ಬೆಂಗಳೂರು: ಈಗೆಲ್ಲ ಮದುವೆ ಕಾರ್ಯಕ್ರಮ ಅಂದರೆ ಅದರ ಹಿಂದಿನ ದಿನ ಅದ್ಧೂರಿಯಾಗಿ ಸಂಗೀತ ಕಾರ್ಯಕ್ರಮ ನಡೆಸುವುದು ಅಭ್ಯಾಸವಾಗಿಬಿಟ್ಟಿದೆ. ವಧು-ವರರ ತಂದೆ ತಾಯಿ, ಸಂಬಂಧಿಕರು, ಸ್ನೇಹಿತರೆಲ್ಲರೂ ಸಂಗೀತ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿ ಸಂತಸ ಹಂಚಿಕೊಳ್ಳುತ್ತಾರೆ. ಅದೇ ರೀತಿ ಇತ್ತೀಚೆಗೆ ಸಂಗೀತ ಕಾರ್ಯಕ್ರಮದಲ್ಲಿ ವರನ ಸ್ನೇಹಿತರು ಮಾಡಿರುವ ನೃತ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral Video | ಬಾಯ್‌ಫ್ರೆಂಡ್ ಎದುರೇ ಹೊದಿಕೆಯನ್ನು ಮದುವೆಯಾದ ಯುವತಿ! ವೈರಲ್ ಆಯ್ತು ವಿಡಿಯೊ
ʼದೇವ್‌ದಾಸ್ʼ ಸಿನಿಮಾದ ʼಮಾರ್ ಡಾಲಾʼ ಹಾಡು ಯಾರಿಗೆ ತಾನೆ ನೆನಪಿಲ್ಲ ಹೇಳಿ. ಹಾಡಿಗೆ ನಟಿ ಮಾಧುರಿ ದೀಕ್ಷಿತ್ ಮಾಡಿದ ನೃತ್ಯಕ್ಕೆ ಮನಸೋಲದವರಿಲ್ಲ. ಈಗ ಇದೇ ಹಾಡಿಗೆ ವರನ ಸ್ನೇಹಿತರು ನೃತ್ಯ ಮಾಡಿ ಸೈ ಎನಿಸಿಕೊಂಡಿದ್ದಾರೆ. ವಿಶೇಷವಾಗಿ ಹೆಣ್ಣು ಮಕ್ಕಳಿಗೆಂದೇ ಮಾಡಿರುವಂತಹ ಈ ಹಾಡಿಗೆ ಹೆಣ್ಣು ಮಕ್ಕಳಂತೆಯೇ ಕುಣಿದು ನೆರೆದಿರುವವರ ಮೊಗದಲ್ಲಿ ನಗು ತರಿಸಿದ್ದಾರೆ.
ಮೂವರು ಯುವಕರು ನೆಲದ ಮೇಲೆ ಕುಳಿತು ಮಾರ್ ಡಾಲಾ ಎನ್ನುತ್ತಾ ಕುಣಿದಿರುವ ವಿಡಿಯೊವನ್ನು ಮೊನಸ್ ಸಿಂಗ್ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನವೆಂಬರ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 15 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. “ಮದುವೆ ಮನೆ ಎಂದರೆ ಈ ರೀತಿ ಸಂಭ್ರಮಗಳಿರಬೇಕು” ಎಂದು ಅನೇಕರು ಕಾಮೆಂಟ್ ಮಾಡಿದ್ದರೆ, “ಈ ಯುವಕರನ್ನು ನಮ್ಮ ಮನೆಯ ಮದುವೆಯಲ್ಲೂ ನೃತ್ಯ ಮಾಡುವುದಕ್ಕೆ ಕಳುಹಿಸಿಕೊಡಿ” ಎಂದು ಅನೇಕರು ಕಾಲೆಳೆದಿದ್ದಾರೆ.