ನವದೆಹಲಿ: ರೈಲು, ಬಸ್ಸುಗಳಲ್ಲಿ ಸಿಗರೇಟ್, ಮದ್ಯಪಾನ ಮಾಡುವುದು ಅಪರಾಧ. ಹಾಗೆಂದು ಗೊತ್ತಿದ್ದರೂ ಕೆಲವರು ರೈಲು, ಬಸ್ಸುಗಳಲ್ಲಿ ಸಿಗರೇಟ್ ಸೇದಿ ಶಿಕ್ಷೆಗೆ ಗುರಿಯಾಗುತ್ತಾರೆ. ಅದೇ ರೀತಿ ಇತ್ತೀಚೆಗೆ ಯುವತಿಯರು ಚಲಿಸುವ ರೈಲಿನೊಳಗೆ ಸಿಗರೇಟ್ ಸೇದಿರುವ ಆರೋಪ ಕೇಳಿಬಂದಿದೆ. ಈ ದೃಶ್ಯವಿರುವ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral Video: ಮನೆಗೆ ಬಿಡು ಎಂದು ಆಟೋ ಹತ್ತಲು ಬಂದ ಘೇಂಡಾಮೃಗ! ಮುಂದೇನಾಯ್ತು ನೋಡಿ
ಪರಮಾನಂದ್ ಕುಮಾರ್ ಹೆಸರಿನ ವ್ಯಕ್ತಿ ಸೋಮವಾರದಂದು ಟಾಟಾನಗರದಿಂದ ಕಟಿಹಾರ ರೈಲ್ವೆ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಅಸನ್ಸೋಲ್ ರೈಲ್ವೆ ನಿಲ್ದಾಣದಲ್ಲಿ ಒಂದಿಷ್ಟು ಯುವತಿಯರು ರೈಲು ಹತ್ತಿದ್ದಾರೆ. ಅವರು ಪೂರ್ತಿ ರಾತ್ರಿ ಸಿಗರೇಟ್ ಸೇದಿರುವುದಾಗಿ ಪರಮಾನಂದ್ ಅವರು ಹೇಳಿದ್ದಾರೆ. ಯುವತಿ ಸಿಗರೇಟ್ ಸೇದುತ್ತಿರುವ ವಿಡಿಯೊವನ್ನು ಚಿತ್ರೀಕರಿಸಿ ಟ್ವಿಟರ್ ಅಲ್ಲಿ ಹಾಕಿದ್ದಾರೆ.
ಪರಮಾನಂದ್ ಅವರು ಟ್ವಿಟರ್ ಅಲ್ಲಿ ವಿಡಿಯೊ ಹಂಚಿಕೊಂಡಿದ್ದು, ಅದಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನೂ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ರೈಲ್ವೆ ಸೇವಾ ಖಾತೆಯಿಂದ ಪ್ರತಿಕ್ರಿಯಿಸಲಾಗಿದ್ದು, ಪರಮಾನಂದ್ ಅವರ ಬಳಿ ಪ್ರಯಾಣದ ವಿವರವನ್ನು ಕೇಳಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಲಾಗಿದೆ.