Site icon Vistara News

Viral Video : ಅಪ್ಪ-ಮಗಳ ನೃತ್ಯಕ್ಕೆ ಮನಸೋಲದವರಿಲ್ಲ; ಹೇಗಿದೆ ನೋಡಿ ಈ ವೈರಲ್ ವಿಡಿಯೊ

#image_title

ಬೆಂಗಳೂರು: ಈಗಿನ ಮದುವೆ ಕಾರ್ಯಕ್ರಮಗಳೆಂದರೆ ಅಲ್ಲಿ ಸಂಗೀತ ಕಾರ್ಯಕ್ರಮ ಇರಲೇ ಬೇಕು. ಹಸೆಮಣೆ ಏರಲಿರುವ ವಧು-ವರ, ಅವರ ಕುಟುಂಬಗಳು, ಸ್ನೇಹಿತರು ಹೀಗೆ ಎಲ್ಲರೂ ವೇದಿಕೆ ಮೇಲೆ ನೃತ್ಯ ಮಾಡಿ ತಮ್ಮ ಕಲೆ ಪ್ರದರ್ಶಿಸುವವರೇ. ಅದೇ ರೀತಿಯ ಸಂಗೀತ ಕಾರ್ಯಕ್ರಮದ ವಿಡಿಯೊ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.

ಇದನ್ನೂ ಓದಿ: Viral Video : ಶಾಲೆಗೆ ವಿದ್ಯಾರ್ಥಿಗಳ ಬದಲಾಗಿ ಬಂದಿದ್ದು ಈ ವಿಶೇಷ ವ್ಯಕ್ತಿ! ಇಲ್ಲಿದೆ ನೋಡಿ ವೈರಲ್ ವಿಡಿಯೊ

ವೇದಿಕೆ ಮೇಲಿರುವ ರುಚಿಕಾ ಹೆಸರಿನ ವಧು ದೀಪಿಕಾ ಪಡುಕೋಣೆ ಅವರ ‘ಉಫ್ ತೆರಿ ಅದಾ’ ಹಾಡಿಗೆ ನೃತ್ಯ ಮಾಡುತ್ತಿದ್ದಾಳೆ. ಆಕೆಗೆ ಜತೆಯಾಗಿ ಆಕೆಯ ತಂದೆ ಕೂಡ ನೃತ್ಯ ಮಾಡುತ್ತಿದ್ದಾರೆ. ವಧುವಿನಷ್ಟೇ ಎನರ್ಜಿ ಹಾಕಿ ಆಕೆಯ ತಂದೆ ಕುಣಿದಿದ್ದನ್ನು ಕಂಡು ಅಲ್ಲಿದ್ದವರೆಲ್ಲರೂ ಆಶ್ಚರ್ಯದಿಂದ ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆಯಲಾರಂಭಿಸಿದ್ದಾರೆ. ವಧು ಬೆಳ್ಳಿಯ ಬಣ್ಣದ ಲೆಹೆಂಗಾ ತೊಟ್ಟು ಮಿಂಚುತ್ತಿದ್ದರೆ, ಆಕೆಯ ತಂದೆ ಬಿಳಿ ಬಣ್ಣದ ಕೋಟ್ ಮತ್ತು ಪ್ಯಾಂಟನ್ನು ತೊಟ್ಟಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಈ ಅಪ್ಪ ಮಗಳ ಜೋಡಿಯ ನೃತ್ಯವನ್ನು ಶಾದಿಬಿಟಿಎಸ್ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊ ಲಕ್ಷಾಂತರ ಜನರಿಂದ ವೀಕ್ಷಣೆ ಪಡೆದಿದ್ದು, ಸಾವಿರಾರು ಮಂದಿ ವಿಡಿಯೊಗೆ ಲೈಕ್ ಒತ್ತಿದ್ದಾರೆ. “ಇಷ್ಟು ಸಾಥ್ ಕೊಡುವ ತಂದೆಯನ್ನು ಪಡೆದಿರುವ ನೀವೇ ಪುಣ್ಯವಂತರು” ಎಂದು ಅನೇಕರು ಕಾಮೆಂಟ್ ಮಾಡಲಾರಂಭಿಸಿದ್ದಾರೆ.

Exit mobile version