ಬೆಂಗಳೂರು: ಪ್ರತಿನಿತ್ಯ ಮನೆಗೆ ಹಾಲು ಮಾರಲು ಬರುವ ವ್ಯಕ್ತಿಯನ್ನು ನೆನಪಿಸಿಕೊಂಡರೆ ನಿಮ್ಮಲ್ಲಿ ಯಾವ ಚಿತ್ರಣ ಮೂಡಬಹುದು? ಟಿವಿಎಸ್ ಎಕ್ಸ್‌ಎಲ್, ಸೈಕಲ್ ಅಥವಾ ಯಾವುದಾದರೂ ಸಣ್ಣ ಬೈಕ್‌ನಲ್ಲಿ ಹಾಲಿನ ಕ್ಯಾನ್ ಹಿಡಿದು ಬರುವ ವ್ಯಕ್ತಿಯದ್ದಲ್ಲವೇ? ಆದರೆ ಈ ವಿಡಿಯೊ (Viral Video) ನೋಡಿದ ಮೇಲೆ ನಿಮ್ಮ ಚಿತ್ರಣ ಬದಲಾದರೂ ಆಗಬಹುದು. ಏಕೆಂದರೆ ಇಲ್ಲಿ ಹಾಲು ಮಾರುತ್ತಿರುವುದು ʼಹಾರ್ಲೆ ಮಿಲ್ಕ್‌ಮ್ಯಾನ್ʼ. ಅಂದ ಹಾಗೆ, ಹಾರ್ಲೆ ಡೇವಿಡ್‌ಸನ್ ಬೈಕುಗಳ ಬೆಲೆ ಅಂದಾಜು 12 ಲಕ್ಷ ರೂ.ನಿಂದ 40 ಲಕ್ಷ ರೂ.ವರೆಗೂ ಇದೆ(ಎಕ್ಸ್ ಶೋರೂಮ್ ಬೆಲೆ).
ಇದನ್ನೂ ಓದಿ: Viral video | ಪ್ರಯಾಣಿಕ ಮತ್ತು ಟಿಸಿ ನಡುವೆ ಫುಲ್ ಫೈಟ್! ವೈರಲ್ ಆಯ್ತು ವಿಡಿಯೋ
ಹೌದು. ಪ್ರಸಿದ್ಧ ಮೋಟಾರು ಸೈಕಲ್ ಸಂಸ್ಥೆಯಾಗಿರುವ ಹಾರ್ಲೆ ಡೇವಿಡ್‌ಸನ್ ಬೈಕ್‌ನಲ್ಲಿ ವ್ಯಕ್ತಿಯೊಬ್ಬ ಹಾಲು ಮಾರಾಟ ಮಾಡುತ್ತಿದ್ದಾನೆ. ಅದರ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹರಿಬಿಡಲಾಗಿದೆ. ಹಾರ್ಲೆ ಡೇವಿಡ್‌ಸನ್ ಬೈಕಿನ ಅಕ್ಕಪಕ್ಕ ಎರಡು ಹಾಲಿನ ಕ್ಯಾನ್ ಕಟ್ಟಿಕೊಂಡಿರುವ ವ್ಯಕ್ತಿ ಮನೆ ಮನೆಗೆ ಹಾಲು ಹಾಕುತ್ತ ತೆರಳುವ ವಿಡಿಯೋ ಅದಾಗಿದೆ.
ಈ ವಿಡಿಯೊವನ್ನು ಅಮಿತ್ ಭಂದನ್ ಹೆಸರಿನವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಡಿ.18ರಂದು ಹೊರಬಿಡಲಾದ ಈ ವಿಡಿಯೋ ಈಗಾಗಲೇ 30 ಲಕ್ಷದಷ್ಟು ವೀಕ್ಷಣೆ ಪಡೆದುಕೊಂಡಿದೆ. ಸಾವಿರಾರು ಮಂದಿ ವಿಡಿಯೊಗೆ ಕಾಮೆಂಟ್‌ಗಳನ್ನು ಹಾಕಿದ್ದಾರೆ. “ನನ್ನ ಬಿಸಿನೆಸ್ ಮುಂದುವರಿಸುತ್ತೇನೆ, ನಿನಗೆ ಹಾರ್ಲೆ ಬೈಕ್ ಕೊಡಿಸುತ್ತೇನೆ ಎಂದು ಅಪ್ಪ ಹೇಳಿದರೆ ಹೀಗೆ ಆಗುತ್ತದೆ”, “ಇದೇ ಕಾರಣಕ್ಕೆ ಹಾರ್ಲೆ ಸಂಸ್ಥೆ ಭಾರತವನ್ನು ಬಿಟ್ಟು ಹೋಯಿತು”, “ಇವರು ಬರೀ ಮಿಲ್ಕ್‌ಮ್ಯಾನ್ ಅಲ್ಲ ಹಾರ್ಲೆ ಮಿಲ್ಕ್‌ಮ್ಯಾನ್” ಹೀಗೆ ಹಲವಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.
ಇದನ್ನೂ ಓದಿ: Viral Video | ರಿಸೆಪ್ಷನ್ ಸಮಯದಲ್ಲಿ ಕೂದಲು ಕತ್ತರಿಸಿಕೊಂಡ ವಧು! ಕುಟುಂಬಸ್ಥರೇಕೆ ಕಣ್ಣೀರಿಟ್ಟರು?