Site icon Vistara News

Viral Video : ದೆಹಲಿ ಮೆಟ್ರೋದಲ್ಲೇ ಹೇರ್ ಸ್ಟ್ರೈಟ್​ನರ್​ ಬಳಸಿದ ಯುವತಿ, ವಿಡಿಯೊ ವೈರಲ್​!

delhi Viral Video

#image_title

ನವ ದೆಹಲಿ: ಡೆಲ್ಲಿ ಮೆಟ್ರೋ ರಾಷ್ಟ್ರ ರಾಜಧಾನಿಯ ನಿವಾಸಿಗಳಿಗೆ ಎರಡು ದಶಗಳಿಂದ ಜೀವನಾಡಿ ಎನಿಸಿಕೊಂಡಿದೆ. ಈ ಸಾರ್ವಜನಿಕ ಸಾರಿಗೆಯ ಅತ್ಯಂತ ಅನುಕೂಲಕರ ಹಾಗೂ ನಿರಾಳ ಎಂಬುದು ಅಲ್ಲಿನ ನಿವಾಸಿಗಳಿಗೆ ಸ್ಪಷವಿದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ, ದೆಹಲಿ ಮೆಟ್ರೋ ವಿಲಕ್ಷಣ ಕಾರಣಗಳಿಗಾಗಿ ಸುದ್ದಿಯಲ್ಲಿರುತ್ತದೆ. ಪ್ರಯಾಣಿಕರ ಅಶಿಸ್ತಿನ ಮತ್ತು ಅಸಾಮಾನ್ಯ ನಡವಳಿಕೆಯ ಕಾರಣಕ್ಕೆ ಪದೇ ಪದೇ ಸುದ್ದಿಗೆ ಗ್ರಾಸವಾಗುತ್ತದೆ. ಜಗಳಗಳು, ಪ್ರೇಮ ಪ್ರಸಂಗಗಳು, ಜೋಡಿಯ ಚುಂಬನದ ದೃಶ್ಯಗಳು, ವಿಡಿಯೊ ರೀಲ್​​ಗಳ ಮೇಕಿಂಗ್​, ವಿಚಿತ್ರ ಡ್ರೆಸಿಂಗ್ ಮಾಮೂಲಿ ಎನಿಸಿಕೊಂಡಿದೆ. ಇಂಥ ವಿಡಿಯೊಗಳಿಗೆ ಆನ್​ಲೈನ್​ನಲ್ಲಿ ಭರ್ಜರಿ ಪ್ರತಿಕ್ರಿಯೆ ಬೇರೆ ಸಿಗುತ್ತದೆ. ಇದೀಗ ಡೆಲ್ಲಿ ಮೆಟ್ರೊದಲ ಮತ್ತೊಂದು ವಿಡಿಯೊ ಹರಿದಾಡುತ್ತಿದ್ದು, ಯುವತಿಯೊಬ್ಬಳು ಪ್ರಯಾಣದ ನಡುವೆಯೇ ಹೇರ್​ ಸ್ಟ್ರೈಟ್​ ಮಾಡಿಕೊಳ್ಳುತ್ತಿರುವುದು ವೈರಲ್​ ಆಗಿದೆ.

ವಿಡಿಯೊದದಲ್ಲಿ ಯುವತಿಯೊಬ್ಬಳು ಇತರ ಪ್ರಯಾಣಿಕರು ಪಕ್ಕದಲ್ಲಿ ನಿಂತಿರುವಂತೆಯೇ ಎಲೆಕ್ಟ್ರಿಕ್​ ಸ್ಟ್ರೈಟ್ನರ್ ಬಳಸಿದ್ದಾರೆ. ಫೋನ್​​ಗಳು ಮತ್ತು ಲ್ಯಾಪ್​ಟಾಪ್​​ಗಳನ್ನು ಚಾರ್ಜ್ ಮಾಡಲೆಂದು ನೀಡಿರುವ ಪ್ಲಗ್ ಪಾಯಿಂಟ್​​ಗೆ ಸ್ಟ್ರೈಟ್ನರ್ ಚುಚ್ಚಿ ಕೂದಲು ನೇರ ಮಾಡಿಕೊಂಡಿದ್ದಾಳೆ ಯುವತಿ. ಸುತ್ತಮುತ್ತ ಅಷ್ಟೊಂದು ಮಂದಿ ನಿಂತಿರುವ ಹೊರತಾಗಿಯೂ ಆಕೆ ಅದನ್ನು ಗಣನೆಗೆ ತೆಗೆದುಕೊಳ್ಳದೇ ತನ್ನ ಕಾರ್ಯ ಮುಂದುವರಿಸಿದ್ದಾಳೆ.

ಟ್ವಿಟ್ಟರ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡಿದ್ದು, ದೆಹಲಿ ಮೆಟ್ರೋ ಕಿ ಬಾತ್ ಹಿ ಕುಚ್ ಅಲಗ್ ಹೈ (ಡೆಲ್ಲಿ ಮೆಟ್ರೊ ಸ್ವಲ್ಪ ಭಿನ್ನವಾಗಿದೆ) ಎಂದು ಬರೆದುಕೊಂಡಿದ್ದಾರೆ.

