ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಸವಾಲುಗಳನ್ನು ಹಾಕಿಕೊಂಡು ಅದನ್ನು ಪೂರೈಸಲು ಒದ್ದಾಡುವವರನ್ನು ನೀವು ನೋಡಿರುತ್ತೀರಿ. ಇದೀಗ ಮಗನೊಬ್ಬ ತಾಯಿಗೆ ಸವಾಲು ಹಾಕಿ, ಆಕೆ ಅದನ್ನು ಗೆದ್ದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral News : ಈ ಫೋಟೋದಲ್ಲಿ ಗೊಂಬೆಯನ್ನು ಹುಡುಕೋದು ಎಷ್ಟೊಂದು ಕಷ್ಟ! ನೀವೇನಾದರೂ ಹುಡುಕಬಲ್ಲಿರಾ?
ಫುಟ್ ಬಾಲ್ ಆಟಗಾರನಾಗಿರುವ ಮಗ ಭೌತಶಾಸ್ತ್ರದ ಉಪನ್ಯಾಸಕಿಯಾಗಿರುವ ತಾಯಿಗೆ ಸವಾಲು ಹಾಕುತ್ತಾನೆ. ಟೇಬಲ್ ಮೇಲೆ ಎರಡು ಗ್ಲಾಸ್ ಇಟ್ಟು ಒಂದರಲ್ಲಿ ನೀರು ತುಂಬಲಾಗಿರುತ್ತದೆ. ಇನ್ನೊಂದು ಗ್ಲಾಸ್ ಅನ್ನು ಉಲ್ಟಾ ಇಡಲಾಗಿದ್ದು ಅದರಡಿ ಪುಟ್ಟ ಬಾಲ್ ಒಂದನ್ನು ಇಡಲಾಗಿರುತ್ತದೆ. ಆ ಬಾಲ್ ಅನ್ನು ಇನ್ನೊಂದು ಗ್ಲಾಸ್ ಮುಟ್ಟದೆಯೇ ಆ ಗ್ಲಾಸಿನೊಳಗೆ ಹಾಕುವುದು ಚಾಲೆಂಜ್ ಆಗಿರುತ್ತದೆ.
ಟೇಬಲ್ ಮೇಲೆ ಗ್ಲಾಸ್ ಲೋಟಗಳನ್ನು ಇಟ್ಟ ಮಗ ಸವಾಲು ಗೆದ್ದವರಿಗೆ ಬಹುಮಾನವೆಂದು ಹಣವನ್ನೂ ಟೇಬಲ್ ಮೇಲೆ ಇಟ್ಟಿರುತ್ತಾನೆ. ಮೊದಲಿಗೆ ಆತನ ತಾಯಿ ಎರಡೂ ಗ್ಲಾಸ್ ಮುಟ್ಟಿ ಬಾಲ್ ವರ್ಗಾಯಿಸುತ್ತಾರೆ. ಅದು ತಪ್ಪು ಎಂದು ಮಗ ಹೇಳಿದ ಮೇಲೆ ತಾಯಿ ಬಾಲ್ ಇದ್ದ ಗ್ಲಾಸ್ ಅನ್ನು ತಿರುಗಿಸುತ್ತಾ ಆ ಬಾಲನ್ನು ಇನ್ನೊಂದು ಲೋಟಕ್ಕೆ ವರ್ಗಾಯಿಸುತ್ತಾರೆ. ಇದನ್ನು ಕಂಡ ಮಗ ಬೆಪ್ಪಾಗಿ ಅಲ್ಲೇ ನಿಲ್ಲುತ್ತಾನೆ. ತಾಯಿಯು ಟೇಬಲ್ ಮೇಲಿದ್ದ ಹಣವನ್ನು ತೆಗೆದುಕೊಂಡು ಅಲ್ಲಿಂದ ತೆರಳುತ್ತಾಳೆ.
ಫೆ.18ರಂದು ಅನಂತ್ ಹೆಸರಿನವರು ಈ ವಿಡಿಯೊವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದ್ದು, ಸಾವಿರಾರು ಮಂದಿ ವಿಡಿಯೊಗೆ ಲೈಕ್ ಕೊಟ್ಟಿದ್ದಾರೆ. ಭೌತಶಾಸ್ತ್ರ ತಿಳಿದಿದ್ದರೆ ಎಲ್ಲವನ್ನೂ ಮಾಡಬಹುದು ಎಂದು ಕಾಮೆಂಟ್ ಹಾಕಲಾರಂಭಿಸಿದ್ದಾರೆ.