ಕೋಪನ್‌ಹೇಗನ್: ದೇಶವೊಂದರ ಅಧ್ಯಕ್ಷ ಅಥವಾ ಪ್ರಧಾನ ಮಂತ್ರಿ ಎಂದಾಕ್ಷಣ ಅವರಿಗೆ ಅದೆಷ್ಟರ ಮಟ್ಟಿಗೆ ರಕ್ಷಣೆ ಇರುತ್ತದೆ ಎನ್ನುವುದನ್ನು ನೀವು ಅಂದಾಜಿಸಿಕೊಳ್ಳಬಹುದು. ಅದರಲ್ಲೂ ಯಾವುದೇ ದೇಶದ ಪ್ರಮುಖರು ಬೇರೆ ದೇಶಕ್ಕೆ ಹೋದಾಗ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುತ್ತದೆ. ಡೆನ್ಮಾರ್ಕ್‌ಗೆ ಫಾನ್ಸ್ ಅಧ್ಯಕ್ಷರು ಬಂದಾಗ ಅವರನ್ನು ನೋಡಿಕೊಂಡ ಬಗೆ ನೋಡಿದರೆ (Viral Video) ನೀವು ಅಚ್ಚರಿಪಡುತ್ತೀರಿ.
ಇದನ್ನೂ ಓದಿ: Viral Video | ಹಾಲಿವುಡ್ ಹಾಸ್ಯ ಕಲಾವಿದರಿಂದಲೂ ನಾಟು ನಾಟು ಹಾಡಿಗೆ ಹೆಜ್ಜೆ! ವಿಡಿಯೊ ಹಂಚಿಕೊಂಡ ಆನಂದ್ ಮಹೀಂದ್ರಾ
ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ ಹಾಗೂ ಆಗ ಡೆನ್ಮಾರ್ಕ್ ಪ್ರಧಾನಿ ಆಗಿದ್ದ ಲಾರ್ಸ್ ಲೊಕ್ಕೆ ರಾಸ್ಮುಸ್ಸೇನ್ ಸೈಕಲ್‌ನಲ್ಲಿ ಸಂಚಾರ ಆರಂಭಿಸುತ್ತಾರೆ. ಇಬ್ಬರೂ ಸೈಕಲ್‌ನಲ್ಲಿ ತೆರಳುವಾಗಲೇ ಪರಸ್ಪರ ಮಾತನಾಡಿಕೊಂಡು ಉಭಯ ದೇಶಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಸಾಕಷ್ಟು ದೂರ ಸೈಕಲ್‌ನಲ್ಲಿ ಪ್ರಯಾಣಿಸಿದ ನಂತರ ಸೈಕಲ್‌ನಿಂದ ಇಳಿದು, ಎಮ್ಯಾನ್ಯುಯೆಲ್ ಅವರು ರಾಸ್ಮುಸ್ಸೇನ್ ಅವರಿಗೆ ಟಿ-ಶರ್ಟ್ ಒಂದನ್ನು ಉಡುಗೊರೆಯಾಗಿ ನೀಡುತ್ತಾರೆ. ಖುಷಿಯಿಂದ ಇಬ್ಬರು ಗಣ್ಯರು ಅಪ್ಪಿಕೊಳ್ಳುತ್ತಾರೆ. 2018ರಲ್ಲಿ ಎಮ್ಯಾನ್ಯುಯೆಲ್ ಅವರು ಡೆನ್‌ಮಾರ್ಕ್‌ಗೆ ಭೇಟಿ ಕೊಟ್ಟಾಗಿನ ಘಟನೆ ಇದಾಗಿದ್ದು, ವೈರಲ್ ಆಗಿದೆ.
ಇಂತಹ ದೃಶ್ಯವಿರುವ ವಿಡಿಯೊವನ್ನು ಭಾರತದ ಹರ್ಷ್ ಗೊಯೆಂಕಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ “ಫ್ರೆಂಚ್ ಅಧ್ಯಕ್ಷರನ್ನು ಡೆನ್ಮಾರ್ಕ್ ಪ್ರಧಾನಿ ಬರಮಾಡಿಕೊಂಡ ರೀತಿಯಲ್ಲಿ ನಮಗೆ ನೀತಿ ಪಾಠವಿದೆ. ತುಂಬ ಸರಳವಾದ ಭೇಟಿಯಿದು, ಡೆನ್‌ಮಾರ್ಕ್ ಎಷ್ಟು ಸುರಕ್ಷಿತವಾಗಿದೆ ಎನ್ನುವುದನ್ನು ತೋರಿಸುತ್ತದೆ, ಆರೋಗ್ಯಕರವಾಗಿ ಜೀವಿಸುವುದನ್ನು ಉತ್ತೇಜಿಸುತ್ತದೆ, ಸೈಕಲ್ ಪ್ರಯಾಣ ಪರಿಸರಕ್ಕೂ ಹಾನಿಕರವಲ್ಲ” ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಸದ್ದು ಮಾಡಿದೆ. ಇಬ್ಬರೂ ಗಣ್ಯರ ಸರಳತೆಗೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.
ಇದನ್ನೂ ಓದಿ: Viral Video | ಇದು ಪ್ರಪಂಚದಲ್ಲೇ ಅತ್ಯಂತ ಕಷ್ಟದ ನೃತ್ಯವಂತೆ! ಅಬ್ಬಬ್ಬಾ, ಹೇಗಿದೆ ನೋಡಿ