Site icon Vistara News

Viral Video : ಕಾರಿನಲ್ಲಿ ಬಂದು ಸರಗಳ್ಳತನ ಮಾಡಲಾರಂಭಿಸಿದ ಕಳ್ಳರು! ಹೇಗೆ ಕಳ್ಳತನ ಮಾಡುತ್ತಾರೆ ನೋಡಿ

#image_title

ಚೆನ್ನೈ: ಸರಗಳ್ಳರು ಬೈಕ್‌ನಲ್ಲಿ ಬಂದು ಸರವನ್ನು ಎಳೆದುಕೊಂಡ ಹೋದ ಘಟನೆಗಳ ಬಗ್ಗೆ ಕೇಳಿರುತ್ತೀರಿ. ಆದರೆ ಇದೀಗ ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಳ್ಳರು ಕಾರಿನಲ್ಲೇ ಬಂದು ಸರಗಳ್ಳತನ ಮಾಡಲಾರಂಭಿಸಿದ್ದಾರೆ. ಅದರ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ (Viral Video) ಆಗಿದೆ ಕೂಡ.

ಕೌಸಲ್ಯ ಹೆಸರಿನ ಮಹಿಳೆ ಭಾನುವಾರ ಬೆಳಗ್ಗೆ ಮನೆಯ ಹತ್ತಿರದಲ್ಲೇ ವಾಕಿಂಗ್‌ ಮಾಡುತ್ತಿರುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಬಿಳಿ ಬಣ್ಣದ ಕಾರೊಂದು ಬರುತ್ತದೆ. ಕೌಸಲ್ಯ ಅವರ ಹತ್ತಿರವೇ ಕಾರು ಬರುತ್ತದೆ. ಆಗ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತ ವ್ಯಕ್ತಿ ಕಿಟಕಿಯ ಗ್ಲಾಸ್‌ ಇಳಿಸಿಕೊಂಡು ಕೌಸಲ್ಯ ಅವರ ಕೊರಳಿಗೆ ಕೈ ಹಾಕುತ್ತಾನೆ. ತನ್ನ ಸರವನ್ನು ರಕ್ಷಿಸಿಕೊಳ್ಳಲೆಂದು ಕೌಸಲ್ಯ ಸರವನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆ.

ಇದನ್ನೂ ಓದಿ: Viral News: 100 ಗಂಟೆಗಳ ಕಾಲ ಅಡುಗೆ ಮಾಡುತ್ತಲೇ ನಿಂತ ಮಹಿಳೆ; ಭಾರತೀಯರ ದಾಖಲೆಯೂ ಉಡೀಸ್‌
ಕಾರು ಮುಂದೆ ಹೋಗುವ ರಭಸಕ್ಕೆ ಕೌಸಲ್ಯ ಅವರು ನೆಲದ ಮೇಲೆ ಬಿದ್ದಿದ್ದು, ಕಾರು ಅವರನ್ನು ಸ್ವಲ್ಪ ದೂರ ಎಳೆದುಕೊಂಡೂ ಹೋಗುತ್ತದೆ. ಈ ಎಲ್ಲ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಬಳಿಕ ಕೌಸಲ್ಯ ಅವರು ಸಿಂಗನಲ್ಲೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.


ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸಿರುವ ಪೊಲೀಸರು ಸಿಸಿಟಿವಿ ದೃಶ್ಯಗಳಿಂದಾಗಿ ಕಳ್ಳರನ್ನು ಪತ್ತೆ ಹಚ್ಚಿದ್ದಾರೆ. ಕಳ್ಳರನ್ನು ಅಭಿಷೇಕ್‌ ಮತ್ತು ಶಕ್ತಿವೇಲ್‌ ಎಂದು ಗುರುತಿಸಲಾಗಿದೆ. ಈಗಾಗಲೇ ಇಬ್ಬರನ್ನು ಪೊಲೀಸರು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ಅಭಿಷೇಕ್‌ ಧರ್ಮಪುರಿ ಮೂಲದವನಾಗಿದ್ದು ಕೊಯಮತ್ತೂರಿನಲ್ಲಿ ವಾಸವಿದ್ದಾನೆ. ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿರುವ ಈತ ಈ ಹಿಂದೆ ಕೂಡ ಹಲವಾರು ಸರಗಳ್ಳತನ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

Exit mobile version