ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಮೆಟ್ರೋ ರೈಲು ಸೇವೆಯನ್ನು ಜನರಿಗೆ ಅನುಕೂಲವಾಗಲಿ, ನಿಗದಿತ ಸಮಯಕ್ಕೆ ಕಚೇರಿ, ಮನೆ ಸೇರಿ ಯಾವುದೇ ಸ್ಥಳಗಳಿಗೆ ತಲುಪಲಿ. ಟ್ರಾಫಿಕ್ ಕಿರಿಕಿರಿಯಿಲ್ಲದೆ ಜನರು ಸಂಚರಿಸಲಿ ಎಂದು ಒದಗಿಸಲಾಗಿದೆ. ಆದರೆ, ಇತ್ತೀಚೆಗೆ ದೆಹಲಿ ಮೆಟ್ರೋ ರೈಲು ಹಾಗೂ ಮೆಟ್ರೋ ನಿಲ್ದಾಣಗಳು ಚಿತ್ರ-ವಿಚಿತ್ರ ಚಟುವಟಿಕೆಗಳ ತಾಣವಾಗಿದೆ. ಈಗ ಮೆಟ್ರೋ ರೈಲಿನಲ್ಲಿ ಯುವತಿಯೊಬ್ಬಳು ವಿಚಿತ್ರವಾಗಿ ಡಾನ್ಸ್ ಮಾಡಿದ್ದು, ವಿಡಿಯೊ ವೈರಲ್ (Viral Video) ಆಗಿದೆ.
ಹೌದು, ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಎನಿಸಿದ ಸೀಮಾ ಕನೋಜಿಯಾ ಎಂಬುವರು ಚಿತ್ರ-ವಿಚಿತ್ರವಾಗಿ ಮೆಟ್ರೋದಲ್ಲಿ ಡಾನ್ಸ್ ಮಾಡಿದ್ದಾರೆ. ಮೆಟ್ರೋ ರೈಲಿನ ಒಳಗಿಂದ “ಜಾನೇ ಕ್ಯಾ ಹೋಗಾ” ಹಾಡಿಗೆ ಕುಣಿಯುತ್ತ ಹೊರಗೆ ಬರುವ ಯುವತಿಯು ಪ್ಲಾಟ್‌ಫಾರ್ಮ್‌ಗೆ ತೆರಳಿ ಅಲ್ಲೂ ಡಾನ್ಸ್ ಮಾಡುತ್ತಾರೆ. ಹಾಗೆ, ಕುಣಿಯುತ್ತಲೇ ರೈಲಿನ ಮತ್ತೊಂದು ಬೋಗಿಯ ಬಾಗಿಲ ಸಮೀಪ ಹೋಗುತ್ತಾರೆ. ಅಲ್ಲಿಗೆ ವಿಡಿಯೊ ಹಾಗೂ ಡಾನ್ಸ್ ಮುಗಿಯುತ್ತದೆ.
ಹೇಗಿದೆ ನೋಡಿ ನೃತ್ಯ
ಹೀಗೆ, ಯುವತಿಯು ಪ್ರಯಾಣಿಕರು ತುಂಬಿರುವ ಮೆಟ್ರೋದಲ್ಲಿ ಕಣಿದಿರುವ ವಿಡಿಯೊ ಭಾರಿ ವೈರಲ್ ಆಗಿದೆ. ಒಂದಷ್ಟು ಜನವಂತೂ ಯುವತಿಯನ್ನು ಟೀಕಿಸಿದ್ದಾರೆ. “ಸಾರ್ವಜನಿಕ ಸ್ಥಳದಲ್ಲಿ ಹೀಗೆ ಡಾನ್ಸ್ ಮಾಡುವುದಕ್ಕೂ ಧೈರ್ಯ ಬೇಕು” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರಂತೂ, “ಕೊರೊನಾ ಸೋಂಕಿನ ನಂತರ ಎರಡನೇ ವೈರಸ್ ಬಂದಿದೆ” ಎಂದಿದ್ದಾರೆ. “ಯಾರಾದರೂ ಇಷ್ಟು ಕೀಳುಮಟ್ಟಕ್ಕೆ ಹೇಗೆ ಇಳಿಯುತ್ತಾರೆ” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಮೆಟ್ರೋ ರೈಲಲ್ಲಿ 2 ಬಾಟಲಿ ಮದ್ಯ ಒಯ್ಯಬಹುದು; ಆದರೆ ಇದು ಬೆಂಗಳೂರಲ್ಲಿ ಅಲ್ಲ!
ಅಷ್ಟೇ ಅಲ್ಲ, ಯುವತಿ ಡಾನ್ಸ್ ಮಾಡಬೇಕಾದರೆ ಅಲ್ಲಿರುವ ಒಂದಷ್ಟು ಜನ ನಕ್ಕಿದ್ದಾರೆ. ಇನ್ನೊಂದಿಷ್ಟು ಜನ ಸಾಕು ಇವಳ ಸಹವಾಸ ಎಂದು ವಿಡಿಯೊ ಫ್ರೇಮ್‌ನಿಂದ ಹೊರಗೆ ಹೋಗಿದ್ದಾರೆ. ಒಂದಷ್ಟು ಜನವಂತೂ ಅಚ್ಚರಪಟ್ಟಿದ್ದಾರೆ. ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಯುವಕ-ಯುವತಿ ರೊಮ್ಯಾನ್ಸ್ ಮಾಡುವುದು, ಜಗಳ ಆಡುವುದು, ಪೋಲ್ ಡಾನ್ಸ್ ಮಾಡುವುದು ಸೇರಿ ಹತ್ತಾರು ಚಟುವಟಿಕೆಗಳು ನಡೆಯುತ್ತಿವೆ. ಇನ್‌ಸ್ಟಾಗ್ರಾಂ ರೀಲ್ಸ್‌ಗಾಗಿಯೇ ಹೆಚ್ಚಿನ ಜನ ಹೀಗೆ ವರ್ತಿಸುತ್ತಿದ್ದಾರೆ.