Site icon Vistara News

Viral Video : “ಓಂ ಎಲಾನ್‌ ಮಸ್ಕಾಯ ನಮಃ” ಎನ್ನಲಾರಂಭಿಸಿದ ಬೆಂಗಳೂರಿಗರು! ಏನಿದು ವಿಶೇಷ ಪೂಜೆ?

#image_title

ಬೆಂಗಳೂರು: ಗಣೇಶ ಪೂಜೆ, ಶಿವನ ಪೂಜೆ, ಲಕ್ಷ್ಮೀ ಪೂಜೆ ಎಲ್ಲವೂ ನಿಮಗೆ ಗೊತ್ತು. ಆದರೆ ಎಲಾನ್‌ ಮಸ್ಕ್‌ ಪೂಜೆ ಗೊತ್ತೇ? ಹೌದು. ಬೆಂಗಳೂರಿನಲ್ಲಿ ಈಗ ಎಲಾನ್‌ ಮಸ್ಕ್‌ ಪೂಜೆ ನಡೆಯುತ್ತಿದೆ. ಮಂತ್ರ ಪಠಣದ ಜತೆ ಮಸ್ಕ್‌ ಫೋಟೋಕ್ಕೆ ಪೂಜೆ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್‌ (Viral Video) ಆಗಿವೆ.

ಇದನ್ನೂ ಓದಿ: Viral Video : ರೈಲಿನಲ್ಲೇ ಸಿಗರೇಟ್ ಸೇದಿದ ಯುವತಿ; ವೈರಲ್ ಆಗ್ತಿದೆ ಈ ವಿಡಿಯೊ ನೋಡಿ
ಬೆಂಗಳೂರಿನ ಪುರುಷರ ಹಕ್ಕುಗಳ ಸಂಘಟನೆಯಾದ “ಸೇವ್‌ ಇಂಡಿಯನ್‌ ಫ್ಯಾಮಿಲಿ ಫೌಂಡೇಷನ್”‌ ಈ ರೀತಿಯ ವಿಶೇಷ ಪೂಜೆ ಮಾಡುತ್ತಿದೆ. ಈ ಹಿಂದೆ ಕಂಪನಿಯಲ್ಲಿ ಮಾತನಾಡುವುದಕ್ಕೂ ಅವಕಾಶ ಸಿಗುತ್ತಿರಲಿಲ್ಲ. ಆದರೆ ಈಗ ಮಸ್ಕ್‌ ಅವರು ಮುಂದಾಳತ್ವ ತೆಗೆದುಕೊಂಡ ಮೇಲೆ ನಮಗೆ ಎಲ್ಲ ನಮ್ಮ ಮಾತನ್ನು ಹೇಳುವುದಕ್ಕೆ ಅವಕಾಶ ಸಿಕ್ಕಿದೆ ಎಂದು ಫೌಂಡೇಷನ್‌ನ ಸದಸ್ಯರು ಹೇಳಿದ್ದಾರೆ.


ಈ ತಂಡವು ಮಸ್ಕ್‌ ಅವರನ್ನು ವೋಕಾಸುರನ ವಿನಾಶ ಮಾಡಿದವರು ಎಂದು ಹೊಗಳುತ್ತಿದೆ. ಮಸ್ಕ್‌ ಅವರು ಕಂಪನಿಗಳ ಮಾಲೀಕರು ಮತ್ತು ಆಡಳಿತದ ವಿರುದ್ಧ ತಮ್ಮ ನಿಲುವನ್ನು ವ್ಯಕ್ತಪಡಿಸಲು ಅವಕಾಶ ಕೊಡುತ್ತಾರಾದ್ದರಿಂದ ಅವರನ್ನೇ ದೇವರು ಎಂದು ತಂಡ ಕರೆಯಲಾರಂಭಿಸಿದೆ. ವಿಶೇಷವಾಗಿ “ಓಂ ಎಲಾನ್‌ ಮಸ್ಕಾಯ ನಮಃ, ಓಂ ಟ್ವಿಟರೇಶ್ವಯಾಯ ನಮಃ, ಓಂ ಫೆಮಿನಿಸ್ಟ್‌ ಎವಿಕ್ಟಾರಾಯ ನಮಃ, ಓಂ ಟ್ವಿಟರ್‌ ಕ್ಲೀನರಾಯ ನಮಃ” ಎನ್ನುವ ಶ್ಲೋಕಗಳನ್ನೂ ಪಠಿಸುತ್ತಿದ್ದಾರೆ.

Exit mobile version