ಬೆಂಗಳೂರು: ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಸಂಬಂಧವೆಂದರೆ ಅದು ತಾಯಿ ಮತ್ತು ಮಗುವಿನ ಸಂಬಂಧ. ಅದರ ಮಹತ್ವ ಸಾರುವ ಅನೇಕ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹರಿದಾಡಿ, ವೈರಲ್ ಆಗುತ್ತಿರುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೊ ಸಾಮಾಜಿಕ ಜಾಲತಾಣಗಳಲಿ ಭಾರೀ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral Video : ಬಿಸಿ ಕಾವಲಿ ಮೇಲೆ ಕುಳಿತು ಆಶೀರ್ವದಿಸುವ ಬಾಬಾ! ಇಲ್ಲಿದೆ ನೋಡಿ ವಿಡಿಯೊ
ಈಗಷ್ಟೇ ಹೆರಿಗೆಯಾದ ಶಿಶುವನ್ನು ಅಲ್ಲೇ ಹಾಸಿಗೆ ಮೇಲೆ ಮಲಗಿರುವ ತಾಯಿಯ ಬಳಿ ಹಿಡಿಯಲಾಗಿದೆ. ಮಗು ತನ್ನ ಪುಟಾಣಿ ಕೈಯಿಂದ ತಾಯಿಯ ಮುಖವನ್ನು ಹಿಡಿದುಕೊಂಡಿದೆ. 22 ಸೆಕೆಂಡುಗಳ ವಿಡಿಯೊ ಇದಾಗಿದ್ದು, ವಿಡಿಯೊದುದ್ದಕ್ಕೂ ಮಗು ತಾಯಿಯನ್ನು ಹಿಡಿದುಕೊಂಡು ಇನ್ನಷ್ಟು ಹತ್ತಿರಕ್ಕೆ ಬರುವುದನ್ನು ಕಾಣಬಹುದಾಗಿದೆ.
ಈ ವಿಡಿಯೊವನ್ನು the figen ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮಾರ್ಚ್ 25ರಂದು ಹಂಚಿಕೊಳ್ಳಲಾದ ವಿಡಿಯೊ ಈಗಾಗಲೇ ಐದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಸಾವಿರಾರು ಮಂದಿ ವಿಡಿಯೊವನ್ನು ಲೈಕ್ ಮಾಡಿದ್ದಾರೆ. ಹಲವಾರು ರೀತಿಯ ಕಾಮೆಂಟ್‌ಗಳು ಈ ವಿಡಿಯೊಗೆ ಬಂದಿವೆ. ವಿಡಿಯೊ ಕಂಡಿರುವ ಅನೇಕರು ತಾಯಿ ಮಗುವಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದರೆ, ಅನೇಕ ತಾಯಂದಿರು ತಮ್ಮ ಹೆರಿಗೆ ದಿನದ ಅನುಭವಗಳನ್ನೂ ಹಂಚಿಕೊಂಡಿದ್ದಾರೆ.