರ್(Kolkata Knight Riders) ಮತ್ತು ಗುಜರಾತ್ ಟೈಟಾನ್ಸ್(Gujarat Titans) ನಡುವಣ ಪಂದ್ಯದ ವೇಳೆ ಚೆಂಡನ್ನು ಕದ್ದು ಸಿಕ್ಕಿಬಿದ್ದಿದ್ದಾನೆ. ಬಳಿಕ ಪೊಲೀಸರಿಂದ ಈತನಿಗೆ ಹಿಗ್ಗಾಮುಗ್ಗಾ ಗೂಸಾ ಬಿದ್ದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral video) ಆಗಿದೆ.
ಸೋಮವಾರದ ಐಪಿಎಲ್ ಪಂದ್ಯದಲ್ಲಿ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಬೇಕಿತ್ತು. ಇದೇ ಪಂದ್ಯ ವೀಕ್ಷಣೆಗೆ ಬಂದ ಅಭಿಮಾನಿಯೊಬ್ಬ ರಿಂಕು ಸಿಂಗ್(Rinku Singh) ಜೆರ್ಸಿ ತೊಟ್ಟು, ಆಟಗಾರರು ಪಂದ್ಯಕ್ಕೂ ಮುನ್ನ ನಡೆಸುತ್ತಿದ್ದ ಅಭ್ಯಾಸವನ್ನು ನೋಡುತ್ತಿದ್ದ. ಇದೇ ವೇಳೆ ಅಲ್ಲಿದ್ದ ಪಂದ್ಯದ ಬಾಲ್ ಕದಿಯಲು ಪ್ರಯತ್ನಿಸಿದ್ದಾನೆ. ಚೆಂಡು ಕದ್ದು ತನ್ನ ಪ್ಯಾಂಟ್ನ ಒಳಗಡೆ ಬಚ್ಚಿಟ್ಟಿದ್ದ. ಇದು ಭದ್ರತಾ ಸಿಬ್ಬಂದಿ ಗಮನಕ್ಕೆ ಬಂದಿದೆ. ಕೂಡಲೇ ಆತನನ್ನು ವಿಚಾರಿಸಿದಾಗ ಆತ ಪ್ಯಾಂಟ್ನ ಒಳಗಡೆ ಬಚ್ಚಿಟ್ಟ ಚೆಂಡನ್ನು ಹಿಂದಿರುಗಿಸಿದ್ದಾನೆ. ಕಳ್ಳತನ ಮಾಡಿದ ತಪ್ಪಿಗಾಗಿ ಭದ್ರತಾ ಸಿಬ್ಬಂದಿ ಆತನಿಗೆ ಸರಿಯಾಗಿ 2 ಗೂಸಾ ಕೊಟ್ಟಿದ್ದಾರೆ.
ಈ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಪರಿಣಾಮ ಗುಜರಾತ್ ಟೈಟಾನ್ಸ್ ಟೂರ್ನಿಯಿಂದ ಹೊರ ಬಿದ್ದ ಸಂಕಟಕ್ಕೆ ಸಿಲುಕಿತು. ಸ್ಟೇಡಿಯಮ್ನಲ್ಲಿ ಸೇರಿದ್ದ 45,000 ಅಭಿಮಾನಿಗಳು ಪಂದ್ಯ ಆರಂಭವಾಗುವ ನಿರೀಕ್ಷೆಯಿಂದ ಸ್ಥಳದಿಂದ ಕದಲಲಿಲ್ಲ. ರಾತ್ರಿ 10:56 ಕ್ಕೆ 5 ಓವರ್ಗಳ ಪಂದ್ಯದ ಕಟ್ ಆಫ್ ಸಮಯವಾಗಿತ್ತು. ಮೈದಾನದ ಸಿಬ್ಬಂದಿ ಎಲ್ಲ ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ ಆಡಿಲು ಯಾವುದೇ ಅವಕಾಶ ದೊರೆಯಲಿಲ್ಲ. ರಾತ್ರಿ 10:40 ರ ಸುಮಾರಿಗೆ ಅಧಿಕಾರಿಗಳು ಪಂದ್ಯವನ್ನು ರದ್ದುಗೊಳಿಸಿದರು.
ಇದನ್ನೂ ಓದಿ IPL 2024 : ಆರ್ಸಿಬಿ, ಆರ್ಆರ್ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು
ಗುಜರಾತ್ ಟೈಟಾನ್ಸ್ ಪ್ಲೇಆಫ್ನಲ್ಲಿ ಸ್ಥಾನ ಪಡೆಯುವ ರೇಸ್ನಿಂದ ಹೊರಗುಳಿದಿದೆ. ಹಾರ್ದಿಕ್ ಪಾಂಡ್ಯ ನಿರ್ಗಮನ ಮತ್ತು ಮೊಹಮ್ಮದ್ ಶಮಿ ಗಾಯಗೊಂಡ ನಂತರ ಜಿಟಿಗೆ ಉತ್ತಮ ಅನುಕೂಲಗಳು ಸಿಗಲಿಲ್ಲ. ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಮುಂದಿನ ಸುತ್ತಿಗೆ ಪ್ರವೇಶಿಸುವ ಅವಕಾಶ ಆ ತಂಡಕ್ಕೆ ಇತ್ತು. ಆದರೆ, ಮಳೆ ಅವರ ಭರವಸೆಗಳನ್ನು ಭಗ್ನಗೊಳಿಸಿತು.
ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ಕೆಕೆಆರ್ | 13 | 9 | 3 | 19 (+1.428) |
ರಾಜಸ್ಥಾನ್ ರಾಯಲ್ಸ್ | 12 | 8 | 4 | 16 (+0.349) |
ಚೆನ್ನೈ | 13 | 7 | 6 | 14 (+0.528) |
ಹೈದರಾಬಾದ್ | 12 | 7 | 5 | 14 (+0.406) |
ಆರ್ಸಿಬಿ | 13 | 6 | 7 | 12 (+0.387) |
ಡೆಲ್ಲಿ | 13 | 6 | 7 | 12 (-0.482) |
ಲಕ್ನೋ | 12 | 6 | 6 | 12 (-0.769) |
ಗುಜರಾತ್ | 13 | 5 | 7 | 11 (-1.063) |
ಮುಂಬೈ | 13 | 4 | 9 | 8 (-0.271) |
ಪಂಜಾಬ್ | 12 | 4 | 8 | 8 (-0.423) |