Site icon Vistara News

Viral Video : ಸಿಂಹದ ಬೋನಿನೊಳಗೇ ಬೆರಳಿಟ್ಟ ವ್ಯಕ್ತಿ! ಮುಂದೇನಾಯ್ತು? ವಿಡಿಯೊ ನೋಡಿ

#image_title

ಬೆಂಗಳೂರು: ಕಾಡು ಪ್ರಾಣಿಗಳೊಂದಿಗೆ ಆಟ ಸಲ್ಲ. ಆದರೆ ಕೆಲವು ಮಂದಿ ಕಾಡು ಪ್ರಾಣಿಗಳೊಂದಿಗೇ ಆಟವಾಡುವುದಕ್ಕೆ ತೆರಳಿ ಸಂಕಷ್ಟಕ್ಕೆ ಸಿಲುಕುವ ಹಲವು ವಿಡಿಯೊಗಳನ್ನು ನೋಡಿರುತ್ತೀರಿ. ಅದೇ ರೀತಿ ವ್ಯಕ್ತಿಯೊಬ್ಬ ಸಿಂಹದ ಬೋನಿನೊಳಗೇ ಬೆರಳನ್ನು ತೂರಿಸಿ, ನಂತರ ಒದ್ದಾಡಿದ ವಿಡಿಯೊ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ (Viral Video) ಆಗಿದೆ.

ಇದನ್ನೂ ಓದಿ: Viral News: ವಿಮಾನದ ಬಾತ್‌ರೂಮ್‌ನಲ್ಲಿ ಸಿಗರೇಟ್‌ ಸೇದಿ, ಸಿಬ್ಬಂದಿಯೊಂದಿಗೇ ಜಗಳವಾಡಿದ ಪ್ರಯಾಣಿಕ!
ವ್ಯಕ್ತಿಯೊಬ್ಬ ಸಿಂಹದ ಬೋನಿನೊಳಗೆ ತನ್ನ ಬಲಗೈ ಬೆರಳನ್ನು ತೂರಿಸಿದ್ದಾನೆ. ತಕ್ಷಣಕ್ಕೆ ಆ ಸಿಂಹ ಆತನ ಬೆರಳನ್ನು ಬಾಯಿಯಿಂದ ಕಚ್ಚಿ ಹಿಡಿದುಕೊಂಡಿದೆ. ಆತ ಗಾಬರಿಯಿಂದ ಕೈಯನ್ನು ಹಿಂದೆ ತೆಗೆಯಲು ಯತ್ನಿಸುತ್ತಾನಾದರೂ ಸಿಂಹ ಅದಕ್ಕೆ ಅವಕಾಶ ಕೊಡುವುದಿಲ್ಲ. ಆ ವ್ಯಕ್ತಿ ಎಷ್ಟೇ ಕಷ್ಟ ಪಟ್ಟರೂ ಬೆರಳನ್ನು ವಾಪಸು ತೆಗೆದುಕೊಳ್ಳಲಾಗದೆ ಒದ್ದಾಡುತ್ತಿರುವ ದೃಶ್ಯ ವೈರಲ್‌ ವಿಡಿಯೊದಲ್ಲಿದೆ.


ಈ ವಿಡಿಯೊವನ್ನು ಫೆಬ್ರವರಿಯಲ್ಲಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 66 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಿಸಲ್ಪಟ್ಟಿದೆ. ವಿಡಿಯೊದಲ್ಲಿರುವ ವ್ಯಕ್ತಿಯ ಹುಚ್ಚಾಟಕ್ಕೆ ಜನರು ಆತನಿಗೆ ಬೈಯಲಾರಂಭಿಸಿದ್ದಾರೆ. ಹಾಗೆಯೇ ಆತನಿಗೆ ಸಹಾಯ ಮಾಡುವುದನ್ನು ಬಿಟ್ಟು ವಿಡಿಯೊ ಮಾಡಿದ ವ್ಯಕ್ತಿಗೂ ಅನೇಕರು ಬೈದಿದ್ದಾರೆ.

Exit mobile version