ಸಣ್ಣಪುಟ್ಟ ಘಟನೆಗಳು ರಸ್ತೆಯಲ್ಲಿ (road) ಕೆಲವೊಮ್ಮೆ ವಾಹನ (vehicle) ಸವಾರರ ನಡುವೆ ಜಗಳಕ್ಕೆ ಕಾರಣವಾಗುತ್ತಿದೆ. ಇತ್ತೀಚೆಗೆ ಇಂತಹ ಮಾತಿನ ಚಕಮಕಿಯ ಘಟನೆಗಳು ಸಾಮಾನ್ಯವಾಗಿದೆ. ಕೆಲವೊಮ್ಮೆ ಇಂತಹ ಘಟನೆಗಳು ಮಾರಾಮಾರಿಗೂ (physical fights) ಕಾರಣವಾಗಿ, ವಾಹನಗಳಿಗೆ ಹಾನಿ, ವ್ಯಕ್ತಿಗಳಿಗೆ ಗಾಯವನ್ನು ಉಂಟು ಮಾಡುತ್ತದೆ. ಕೊಲೆ ನಡೆದಿದ್ದೂ ಇದೆ.
ಹೆಚ್ಚುತ್ತಿರುವ ಇಂತಹ ಪ್ರಕರಣಗಳ ನಡುವೆ ಬೆಂಗಳೂರು ಪೊಲೀಸರು (bengaluru police) ಈ ರೀತಿಯ ಘಟನೆಗಳನ್ನು ಹೇಗೆ ಎದುರಿಸಬೇಕು ಎಂದು ಸಾಮಾಜಿಕ ಜಾಲತಾಣದ (Viral Video) ಮೂಲಕ ಸಾರ್ವಜನಿಕರಿಗೆ ಉಪಯುಕ್ತ ಸಲಹೆ ಮಾಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೊಲೀಸ್ ಇಲಾಖೆ ಜಾಗೃತಿ ವಿಡಿಯೋವನ್ನು ಹಂಚಿಕೊಂಡಿದ್ದು, ಈ ರೀತಿಯ ಸಂದರ್ಭಗಳನ್ನು ಎದುರಿಸುವಾಗ ನಾವು ಶಾಂತವಾಗಿರುವುದು ಬಹಳ ಮುಖ್ಯ ಎಂದಿದ್ದಾರೆ. ಈ ವಿಡಿಯೋ ಕ್ಲಿಪ್ ಪ್ರಯಾಣಿಕರ ನಡುವಿನ ಜಗಳದಿಂದ ಪ್ರಾರಂಭವಾಗುತ್ತದೆ. ಇದು ಹಲವಾರು ಅಂಶಗಳನ್ನು ಒಳಗೊಂಡಿದೆ. ಇದೇ ರೀತಿಯ ಸಂದರ್ಭಗಳು ಬಂದರೆ ಪ್ರಯಾಣಿಕರು ಏನು ಮಾಡಬೇಕೆಂಬ ಕುರಿತು ಮಾರ್ಗದರ್ಶನ ನೀಡುತ್ತದೆ.
ರಸ್ತೆಯಲ್ಲಿ ವಾಹನ ಓಡಿಸುವಾಗ ಸುರಕ್ಷತೆ ಮೊದಲನೆಯದು. ಕೆಲವೊಂದು ಘಟನೆಗಳು ನಮಗೆ ಸಿಟ್ಟು ತರಿಸಬಹುದು. ಆದರೆ ಪರಿಸ್ಥಿತಿಗಳನ್ನು ಹೇಗೆ ಸುರಕ್ಷಿತವಾಗಿ ನಿರ್ವಹಿಸುವುದು ಎಂಬುದರ ಕುರಿತು ಪ್ರಾಯೋಗಿಕ ಸಲಹೆಗಳಿಗಾಗಿ ನಮ್ಮ ಇತ್ತೀಚಿನ ವಿಡಿಯೋವನ್ನು ಪರಿಶೀಲಿಸಿ. ಮಾಹಿತಿಯಲ್ಲಿರಿ, ಸುರಕ್ಷಿತವಾಗಿರಿ ಎಂದು ವಿಡಿಯೋವನ್ನು ಹಂಚಿಕೊಳ್ಳುವಾಗ ಬೆಂಗಳೂರು ಪೊಲೀಸರು ಬರೆದಿದ್ದಾರೆ.
