ಲಕ್ನೋ: ಯುವಕನೊಬ್ಬ ಯುವತಿಯನ್ನು ತಬ್ಬಿಕೊಂಡು ಸ್ಕೂಟಿ ಓಡಿಸಿದ ವಿಡಿಯೊವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಅದೇ ರೀತಿ ಇದೀಗ ಪ್ರೇಮಿಗಳು (Viral Video) ಕಾರಿನ ಸನ್ರೂಫ್ನಲ್ಲಿಯೇ ರೊಮ್ಯಾನ್ಸ್ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Viral News: ಅಜ್ಜಿ ಒಪ್ಪಿದ ಕಾಫಿ ಬೆಲೆ 290 ರೂ.! ಸ್ಟಾರ್ಬಕ್ಸ್ನ ಈ ದುಬಾರಿ ಕಾಫಿಗೆ ಸೋಷಿಯಲ್ ಮೀಡಿಯಾ ಶಾಕ್!
ಸ್ಕೂಟಿ ಲವ್ಬರ್ಡ್ಸ್ ಕಾಣಿಸಿಕೊಂಡಿದ್ದ ಉತ್ತರ ಪ್ರದೇಶದ ಲಕ್ನೋ ನಗರದಲ್ಲಿಯೇ ಈ ಪ್ರಕರಣ ಕೂಡ ವರದಿಯಾಗಿದೆ. ಯುವಕ ಯುವತಿ ಇಬ್ಬರು ಕಾರಿನ ಸನ್ರೂಫ್ ತೆಗೆದು, ಹೊರಗೆ ಕಾಣುವಂತೆ ನಿಂತಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಚುಂಬಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ. ಗಣರಾಜ್ಯೋತ್ಸವದ ಪ್ರಯುಕ್ತ ತ್ರಿವರ್ಣ ಲೈಟಿಂಗ್ನಲ್ಲಿ ಕಂಗೊಳಿಸುತ್ತಿರುವ ಮುಖ್ಯ ರಸ್ತೆಯಲ್ಲಿಯೇ ಈ ಜೋಡಿ ಈ ರೀತಿ ಅಸಭ್ಯವಾಗಿ ವರ್ತಿಸಿದ್ದಾರೆ.
ಈ ಜೋಡಿಯ ರೊಮ್ಯಾನ್ಸ್ ಅನ್ನು ಕಾರಿನ ಹಿಂಭಾಗದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ವಿಡಿಯೊ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದ ತುಂಬೆಲ್ಲ ಈ ವಿಡಿಯೊ ಹರಿದಾಡಿದ್ದು, ನೆಟ್ಟಿಗರು ಜೋಡಿಗೆ ಬೈಯಲಾರಂಭಿಸಿದ್ದಾರೆ. ಈ ವಿಡಿಯೊ ಪೊಲೀಸರ ಕೈಗೂ ಸಿಕ್ಕಿದ್ದು, ಪೊಲೀಸರು ಈ ಜೋಡಿಯ ವಿಳಾಸ ಪತ್ತೆ ಹಚ್ಚುವ ಕೆಲಸದಲ್ಲಿದ್ದಾರೆ.
ಈ ಹಿಂದೆ ಸ್ಕೂಟಿಯಲ್ಲಿ ರೊಮ್ಯಾನ್ಸ್ ಮಾಡಿ ಬಂಧಿತನಾದ ಯುವಕನನ್ನು ವಿಕ್ಕಿ ಶರ್ಮಾ(23) ಎಂದು ಗುರುತಿಸಲಾಗಿತ್ತು. ಯುವತಿಯು ಅಪ್ರಾಪ್ತಳಾಗಿದ್ದ ಕಾರಣ ಆಕೆಯ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.
ಸ್ಕೂಟಿ ವಿಡಿಯೊ ವೈರಲ್ ಆದ ಬೆನ್ನಲ್ಲೇ ಉತ್ತರ ಪ್ರದೇಶ ಪೊಲೀಸರು ಒಂದು ವಿಶೇಷ ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಬೈಕ್ಗಳಲ್ಲಿ ರೊಮ್ಯಾನ್ಸ್ ಮಾಡಿ ಅವಗಡಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ಕಾರ್ಟೂನ್ ಚಿತ್ರಗಳ ಮೂಲಕ ಎಚ್ಚರಿಕೆ ನೀಡಿದ್ದರು.