ದೆಹಲಿ ಮೆಟ್ರೋ (delhi metro) ಎಲ್ಲರಿಗೂ ಈಗ ಹಾಸ್ಯದ ಕೇಂದ್ರವಾಗಿದೆ ಎನ್ನಬಹುದು. ಯಾಕೆಂದರೆ ಒಂದಲ್ಲ ಒಂದು ಕಾರಣಕ್ಕೆ ದೆಹಲಿ (delhi) ಮೆಟ್ರೋ ನಿರಂತರ ಸುದ್ದಿಯಾಗುತ್ತಲೇ ಇದೆ. ಇದೀಗ ಮೆಟ್ರೋದಲ್ಲಿ ಮಹಿಳೆಯರಿಬ್ಬರು ಹೊಡೆದಾಡಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದೆ. ದೆಹಲಿ ಮೆಟ್ರೋ ಬಗ್ಗೆ ಎಲ್ಲರೂ ಮತ್ತೊಮ್ಮೆ ತಮಾಷೆ ಮಾಡುವಂತಾಗಿದೆ.
ದೆಹಲಿ ಮೆಟ್ರೋದಲ್ಲಿ ಇತ್ತೀಚೆಗೆ ನಡೆದ ಘಟನೆಯಲ್ಲಿ ಇಬ್ಬರು ಮಹಿಳೆಯರು ಹೊಡೆದಾಡಿಕೊಂಡ ವಿಡಿಯೋ ಎಕ್ಸ್ (x) ನಲ್ಲಿ ವೈರಲ್ ಆಗಿದೆ. ಇದರಲ್ಲಿ ಒಬ್ಬ ಮಹಿಳೆ ಮತ್ತೊಬ್ಬರು ಮೆಟ್ರೋದಲ್ಲಿ ಕುಡಿದಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಹೊಡೆದಾಟಕ್ಕೆ ಕಾರಣವಾಗಿದೆ. ಮಹಿಳೆಯರಿಬ್ಬರು ಪರಸ್ಪರ ಕೂದಲು ಎಳೆದುಕೊಂಡು ಹೊಡೆದಾಡುತ್ತಿದ್ದರೆ ಉಳಿದವರು ನೋಡಿ ನಗುತ್ತಾ ವಿಡಿಯೋ ಮಾಡುತ್ತಿದ್ದರು.
ಎಕ್ಸ್ ನಲ್ಲಿ ಈ ವಿಡಿಯೋವನ್ನು ರಾಹುಲ್ ಶೈನಿ ಎಂಬವರು ಹಂಚಿಕೊಂಡಿದ್ದು, “ದಯೆಯುಳ್ಳ ಜನರ ದೆಹಲಿ ಎಂದಾದರೂ ಸುಧಾರಿಸುತ್ತದೆಯೇ? ಅದೇ ಪ್ರಸಿದ್ಧ ಸ್ಥಳವಾದ ಮೆಟ್ರೋದಲ್ಲಿ ಮತ್ತೆ ಮಹಿಳೆಯರ ನಡುವೆ ಜಗಳವಾಯಿತು…!! ನಂತರ ಪರಸ್ಪರ ಕಪಾಳ ಮೋಕ್ಷ ಮತ್ತು ಜಗಳ ನಡೆಯಿತು. ಜಗಳದ ನಂತರ ಇಬ್ಬರು ಮಹಿಳೆಯರು.” ಎಂಬ ಶೀರ್ಷಿಕೆ ನೀಡಲಾಗಿದೆ.
दिलवालों की दिल्ली क्या कभी सुधरेगी?🤦
— Rahul Saini (@JtrahulSaini) June 7, 2024
वही चर्चित स्थान मैट्रो मे फिर हुआ महिलाओं के बिच घमासान…!!
फिर चले थपड़,नोचे एक दूसरे के बाल दो महिलाओं में बहस के बाद शुरू हुई लड़ाई…!#Video_Viral pic.twitter.com/ZTtbVXIOG2
ವೈರಲ್ ಆದ ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅನೇಕರು ದೆಹಲಿ ಮೆಟ್ರೋಗೆ ಇಂತಹ ಘಟನೆಗಳನ್ನು “ಸಾಮಾನ್ಯ” ಎಂದು ಹೇಳಿದ್ದಾರೆ. ಕೆಲವರು ಇದನ್ನು ಹಾಸ್ಯ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ ಹಂಚಿಕೊಂಡಿರುವ ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಒಬ್ಬ ಬಳಕೆದಾರ, ಮೆಟ್ರೋ ಎಂದಿಗೂ ನಿರಾಶೆಗೊಳಿಸುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ದೆಹಲಿ ಮೆಟ್ರೋ ಮತ್ತೊಂದು ಹಾಸ್ಯ ಕುಚ್ ಭೀ ಹೋಥಾ ಕಭಿ ಭಿ (ಯಾವುದೇ ಸಮಯದಲ್ಲಿ ಏನು ಬೇಕಾದರೂ ಆಗಬಹುದು)” ಎಂದು ಸೇರಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು ಹಾಸ್ಯಮಯವಾಗಿ, “ಅಸ್ಲಿ ರೆಸ್ಲಿಂಗ್ ಟು ಮೆಟ್ರೋ ಮತ್ತು ಇಂಡಿಯನ್ ರೈಲ್ವೇ ಮೈ ಹೋತಿ ಹೈ (ನಿಜವಾದ ಕುಸ್ತಿ ದೆಹಲಿ ಮೆಟ್ರೋದಲ್ಲಿ ನಡೆಯುತ್ತದೆ)” ಎಂದು ಸೇರಿಸಿದ್ದಾರೆ. ಮತ್ತೊಬ್ಬರು, ಈ ಸಮಸ್ಯೆಯು ಇಂದು ಚಿಕ್ಕದಾಗಿ ಕಾಣಿಸಬಹುದು, ಆದರೆ ನಾಳೆ ಇದು ಬಹಳ ಮಹತ್ವದ್ದಾಗಬಹುದು. ದೆಹಲಿ ಮೆಟ್ರೋ ನಲ್ಲಿ ಹೊಡೆದಾಡುವ ಜನರಿಗೆ ದಂಡ ವಿಧಿಸಬೇಕು. ಎಂದು ಹೇಳಿದ್ದಾರೆ.