Site icon Vistara News

Viral Video : ʼಇವರೇ ನೋಡಿ ಫಾದರ್‌ ಆಫ್‌ ದಿ ಇಯರ್‌ʼ ಎನ್ನುತ್ತಿದ್ದಾರೆ ನೆಟ್ಟಿಗರು; ವೈರಲ್‌ ಆಗಿದೆ ವಿಡಿಯೊ

#image_title

ಬೆಂಗಳೂರು: ಇದು ಎಲ್ಲ ಶಾಲೆಗಳಲ್ಲಿ ವಾರ್ಷಿಕೋತ್ಸವದ ಸಮಯ. ವಿದ್ಯಾರ್ಥಿಗಳ ಅಮ್ಮಂದಿರಿಗೆ ಮಕ್ಕಳಿಗೆ ನೃತ್ಯವನ್ನು ಅಭ್ಯಾಸ ಮಾಡಿಸುವುದರಿಂದ ಹಿಡಿದು, ಅವರನ್ನು ಸಿದ್ಧ ಮಾಡಿ, ವೇದಿಕೆಗೆ ಕಳುಹಿಸಿ ನೃತ್ಯ ಮಾಡಿಸುವವರೆಗೆ ಎಲ್ಲವೂ ಒಂದು ರೀತಿಯಲ್ಲಿ ಒತ್ತಡವೇ. ಅದೇ ರೀತಿ ಇಲ್ಲೊಂದು ಮಗು ವೇದಿಕೆ ಮೇಲೆ ನೃತ್ಯ ಮಾಡುತ್ತಿದೆ. ಆದರೆ ಜನರು ಮಗುವಿನ ನೃತ್ಯ ನೋಡುವ ಬದಲು ಅವಳ ಅಪ್ಪನನ್ನು ನೋಡಲಾರಂಭಿಸಿದ್ದಾರೆ. “ಇವರೇ ಫಾದರ್‌ ಆಫ್‌ ದಿ ಇಯರ್‌” ಎಂದೂ ಹೊಗಳಲಾರಂಭಿಸಿದ್ದಾರೆ. ವೈರಲ್‌ (Viral Video) ಆಗಿರುವ ಆ ವಿಡಿಯೊದಲ್ಲಿ ಏನಿದೆ ಎನ್ನುವುದನ್ನು ನೀವೇ ನೋಡಿ.

ಇದನ್ನೂ ಓದಿ: Viral News: ರಸ್ತೆಯಿಂದ ಹಿಡಿದು ಮೊಬೈಲ್‌ ಟವರ್‌ವರೆಗೆ; ಭಾರತದಲ್ಲಿ ಕಳ್ಳತನವಾದ ವಿಚಿತ್ರ ವಸ್ತುಗಳಿವು
ಮಕ್ಕಳು ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದಾರೆ. ಎಲ್ಲ ಮಕ್ಕಳ ಪೋಷಕರು ವೇದಿಕೆಯ ಕೆಳ ಭಾಗದಲ್ಲಿ ಕುಳಿತುಕೊಂಡು ತಮ್ಮ ಮಕ್ಕಳ ನೃತ್ಯವನ್ನು ವಿಡಿಯೊ ಮಾಡಿಕೊಳ್ಳುತ್ತಿದ್ದಾರೆ. ಆದರೆ ಆ ಒಬ್ಬ ಹೆಣ್ಣು ಮಗುವಿನ ತಂದೆ ಮಾತ್ರ ವೇದಿಕೆ ಕೆಳ ಭಾಗದಲ್ಲಿ ಕುಳಿತು ವೇದಿಕೆ ಮೇಲಿರುವ ಮಗಳಿಗೆ ನೃತ್ಯದ ಸ್ಟೆಪ್‌ಗಳನ್ನು ನೆನಪು ಮಾಡಿಸುತ್ತಿದ್ದಾರೆ. ಆಕೆಯ ನೃತ್ಯದ ಎಲ್ಲ ಸ್ಟೆಪ್‌ಗಳನ್ನೂ ಅಭ್ಯಾಸ ಮಾಡಿಕೊಂಡಿರುವ ಅವರು ಮಗಳು ಎಲ್ಲೂ ತಪ್ಪದಿರಲಿ ಎಂದು ಪೂರ್ತಿ ನೃತ್ಯವನ್ನೂ ಅವಳಿಗೆ ನೆನಪು ಮಾಡಿಸಿದ್ದಾರೆ.


ಸಾಮಾನ್ಯವಾಗಿ ಈ ರೀತಿ ತಾಯಂದಿರುವ ತಮ್ಮ ಮಕ್ಕಳಿಗೆ ವೇದಿಕೆ ಕೆಳಗಿಂದಲೇ ನೃತ್ಯದ ಸ್ಟೆಪ್‌ಗಳನ್ನು ನೆನಪು ಮಾಡಿಕೊಡುವುದನ್ನು ನೋಡಿರುತ್ತೀರಿ. ಆದರೆ ಇಲ್ಲಿ ತಂದೆಯೇ ಈ ರೀತಿ ಮಾಡಿರುವುದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ.

ಐಪಿಎಸ್‌ ಅಧಿಕಾರಿಯಾಗಿರುವ ದೀಪಾಶ್‌ ಕಾಬ್ರಾ ಅವರು ಈ ವಿಡಿಯೊವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಫಾದರ್‌ ಆಫ್‌ ದಿ ಇಯರ್‌ ಇವರಿಗೇ ಸಲ್ಲುತ್ತದೆ” ಎಂದು ವಿಡಿಯೊಗೆ ಕ್ಯಾಪ್ಶನ್‌ ಕೊಟ್ಟಿದ್ದಾರೆ. 24 ಸೆಕೆಂಡುಗಳಷ್ಟಿರುವ ಈ ವಿಡಿಯೊ ಮೂರು ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಿಸಲ್ಪಟ್ಟಿದೆ. ಸಾವಿರಾರು ಮಂದಿ ವಿಡಿಯೊಗೆ ಲೈಕ್‌ ಒತ್ತಿದ್ದು, ಶೇರ್‌ ಮಾಡಿಕೊಂಡಿದ್ದಾರೆ.

“ಹೆಣ್ಣು ಮಕ್ಕಳ ಪಾಲಿಗೆ ಯಾವತ್ತಿಗೂ ಅಪ್ಪ ಫೇವರಿಟ್‌ ಆಗಿಯೇ ಇರುತ್ತಾರೆ”, “ಅಪ್ಪ ಮಕ್ಕಳ ಬೆನ್ನೆಲುಬು” ಎಂದು ಅನೇಕರು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಹಲವಾರು ಮಂದಿ ತಮ್ಮಿಂದ ದೂರಾಗಿರುವ ತಂದೆಯ ನೆನಪುಗಳನ್ನು ಕಾಮೆಂಟ್‌ಗಳಲ್ಲಿ ಹಂಚಿಕೊಂಡಿದ್ದಾರೆ.

Exit mobile version