ತನ್ನ ಪ್ರಿಯಕರನಿಗೆ ಜಾಮೀನು ಕೊಡಿಸಿಲ್ಲ ಎಂದು ವಕೀಲರೊಬ್ಬರು ನ್ಯಾಯಾಧೀಶರ (fight between lawyer and judge) ಮೇಲೆ ಹಲ್ಲೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗುತ್ತಿದೆ. ನ್ಯಾಯಾಲಯದಲ್ಲಿ ನ್ಯಾಯಾಧೀಶರು ಮತ್ತು ಮಹಿಳಾ ವಕೀಲರ ನಡುವಿನ ವ್ಯಾಪಕ ವಾಗ್ವಾದದ ಬಳಿಕ ಈ ಘಟನೆ ನಡೆದಿದೆ ಎನ್ನಲಾಗಿದೆ.
ಈ ವಿಡಿಯೋದಲ್ಲಿ ನ್ಯಾಯಾಧೀಶರೊಂದಿಗೆ ಮಹಿಳಾ ವಕೀಲರು ಜಗಳವಾಡುವುದನ್ನು ಕಾಣಬಹುದು. ಇದು ಸಾಮಾಜಿಕ ಜಾಲತಾಣ ಬಳಕೆದಾರರ ಗಮನವನ್ನು ಸೆಳೆಯುತ್ತಿದ್ದು ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ.
ಇದು 2022ರ ವಿಡಿಯೋ ಕ್ಲಿಪ್ ಎನ್ನಲಾಗುತ್ತಿದೆ. ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಮಾಯಾಂಕ್ ಬರ್ಮಿ ಎಂಬವರು ಹಂಚಿಕೊಂಡಿದ್ದು, ತಕ್ಷಣವೇ ಭಾರೀ ವೈರಲ್ ಆಗಿದೆ.
ಮಹಾರಾಷ್ಟ್ರದ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವಕೀಲರ ಭಾವಿ ಪತಿಗೆ ಜಾಮೀನು ನೀಡಲು ನ್ಯಾಯಾಧೀಶರು ನಿರಾಕರಿಸಿದಾಗ ಜಗಳ ಆರಂಭವಾಗಿದೆ ಎಂದು ಶೀರ್ಷಿಕೆಯಲ್ಲಿ ಹೇಳಲಾಗಿದೆ.
ಈ ವಿಡಿಯೋದಲ್ಲಿ ಇಬ್ಬರೂ ತಮ್ಮ ಹುದ್ದೆಯ ಗೌರವಾರ್ಥವಾಗಿರುವ ಕಪ್ಪು ಬಟ್ಟೆಗಳನ್ನು ಧರಿಸಿದ್ದರು. ಇಬ್ಬರ ನಡುವೆಯೂ ತೀವ್ರ ಜಗಳವಾಗಿದೆ. ಸುತ್ತಮುತ್ತ ಸಾಕಷ್ಟು ಮಂದಿ ನೆರೆದಿದ್ದರು. ಕೆಲವರು ಇವರ ಜಗಳದ ವಿಡಿಯೋವನ್ನು ಕೂಡ ಮಾಡುತ್ತಿದ್ದರು. ಪರಸ್ಪರರ ಕೂದಲನ್ನು ಎಳೆದುಕೊಂಡು, ಹೊಡೆದಾಡಿಕೊಂಡ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿತ್ತು. ಕೊನೆಗೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮಧ್ಯೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದರು.
भारत में पहली बार एक महिला जज और महिला अधिवक्ता के बीच खुलेआम हाथापाई हुई, वो भी महाराष्ट्र की एक अदालत में, एक महिला पुलिस अधिकारी ने दोनों को अलग किया। जज ने अधिवक्ता की मंगेतर को जमानत देने से इनकार कर दिया था… अब इस तरह से विवादों का निपटारा होता है…😅🤣 pic.twitter.com/TzsXXSYNn6
— Mayank Burmee (@BurmeeM) August 5, 2024
ಇದನ್ನೂ ಓದಿ: Shocker News : ಯುಪಿ ಸಿಎಂ ಯೋಗಿ ಅಧಿಕೃತ ನಿವಾಸದ ಹೊರಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಪರಿಸ್ಥಿತಿ ತುಂಬಾ ಗಂಭೀರವಾಗಿದ್ದರೂ ಆನ್‌ಲೈನ್‌ನಲ್ಲಿ ಮಾತ್ರ ಇದು ಎಲ್ಲರ ಮನೋರಂಜನೆಗೆ ಕಾರಣವಾಗಿದೆ. ಅನೇಕರು ಇದು ಭಾರತದಲ್ಲಿ ಮಾತ್ರ ಸಂಭವಿಸಲು ಸಾಧ್ಯ ಎಂದು ಹೇಳಿದ್ದಾರೆ. ಆಗಸ್ಟ್ 4ರಂದು ಹಂಚಿಕೊಂಡಿರುವ ಈ ವಿಡಿಯೋವನ್ನು ಈಗಾಗಲೇ ಐದು ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ. ವೃತ್ತಿಪರ ಗಡಿಯನ್ನು ಮರೆತು ವೈಯಕ್ತಿಕ ಭಾವನೆಯಿಂದ ಈ ರೀತಿ ನ್ಯಾಯಾಧೀಶರು ಮತ್ತು ವಕೀಲರು ಘರ್ಷಣೆಗೆ ಇಳಿದಿರುವುದಕ್ಕೆ ಕೆಲವರು ತೀಕ್ಷ್ಣವಾಗಿಯೂ ಪ್ರತಿಕ್ರಿಯಿಸಿದ್ದಾರೆ.