Site icon Vistara News

Viral Video | ಹುಡುಗಿಯರ ಮಸ್ತ್ ಡ್ಯಾನ್ಸ್, ಬೆಸ್ಟ್‌ನಲ್ಲಿ ಬೆಸ್ಟ್ ಅಂತಿದ್ದಾರೆ ನೆಟ್ಟಿಗರು

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ಹಾಡುಗಳು ವೈರಲ್ ಆಗುವುದು ಸಾಮಾನ್ಯ. ಅದೇ ರೀತಿ ಇತ್ತೀಚೆಗೆ ವೈರಲ್ ಲಿಸ್ಟ್ ಸೇರಿಕೊಂಡಿದ್ದು ಲತಾ ಮಂಗೇಶ್ಕರ್ ಅವರು ಹಾಡಿರುವ ‘ಮೆರಾ ದಿಲ್ ಯೆ ಪುಕಾರೆ ಆಜಾ’ ಹಾಡು. ಈ ಹಾಡನ್ನು ರಿಮಿಕ್ಸ್ ಮಾಡಿಕೊಂಡು ಅನೇಕರು ಹೆಜ್ಜೆ ಹಾಕಿ, ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ. ಅಂತದ್ದೊಂದು ವಿಡಿಯೋ ಇದೀಗ ನೆಟ್ಟಿಗರ ಮನಸ್ಸು ಗೆದ್ದಿದೆ. ಇದೇ ಬೆಸ್ಟ್ ಅಲ್ಲಿ ಬೆಸ್ಟ್ ವಿಡಿಯೋ ಅಂತಿದ್ದಾರೆ ಡ್ಯಾನ್ಸ್ ಪ್ರೇಮಿಗಳು.

ಇದನ್ನೂ ಓದಿ: Viral Video | 15,700 ಕೆ.ಜಿ ತೂಕದ ಲಾರಿಯನ್ನು ಹಲ್ಲಿನಲ್ಲೇ ಎಳೆದ! ಇಲ್ಲಿದೆ ನೋಡಿ ವಿಡಿಯೊ

ಜಸ್ಮೀತ್ ಹೆಸರಿನ ಯುವತಿ ತನ್ನ ಸ್ನೇಹಿತೆಯೊಂದಿಗೆ ಈ ಹಾಡಿಗೆ ನೃತ್ಯ ಮಾಡಿದ್ದಾರೆ. 3 ನಿಮಿಷದ ಹಾಡಿನ ನೃತ್ಯವನ್ನು ಒಂದೇ ದಿನದಲ್ಲಿ ಸಂಯೋಜಿಸಿ, ಕಲಿತುಕೊಂಡಿದ್ದಾರೆ. ಅದರ ಸಣ್ಣ ತುಣುಕನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಬ್ಬರ ಹಿಂದೆ ಒಬ್ಬರು ನಿಂತು ಆರಂಭಿಸುವ ನೃತ್ಯ ಸಖತ್ ಎನರ್ಜಿಟಿಕ್ ಆಗಿದೆ. ಯುವತಿಯರಿಬ್ಬರು ನೃತ್ಯ ಮಾಡುತ್ತಿದ್ದರೆ ಮುಂದೆ ಕುಳಿತಿರುವ ಜನರು ನೃತ್ಯ ನೋಡಿ ಬೆರಗಾಗಿ ಕೂಗುವುದನ್ನು ವಿಡಿಯೋದಲ್ಲಿ ಗಮನಿಸಬಹುದು.


ಈ ವಿಡಿಯೋವನ್ನು ಜಸ್ಮೀತ್ ಡಿ.23ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. 2.58 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. “ಈ ಹಾಡಿಗೆ ಅನೇಕರು ನೃತ್ಯ ಮಾಡಿದ್ದನ್ನು ನೋಡಿದ್ದೇವೆ. ಆದರೆ ಅವೆಲ್ಲದರಲ್ಲು ಬೆಸ್ಟ್ ಎನಿಸಿದ್ದು ಇದೇ” ಎಂದು ಅನೇಕರು ಪ್ರಶಂಶಿಸಿದ್ದಾರೆ. “ನೃತ್ಯವೆಂದರೆ ಹೀಗಿರಬೇಕು” ಎಂದು ಕೆಲವರು ಕಮೆಂಟ್ ಹಾಕಿದ್ದಾರೆ.

Exit mobile version