ಅಪ್ಲೋಡ್ ಮಾಡಿದ ನಂತರ ಈ ವಿಡಿಯೋ ವೈರಲ್ ಆಗಿದೆ. ಇದು 2 ಸಾವಿರಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. “ನಾನು ನಾಳೆ ಗಡ್ಡ ಟ್ರಿಮ್ಮರ್ ಒಯ್ಯುತ್ತಿದ್ದೇನೆ” ಎಂದು ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಬರೆದಿದ್ದಾರೆ. ಎಲ್ಲವನ್ನೂ ರೆಕಾರ್ಡ್ ಮಾಡುವುದು ಮುಖ್ಯವಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಟ್ವಿಟರ್ ಬಳಕೆದಾರರು ಅವಳ ನಡವಳಿಕೆಯನ್ನು ಪ್ರಶ್ನಿಸಿದರು ಮತ್ತು ಸಹ ಪ್ರಯಾಣಿಕರನ್ನು ಪರಿಗಣಿಸದ ಕೊರತೆಯನ್ನು ಟೀಕಿಸಿದರು. “ದೆಹಲಿ ಮೆಟ್ರೋದ ಪ್ರಯಾಣಿಕರು ನಿಯಂತ್ರಣವನ್ನು ಮೀರುತ್ತಿರುವಂತೆ ತೋರುತ್ತಿದೆ! ಪೋಷಕರು ಮತ್ತು ಶಾಲೆಗಳು ಮೂಲಭೂತ ಸಭ್ಯತೆ ಮತ್ತು ಸಾರ್ವಜನಿಕ ಶಿಷ್ಟಾಚಾರವನ್ನು ಕಲಿಸುವಲ್ಲಿ ವಿಫಲವಾಗಿವೆ ಎಂದು ತೋರುತ್ತದೆ.

ಇನ್ನೊಬ್ಬರು ಮೆಟ್ರೋದಲ್ಲಿ ಕಿರುಕುಳ … ಮನೆಯಲ್ಲಿ ಸಮಯವಿಲ್ಲ ಎಂದು ನಾನು ಭಾವಿಸುತ್ತೇನೆ. ಬರೆದಿದ್ದಾರೆ.

ಇನ್ನೊಬ್ಬರು ಅವಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಇದು ಹಿಂದಿನದಕ್ಕಿಂತ ಉತ್ತಮವಾಗಿದೆ. ಅವಳ ವೈಯಕ್ತಿಕ ಜೀವನ ನಮಗೆ ತಿಳಿದಿಲ್ಲ, ಅವಳು ಕಾರ್ಯನಿರತವಾಗಿರಬಹುದು. ಬಹುಶಃ ಅವಳ ಮನೆಯಲ್ಲಿ ವಿದ್ಯುತ್ ಇರಲಿಲ್ಲ. ಆಕೆ ಸೃಜನೀಲೆ ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬರು ದೆಹಲಿ ಮೆಟ್ರೋದಲ್ಲಿ ಎಲ್ಲವೂ ಸಾಧ್ಯ ಎಂದು ಬರೆದುಕೊಂಡಿದ್ದಾರೆ ಜನರು ಸಾರ್ವಜನಿಕ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಬಹುಶಃ ಇಲ್ಲಿ ಸೌಲಭ್ಯಗಳಿಗೆ ಕತ್ತರಿ ಹಾಕುವ ಯತ್ನ ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ, ಜನನಿಬಿಡ ದೆಹಲಿ ಮೆಟ್ರೊ ಬೋಗಿಯೊಳಗೆ ಮಹಿಳೆಯೊಬ್ಬರು ಬಾಲಿವುಡ್ ಹಾಡಿಗೆ ನೃತ್ಯ ಮಾಡಿ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಸಂಚಲನ ಮೂಡಿಸಿದ್ದರು. ವೀಡಿಯೊದಲ್ಲಿ, ಕಪ್ಪು ಸೀ-ಥ್ರೂ ಟಾಪ್ ಮತ್ತು ನೀಲಿ ಜೀನ್ಸ್ ಧರಿಸಿದ ಮಹಿಳೆ ನೇಹಾ ಭಾಸಿನ್ ಮತ್ತು ಬಪ್ಪಿ ಲಾಹಿರಿ ಅವರ ಅಸಲಾಮ್-ಎ-ಇಷ್ಕ್​ ಹಾಡಿಗೆ ನೃತ್ಶ ಮಾಡಿದ್ದರು/

ಪ್ರಯಾಣಿಕರಿಗೆ ಅನನುಕೂಲತೆಯನ್ನುಂಟು ಮಾಡುವ ಯಾವುದೇ ಚಟುವಟಿಕೆಯನ್ನು ದೆಹಲಿ ಮೆಟ್ರೋದೊಳಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ರಯಾಣಿಕರು ಇತರ ಪ್ರಯಾಣಿಕರ ಸಂವೇದನೆಗಳನ್ನು ನೋಯಿಸುವ ಯಾವುದೇ ಅಸಭ್ಯ / ಅಶ್ಲೀಲ ಚಟುವಟಿಕೆಯಲ್ಲಿ ತೊಡಗಬಾರದು ಎಂದು ಡೆಲ್ಲಿ ಮೆಟ್ರೊ ಪ್ರಾಧಿಕಾರ ಹೇಳಿದೆ.

Exit mobile version