Site icon Vistara News

Viral Video | ಹಾಲಿವುಡ್‌ ಹಾಸ್ಯ ಕಲಾವಿದರಿಂದಲೂ ನಾಟು ನಾಟು ಹಾಡಿಗೆ ಹೆಜ್ಜೆ! ವಿಡಿಯೊ ಹಂಚಿಕೊಂಡ ಆನಂದ್‌ ಮಹೀಂದ್ರಾ

ಬೆಂಗಳೂರು: ರಾಜಮೌಳಿ ನಿರ್ದೇಶನದ ʼಆರ್‌ಆರ್‌ಆರ್‌ʼ ಸಿನಿಮಾದ ʼನಾಟು ನಾಟುʼ ಹಾಡು ಇತ್ತೀಚೆಗೆ ಗೋಲ್ಡನ್‌ ಗ್ಲೋಬ್‌ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಬಿಡುಗಡೆಯಾದಾಗ ಟ್ರೆಂಡ್‌ ಆಗಿದ್ದ ಈ ಹಾಡು ಪ್ರಶಸ್ತಿ ಬಾಚಿಕೊಂಡ ನಂತರ ಮತ್ತೆ ಟ್ರೆಂಡಿಂಗ್‌ ಪಟ್ಟಿ ಸೇರಿಕೊಂಡಿದೆ. ಈ ಹಾಡಿಗೆ ಮತ್ತೊಮ್ಮೆ ಎಲ್ಲರೂ ಹೆಜ್ಜೆ ಹಾಕಲಾರಂಭಿಸಿದ್ದಾರೆ. ಈಗ ಹಾಡು ಎಷ್ಟು ವೈರಲ್‌ ಆಗಿದೆ ಎಂದರೆ ಹಾಲಿವುಡ್‌ನ ಪ್ರಸಿದ್ಧ ಹಾಸ್ಯ ಜೋಡಿಯಾದ ಲಾರೆಲ್‌ ಮತ್ತು ಹಾರ್ಡಿ ಕೂಡ ಈ ಹಾಡಿಗೆ ನೃತ್ಯ (Viral Video) ಮಾಡಿದ್ದಾರೆ!


ಹೌದು. ಲಾರೆಲ್‌ ಮತ್ತು ಹಾರ್ಡಿ ಈ ಹಾಡಿಗೆ ನೃತ್‌ ಮಾಡಿದ್ದಾರೆ. ಅಂದರೆ ಈ ಹಿಂದೆ ಯಾವುದೋ ಸಿನಿಮಾದಲ್ಲಿ ಅವರು ಮಾಡಿದ್ದ ನೃತ್ಯಕ್ಕೆ ಈ ಹಾಡನ್ನು ಹಾಕಿ ಎಡಿಟ್‌ ಮಾಡಲಾಗಿದೆ. ವಿಶೇಷವೆಂದರೆ ಅವರು ಹಾಕುವ ಹೆಜ್ಜೆಗಳು ನಾಟು ನಾಟು ಹಾಡಿಗೆ ಸರಿಹೊಂದಿವೆ. ಆ ವಿಡಿಯೊವನ್ನು ಮಹೀಂದ್ರಾ ಆಂಡ್‌ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥರಾಗಿರುವ ಆನಂದ್‌ ಮಹೀಂದ್ರಾ ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral Video | ಇದು ಪ್ರಪಂಚದಲ್ಲೇ ಅತ್ಯಂತ ಕಷ್ಟದ ನೃತ್ಯವಂತೆ! ಅಬ್ಬಬ್ಬಾ, ಹೇಗಿದೆ ನೋಡಿ
“ನಾಟು ನಾಟು ಹಾಡಿನ ಆಕರ್ಷಣೆಯಿಂದ ಯಾರೊಬ್ಬರೂ ಬಚಾವಾಗುವುದಕ್ಕೆ ಸಾಧ್ಯವಿಲ್ಲ. ಹಳೆ ಕಾಲದವರೂ ಕೂಡ. ಲಾರೆಲ್‌ ಮತ್ತು ಹಾರ್ಡಿ ಕೂಡ ಈ ಹಾಡಿನಿಂದ ಬಚಾವಾಗಲಿಲ್ಲ. ಇವರಿಬ್ಬರಿಗೆ ಆರ್‌ಆರ್‌ಆರ್‌ ಜೋಡಿಯಷ್ಟು ಎಜರ್ಜಿ ಇಲ್ಲದಿರಬಹುದು ಆದರೆ ನೃತ್ಯವಂತೂ ಸುಂದರವಾಗಿದೆ” ಎಂದು ಆನಂದ್‌ ಮಹೀಂದ್ರಾ ಅವರು ವಿಡಿಯೊದೊಂದಿಗೆ ಹೇಳಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

Exit mobile version