Site icon Vistara News

Viral Video : ನೂಡಲ್ಸ್‌ ಒಳಗೆ ಈಜುತ್ತಿತ್ತು ಜೀವಂತ ಕಪ್ಪೆ! ಅರ್ಧ ತಿಂದವನ ಕಥೆ ಅಧೋಗತಿ

#image_title

ಟೋಕಿಯೋ: ಚೀನಾದಂತಹ ದೇಶದಲ್ಲಿ ಜೀವಂತ ಕ್ರಿಮಿ ಕೀಟಗಳನ್ನೂ ತಿಂದುಬಿಡುತ್ತಾರೆ. ಅವರಿಗೆ ಅದೇನು ಅಸಹ್ಯ ಎನಿಸುವುದೇ ಇಲ್ಲ. ಆದರೆ ಜಪಾನ್‌ನಲ್ಲಿ ವ್ಯಕ್ತಿಯೊಬ್ಬ ಸಸ್ಯಾಹಾರಿ ನೂಡಲ್ಸ್‌ಗೆ ಆರ್ಡರ್‌ ಮಾಡಿದರೆ ಅದರಲ್ಲಿ ಜೀವಂತ ಕಪ್ಪೆಯೇ ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ. ನೂಡಲ್ಸ್‌ನಲ್ಲಿ ಕಪ್ಪೆ ಕೈ ಕಾಲು ಆಡಿಸುತ್ತ ಬದುಕಲು ಯತ್ನಿಸುತ್ತಿರುವ ವಿಡಿಯೊ ಮತ್ತು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಟ್ವಿಟರ್‌ನಲ್ಲಿ ಕೈಟೋ ಎನ್ನುವ ಖಾತೆ ಹೊಂದಿರುವ ಜಪಾನಿ ವ್ಯಕ್ತಿ ಇತ್ತೀಚೆಗೆ ಬಿಸಿನೆಸ್‌ ಟ್ರಿಪ್‌ ಮಾಡುತ್ತಿದ್ದರಂತೆ. ಆ ವೇಳೆ ಅವರು ಮರುಗಮೆ ಸೀಮನ್‌ ಅಂಗಡಿಯಿಂದ ಸ್ಪೈಸಿ ದಂಡನ್‌ ಸಲಾಡ್‌ ಉಡಾನ್‌(ಜಪಾನ್‌ ಶೈಲಿಯ ನೂಡಲ್ಸ್‌) ಆರ್ಡರ್‌ ಮಾಡಿದ್ದಾರೆ. ಅಂಗಡಿಯಲ್ಲಿ ಕೊಟ್ಟ ಪ್ಯಾಕೇಟನ್ನು ಸ್ವಲ್ಪ ದೂರ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಅದನ್ನು ನೀಟಾಗಿ ಅಲ್ಲಾಡಿಸಿ, ತೆರೆದು ತಿನ್ನಲಾರಂಭಿಸಿದ್ದಾರೆ.

ಇದನ್ನೂ ಓದಿ: Viral News : ಪ್ರತಿಭಟನೆಯ ಬಿಸಿ, ಕಾರು ಬಿಟ್ಟು ಬೈಕ್‌ನಲ್ಲಿ ಮದುವೆ ಮಂಟಪಕ್ಕೆ ತೆರಳಿದ ವರ!
ಕೈಟೋ ಬಹುತೇಕ ಅಷ್ಟೂ ಉಡಾನ್‌ ಅನ್ನು ತಿಂದಾಗಿತ್ತು. ಕೊನೆಯಲ್ಲಿ ಸ್ವಲ್ಪ ನೂಡಲ್ಸ್‌ ಇದೆ ಎನ್ನುವಾಗ ಅಲ್ಲಿ ಅವರಿಗೆ ಜೀವಂತವಿರುವ ಕಪ್ಪೆಯೊಂದು ಕಾಣಿಸಿಕೊಂಡಿದೆ. ಪಾಚಿ ಹಸಿರು ಬಣ್ಣದಲ್ಲಿದ್ದ ಕಪ್ಪೆಯು ಅಲ್ಲಿಯೇ ನಡೆದಾಡುವುದಕ್ಕೆ ಯತ್ನಿಸುತ್ತಿರುವುದನ್ನೂ ಅವರು ಗಮನಿಸಿದ್ದಾರೆ. ತಕ್ಷಣ ಅದರ ಫೋಟೋ ಮತ್ತು ವಿಡಿಯೊಗಳನ್ನು ತೆಗೆದುಕೊಂಡಿದ್ದಾರೆ. ಆ ಫೋಟೋ, ವಿಡಿಯೊವನ್ನು ಟ್ವಿಟರ್‌ನಲ್ಲಿ ಹಾಕಿ ಮರುಗಮೆ ಸೀಮನ್‌ ಅಂಗಡಿಗೆ ಟ್ಯಾಗ್‌ ಮಾಡಿದ್ದಾರೆ.


ಈ ವಿಚಾರ ತಿಳಿಯುತ್ತಿದ್ದಂತೆಯೇ ಮರುಗಮೆ ಸೀಮನ್‌ ಅಂಗಡಿಯವರು ಕೈಟೋ ಬಳಿ ಕ್ಷಮೆ ಯಾಚಿಸಿದ್ದಾರೆ. ಅಷ್ಟೇ ಅಲ್ಲದೆ ತಾತ್ಕಾಲಿಕವಾಗಿ ಸ್ಪೈಸಿ ದಂಡನ್‌ ಸಲಾಡ್‌ ಉಡಾನ್‌ ಮಾರಾಟವನ್ನು ನಿಲ್ಲಿಸಿದ್ದಾರೆ. ಈ ವಿಚಾರದಲ್ಲಿ ತಮ್ಮ ದಿನನಿತ್ಯದ ಎಲ್ಲ ಗ್ರಾಹಕರಲ್ಲಿ ಕ್ಷಮೆಯನ್ನುಯಾಚಿಸಿದ್ದಾರೆ.

ಇದನ್ನೂ ಓದಿ: Viral Video : ನಟ ಸಲ್ಮಾನ್‌ ಖಾನ್‌ಗೆ ಪ್ರೊಪೋಸ್‌ ಮಾಡಿದ ಫಾರಿನ್‌ ಬೆಡಗಿ ಯಾರು? ಏನು ಆಕೆಯ ಕೆಲಸ?
ಕೈಟೋ ಹಂಚಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. “ಸಸ್ಯಾಹಾರದಲ್ಲೂ ಜೀವಂತ ಕಪ್ಪೆ, ಇದು ಮರುಗಮೆ ಸ್ಪೆಷಲ್‌” ಎಂದು ಕೆಲವರು ಹೇಳಿದ್ದಾರೆ. “ನಾವು ಒಮ್ಮೆ ಬೇರೊಂದು ಖಾದ್ಯ ಆರ್ಡರ್‌ ಮಾಡಿದಾಗ ಅದರ ಕವರ್‌ನಲ್ಲಿ ಈ ರೀತಿಯ ಕಪ್ಪೆ ಬಂದಿತ್ತು. ಇದರಲ್ಲೂ ಹಾಗೇ ಆಗಿರಬಹುದು” ಎಂದು ಒಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಈಗಾಗಲೇ 9.6 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

Exit mobile version