Site icon Vistara News

Viral Video: ಬಸ್‌, ರೈಲಿನಲ್ಲಿ ಮಾತ್ರ ಅಲ್ಲ.. ಫ್ಲೈಟ್‌ನಲ್ಲೂ ನಡೆಯುತ್ತೆ ಸೀಟಿಗಾಗಿ ಮಾರಾಮಾರಿ

Viral video

Fight Breaks Out Mid-Flight On Eva Air After Passenger Attempts To Steal Seat

ಕ್ಯಾಲಿಪೋರ್ನಿಯಾ: ಬಸ್‌ ರೈಲಿನಲ್ಲಿ ಸೀಟಿಗಾಗಿ ಪ್ರಯಾಣಿಕರ ನಡುವೆ ಜಗಳ ಆಗುವುದನ್ನು ನಾವು ಅದೆಷ್ಟೋ ಬಾರಿ ಕಂಡಿರುತ್ತೇವೆ. ಆದರೆ ಇಲ್ಲಿ ವಿಮಾನ(Flight)ದಲ್ಲಿಯೂ ಪ್ರಯಾಣಿಕರು ಸೀಟಿಗಾಗಿ ಹೊಡೆದಾಟ ನಡೆಸಿರುವ ಅಪರೂಪ ಘಟನೆ ವರದಿಯಾಗಿದೆ. ತೈವಾನ್‌(Taiwan)ನಿಂದ ಕ್ಯಾಲಿಫೋರ್ನಿಯಾ(California) ಹೋಗುತ್ತಿದ್ದ EVA ವಿಮಾನದಲ್ಲಿ ಪ್ರಯಾಣಿಕರಿಬ್ಬರು ಸೀಟಿಗಾಗಿ ಮಾರಾಮಾರಿ ನಡೆಸಿದ್ದಾರೆ. ಈ ಗಲಾಟೆಯ ದೃಶ್ಯವನ್ನು ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ಘಟನೆ ವಿವರ:

ಸುಮಾರು 11.5ಗಂಟೆಗಳ ಸುದೀರ್ಘ ಪ್ರಯಾಣ ಬೆಳೆಸಿದ್ದ EVA ವಿಮಾನದಲ್ಲಿ ಮಂಗಳವಾರ ಈ ಘಟನೆ ನಡೆದಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಪತ್ರಿಕೆಯ ವರದಿ ಪ್ರಕಾರ ಪಕ್ಷದಲ್ಲಿ ಕುಳಿತಿದ್ದ ವ್ಯಕ್ತಿ ನಿರಂತರವಾಗಿ ಕೆಮ್ಮುತ್ತಿದ್ದ ಕಾರಣ ಒಬ್ಬ ಪ್ರಯಾಣಿಕ ಖಾಲಿ ಇದ್ದ ಸೀಟ್‌ನಲ್ಲಿ ಹೋಗಗಿ ಕುಳಿತುಕೊಳ್ಳುತ್ತಾನೆ. ಆಗ ಮೊದಲೇ ಆ ಸೀಟ್‌ನಲ್ಲಿ ಕುಳಿತಿದ್ದ ವ್ಯಕ್ತಿ ಅಲ್ಲಿಗೆ ಬಮದು ತಕರಾರು ತೆಗೆದಿದ್ದಾನೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಇಬ್ಬರೂ ಪರಸ್ಪರ ಬಡಿದಾಡಿಕೊಂಡಿದ್ದಾರೆ.

ಪ್ರಯಾಣಿಕರ ಜಗಳ ಬಿಡಿಸಲು ವಿಮಾನ ಸಿಬ್ಬಂದಿ ಹರಸಾಹಸ ಪಟ್ಟರು. ಇಬ್ಬರು ಹಿಡಿದೆಳೆದು ಜಗಳ ನಿಲ್ಲಿಸಲು ಅವರು ಎಲ್ಲಾ ಪ್ರಯಾತ್ನ ನಡೆಸಿದರು. ಮತ್ತೊಂದೆಡೆ ಇವರಿಬ್ಬರ ಜಗಳ ಕಂಡು ಇತರೆ ಪ್ರಯಾಣಿಕರು ಗಾಬರಿಗೊಂಡು ಕಿರುಚಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಕೊನೆಗೆ ಇಬ್ಬರು ಸಮಾಧಾನಪಡಿಸಿ ಪರಸ್ಥಿತಿ ತಿಳಿಗೊಳಿಸುವಲ್ಲಿ ಸಿಬ್ಬಂದಿ ಸುಸ್ತು ಬಿದ್ದಿದ್ದರು. ಸ್ಯಾನ್‌ ಫ್ರಾನ್ಸಿಸ್ಕೋಕ್ಕೆ ವಿಮಾನ ಬಂದಿಳಿಯುತ್ತಿದ್ದಂತೆ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಲಾಗಿದೆ.

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಈ ವಿಡಿಯೋ 34,೦೦೦ ವ್ಯೂವ್ಸ್‌ ಪಡೆದುಕೊಂಡಿದ್ದು, ವಿಮಾನ ಸಿಬ್ಬಂದಿಯ ತಾಳ್ಮೇ ಮತ್ತು ಕರ್ತವ್ಯ ಪ್ರಜ್ಞೆಗೆ ಜನ ಸಲಾಂ ಹೇಳಿದ್ದಾರೆ. ಇನ್ನು ಆರೋಪಿಗಳಿಗೆ ಶಿಕ್ಷೆ ಆಗಿದೆಯೇ? ಅವರ ವಿರುದ್ಧ ಯಾವ ಕಾನೂನು ಕ್ರಮ ಕೈಗೊಳ್ಳಲಾಯಿತು ಎಂದು ಎಕ್ಸ್‌ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:Viral Video: ಪರ್ಸ್‌ ಎಗರಿಸಿ ಖುಷಿಯಲ್ಲಿದ್ದ ಕಳ್ಳನಿಗೆ ಕಾದಿತ್ತು ಬಿಗ್‌ ಶಾಕ್‌! ವಿಡಿಯೋ ಫುಲ್‌ ವೈರಲ್‌

ವಿಮಾನ ಪ್ರಯಾಣದ ವೇಳೆ ಅಶಿಸ್ತು ತೋರಿಸುವವರ ಬಗ್ಗೆ ವರದಿಯಾಗುವ ಪ್ರಕರಣಗಳು ಹೆಚ್ಚುತ್ತಿವೆ. ಏರ್ ಇಂಡಿಯಾ ವಿಮಾನದಲ್ಲೂ ಇಂತಹದ್ದೇ ಪ್ರಕರಣವೊಂದು ನಡೆದಿತ್ತು. ಪ್ರಯಾಣಿಕನೊಬ್ಬ ಮಲ-ಮೂತ್ರ ವಿಸರ್ಜನೆ ಮಾಡಿ, ಗಲೀಜು ಸೃಷ್ಟಿಸಿ ಬಂಧಿತನಾಗಿದ್ದ. ಮುಂಬಯಿ-ದೆಹಲಿ ಮಾರ್ಗದ ಎಐಸಿ 866 ಎಂಬ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ರಾಮ್ ಸಿಂಗ್ ಇಂಥ ಹೊಲಸು ಮಾಡಿದ್ದ. ಪೊಲೀಸರು ಎಫ್ ಐಆರ್ ದಾಖಲು ಮಾಡಿದ್ದಾರೆ.

Exit mobile version