ಶಾಂತವಾಗಿರಿ ಜಗಳ ತಪ್ಪಿಸಿ
ಪ್ರಯಾಣಿಕರೇ ಶಾಂತವಾಗಿರಿ, ಇತರ ವ್ಯಕ್ತಿಗಳೊಂದಿಗೆ ಜಗಳವಾಡುವುದನ್ನು ತಪ್ಪಿಸಿ, ಅದನ್ನು ನೀವೇ ಪರಿಹರಿಸಲು ಪ್ರಯತ್ನಿಸಬೇಡಿ. ವಾಹನದ ವಿವರಗಳನ್ನು ಗಮನಿಸಿ, ತುರ್ತು ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಮತ್ತು ಘಟನೆಯ ಬಗ್ಗೆ ತಕ್ಷಣ ಮಾಹಿತಿ ನೀಡಿ ಎಂದು ಬೆಂಗಳೂರು ಪೊಲೀಸ್ ಇಲಾಖೆ ಪ್ರಯಾಣಿಕರಲ್ಲಿ ಮನವಿ ಮಾಡಿದೆ.
ಟ್ರಾಫಿಕ್ ಅಡಚಣೆಯನ್ನು ತಪ್ಪಿಸಲು ಮತ್ತು ಘಟನೆ ಅಥವಾ ವಾಹನದ ಫೋಟೋಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳು ವೀಕ್ಷಕರಿಗೆ ಹೇಳಿದ್ದಾರೆ. ಪೊಲೀಸರು ಬಂದಾಗ ಏನಾಯಿತು ಎಂಬುದರ ಕುರಿತು ನಿಮ್ಮ ಸಂಪೂರ್ಣ ಮಾಹಿತಿಯನ್ನು ಒದಗಿಸಿ ಮತ್ತು ಇತರ ವ್ಯಕ್ತಿಗಳಿಗೆ ಅವರ ಅನಿಸಿಕೆ ಹಂಚಿಕೊಳ್ಳಲು ಅವಕಾಶ ಮಾಡಿಕೊಡಿ. ಕೊನೆಯದಾಗಿ ಪೊಲೀಸರಿಗೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ನೀಡಿ ಎಂದು ಹೇಳಿದ್ದಾರೆ.
4 ಲಕ್ಷಕ್ಕೂ ಹೆಚ್ಚು ವೀಕ್ಷಣೆ
ಬೆಂಗಳೂರು ಪೊಲೀಸರು ಕೆಲವೇ ಗಂಟೆಗಳ ಹಿಂದೆ ಹಂಚಿಕೊಂಡಿರುವ ಈ ವಿಡಿಯೋ ಪೋಸ್ಟ್ ಇನ್ ಸ್ಟಾಗ್ರಾಮ್ ನಲ್ಲಿ 4,05,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಕ್ಲಿಪ್ ಅನ್ನು ಎಕ್ಸ್ ನಲ್ಲೂ ಹಂಚಿಕೊಳ್ಳಲಾಗಿದೆ. ಹಲವಾರು ಬಳಕೆದಾರರು ಈ ಜಾಗೃತಿ ವಿಡಿಯೋ ಗೆ ಪೊಲೀಸರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಆದರೂ ಇಂತಹ ಘಟನೆಗಳು ಸಂಭವಿಸಿದಾಗ ಇಲಾಖೆಯು ಏನನ್ನೂ ಮಾಡುತ್ತಿಲ್ಲ ಎಂದು ಕೆಲವರು ಆರೋಪಿಸಿದರು.
ಇದನ್ನೂ ಓದಿ: IndiGo Flight: ಇಂಡಿಗೊ ವಿಮಾನದಲ್ಲಿ ಮತ್ತೊಂದು ಎಡವಟ್ಟು; ನಿಂತುಕೊಂಡೇ ಪ್ರಯಾಣಿಸಲು ಮುಂದಾದ ಪ್ಯಾಸೆಂಜರ್!
ರಸ್ತೆ ಸುರಕ್ಷತೆಯ ಕುರಿತು ಬೆಂಗಳೂರು ಪೊಲೀಸರು ನೀಡಿರುವ ಸಾರ್ವಜನಿಕರಿಗೆ ಶಿಕ್ಷಣವನ್ನು ನಾನು ಇಷ್ಟಪಟ್ಟಿದ್ದೇನೆ. ಪೊಲೀಸ್ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರಿಗೂ ಕಾನೂನಿನ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ ಎಂದೊಬ್ಬರು ತಮ್ಮ ಅನಿಸಿಕೆ ಬರೆದಿದ್ದಾರೆ.