ಬೆಂಗಳೂರು: ಪ್ರಾಣಿಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತದೆ. ಅದೇ ರೀತಿ ಇದೀಗ ಮೂರು ಚಿರತೆಗಳು ಹನಿ ಬ್ಯಾಜರ್ ಮೇಲೆ ದಾಳಿ ನಡೆಸಿರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿರತೆಗಳಿಂದ ಹನಿ ಬ್ಯಾಜರ್ ತಪ್ಪಿಸಿಕೊಂಡಿರುವ ರೀತಿ (Viral Video) ಅದ್ಭುತವಾಗಿದೆ.
ಈ ವಿಡಿಯೊವನ್ನು ಐಎಫ್‌ಎಸ್ ಅಧಿಕಾರಿಯಾಗಿರುವ ಸುಶಾಂತ್ ನಂದ ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಮೂರು ಚಿರತೆಗಳು ಹನಿ ಬ್ಯಾಜರ್ ಒಂದರ ಮೇಲೆ ದಾಳಿ ನಡೆಸಿವೆ. ಸಾಕಷ್ಟು ಸಮಯ ದಾಳಿ ನಡೆಸಿದರೂ ಲೆಕ್ಕಿಸದ ಹನಿ ಬ್ಯಾಜರ್ ಚಿರತೆಗಳಿಂದ ತಪ್ಪಿಸಿಕೊಂಡು ಹೊರಬರುತ್ತದೆ.
ಇದನ್ನೂ ಓದಿ: Viral Video: ಜಾಗತಿಕ ಒಕ್ಕೂಟದ ಸಭೆಯಲ್ಲಿ ರಷ್ಯಾ ಪ್ರತಿನಿಧಿಗೆ ಹಿಗ್ಗಾಮುಗ್ಗಾ ಥಳಿಸಿದ ಉಕ್ರೇನ್ ಸಂಸದ
“ಮೂರು ಚಿರತೆಗಳು ಅಟ್ಯಾಕ್ ಮಾಡಿದರೂ ಹನಿ ಬ್ಯಾಜರ್ ಜಯಶಾಲಿಯಾಗಿ ಬರುತ್ತದೆ. ಅದು ಭಯವಿಲ್ಲದ ಪ್ರಾಣಿ. ಅದರ ಚರ್ಮವು ದಪ್ಪವಾಗಿರುತ್ತದೆ ಮತ್ತು ಸಡಿಲವಾಗಿರುತ್ತದೆ. ಯಾವುದೇ ಪ್ರಾಣಿ ಅದರ ಮೇಲೆ ದಾಳಿ ನಡೆಸಿದರೂ ಅದು ಸುಲಭವಾಗಿ ತಪ್ಪಿಸಿಕೊಳ್ಳುತ್ತದೆ. ಹಾಗೆಯೇ ಹಾವಿನ ವಿಷ ಮತ್ತು ಚೇಳಿನ ವಿಷದಿಂದಲೂ ಅದು ಸುರಕ್ಷಿತವಾಗಿದೆ” ಎಂದು ಸುಶಾಂತ್ ಅವರು ಮಾಹಿತಿ ಕೊಟ್ಟಿದ್ದಾರೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದೆ. ಸಾವಿರಾರು ಮಂದಿ ವಿಡಿಯೊವನ್ನು ವೀಕ್ಷಿಸಿದ್ದು, ಲೈಕ್, ಕಾಮೆಂಟ್ ಮಾಡಿದ್ದಾರೆ. “ಅಬ್ಬಬ್ಬಾ ಇಂತಹ ದೃಶ್ಯ ನೋಡುವುದಕ್ಕೆ ರೋಚಕವಾಗಿದೆ”, “ಇಂತಹ ವಿಡಿಯೊವನ್ನು ನೋಡಿಯೇ ಇರಲಿಲ್ಲ” ಎನ್ನುವಂತಹ ಸಾಕಷ್ಟು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.