Site icon Vistara News

Viral Video | 15,700 ಕೆ.ಜಿ ತೂಕದ ಲಾರಿಯನ್ನು ಹಲ್ಲಿನಲ್ಲೇ ಎಳೆದ! ಇಲ್ಲಿದೆ ನೋಡಿ ವಿಡಿಯೊ

ಬೆಂಗಳೂರು: ಕಬ್ಬು ತಿಂದರೂ ಹಲ್ಲು ನೋವು ಬಂದುಬಿಡುತ್ತದೆ ಎನ್ನುವ ಅಳಲು ಅನೇಕರದ್ದು. ಆದರೆ ಈ ಮನುಷ್ಯ ಮಾತ್ರ ತನ್ನ ಹಲ್ಲಿನಲ್ಲೇ ಲಾರಿಯನ್ನೂ ಎಳೆಯಬಲ್ಲ! ಈಜಿಪ್ಟ್ ದೇಶದ ಈ ವ್ಯಕ್ತಿ ಹಲ್ಲಿನಲ್ಲೇ 15,730 ಕೆ.ಜಿ ತೂಕದ ಲಾರಿ ಎಳೆದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ (Viral Video) ಬರೆದಿದ್ದಾನೆ.

ಇದನ್ನೂ ಓದಿ: Viral Video | ಪಾನ್‌ ಬನಾರಸ್‌ ವಾಲಾ ಹಾಡಿಗೆ ಮನಬಿಚ್ಚಿ ಕುಣಿದ ಅಂಕಲ್‌, ಎನರ್ಜಿಗೆ ಸೆಲ್ಯೂಟ್‌ ಎಂದ ಜನ
ಅಶ್ರಫ್ ಮಹ್ರೋಸ್ ಮೊಹಮದ್ ಸುಲಿಮನ್ ಹೆಸರಿನ ವ್ಯಕ್ತಿ ಈ ರೀತಿ ದಾಖಲೆ ಬರೆದವ. ಆತ 2021ರ ಜೂ.13ರಂದು ಈಜಿಪ್ಟ್‌ನ ಇಸ್ಮೈಲಿಯಾದಲ್ಲಿ ಇಂಥದ್ದೊಂದು ಸಾಹಸ ಪ್ರದರ್ಶನ ಮಾಡಿದ್ದಾನೆ. ಭಾರೀ ತೂಕದ ಲಾರಿಯನ್ನು ಚಾಲಕನ ಸಮೇತವಾಗಿ ತನ್ನ ಹಲ್ಲಿನಲ್ಲೇ ಎಳೆದುಕೊಂಡು ಹೋಗಿದ್ದಾನೆ.


ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ಅಶ್ರಫ್‌ನ ವಿಡಿಯೋವನ್ನು ಇತ್ತೀಚೆಗೆ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಆ ವಿಡಿಯೊ ಎಲ್ಲೆಡೆ ಭಾರೀ ಸದ್ದು ಮಾಡಿದೆ. “ಅಶ್ರಫ್ ಅವರೇ ನಿಮ್ಮ ಹಲ್ಲುಗಳು ನಮ್ಮ ಕೈಗಿಂತಲೂ ಗಟ್ಟಿಯಾಗಿವೆ” ಎಂದು ಕೆಲವರು ಹೇಳಿದರೆ, “ನಿಮ್ ಡೆಂಟಿಸ್ಟ್ ಯಾರು ಹೇಳಿ, ನಾವೂ ಅಲ್ಲಿಯೇ ತೋರಿಸುತ್ತೇವೆ” ಎಂದು ಅನೇಕರು ಕಮೆಂಟ್ ಮಾಡಿದ್ದಾರೆ!

ಇದನ್ನೂ ಓದಿ: Viral Video | ಮುಂದಿನ 2 ಚಕ್ರಗಳೇ ಇಲ್ಲದೆ ವೇಗವಾಗಿ ಓಡುವ ಟ್ರಕ್‌, ಇದೆಲ್ಲ ಭಾರತದಲ್ಲಿ ಮಾತ್ರ ಸಾಧ್ಯ

Exit mobile version