ನರ್ಸರಿ ಮಕ್ಕಳ ಶಾಲಾ ವಾರ್ಷಿಕೋತ್ಸವ ನೋಡಲು ಹೋದರೆ ಹೇಗಿರುತ್ತದೆ ಹೇಳಿ! ಟೀಚರು ದೂರದಲ್ಲೆಲ್ಲೋ ಕೈಭಾಷೆ ಮಾಡಿ ಕರೆದಾಗ ಒಂದೊಂದೇ ಮಗು ಹೆಜ್ಜೆ ಹಾಕುತ್ತಾ ಸ್ಟೇಜಿಗೆ ಬಂದು, ತನ್ನ ಪಾಡಿಗೆ ಕುಣಿಯುವ ಚಂದ ನೋಡಿ ಮನಸ್ಸು ಮಗುವಾಗುತ್ತದಲ್ಲ, ಹಾಗೆಯೇ ಇದೂ ಕೂಡಾ. ಕುಣಿತ ಮುಗಿದ ಮೇಲೆ ಟೀಚರ್ ಕೊಡುವ ಚಾಕೋಲೇಟಿಗೆ ನಾ ಮುಂದು ತಾ ಮುಂದು ಎಂದು ಗುಂಪುಗಟ್ಟುವ ಪುಟ್ಟ ಮಕ್ಕಳಿಗೂ ಈ ೧೪ ನಾಯಿಗಳಿಗೂ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ನೋಡಿದರೆ ಮುದ್ದುಕ್ಕಿ ಬರುವುದು ಖಂಡಿತ.
ಜರ್ಮನಿಯ ನಾಗರಿಕರೊಬ್ಬರು ೧೪ ನಾಯಿಗಳ ತಂಡವೊಂದನ್ನು ಕಟ್ಟಿ ಅವಕ್ಕೆ ಲ್ಯಾಟಿನ್ ಅಮೆರಿಕಾದ ವೃತ್ಯ ಪ್ರಕಾರವಾದ ಕೋಂಗೋವನ್ನು ಕಲಿಸುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ವೂಲ್ಫ್‌ಗ್ಯಾಂಗ್ ಲ್ಯಾನ್‌ಬರ್ಗರ್ ಎಂಬವರೇ ಇದೀಗ ೧೪ ನಾಯಿಗಳ ತಂಡದ ಮೂಲಕ ಈ ನೃತ್ಯವನ್ನು ಪ್ರಸ್ತುತ ಪಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದು, ೨೦೨ರಲ್ಲಿ ಆತನ ಮಗಳು ಮಾಡಿದ್ದ ಇಂಥದ್ದೇ ಇನ್ನೊಂದು ದಾಖಲೆಯನ್ನು ಮುರಿದಿದ್ದಾರೆ.
ಕೋಂಗೋ ನೃತ್ಯದಲ್ಲಿ, ಒಬ್ಬರ ಹಿಂದೆ ಒಬ್ಬರು ನಿಲ್ಲುತ್ತಾ ಚೈನ್ ರೂಪಿಸುವುದು ಮುಖ್ಯ. ಇಲ್ಲಿ ಒಬ್ಬರು ನಿಂತಿರುತ್ತಾರೆ ಹಾಗೂ ಅವರಿಗೆ ಆದಾರವಾಗಿ ಹಿಂದೆ ಸರಪಳಿ ಸಿದ್ಧಪಡಿಸಬೇಕು. ಇದನ್ನು ನಾಯಿಗಳಿಗೆ ಕಲಿಸಿ ಅವುಗಳು ಇದನ್ನು ಮನೋಜ್ಞವಾಗಿ ಪ್ರದರ್ಶಿಸಿದ್ದು ಇಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಾಯಿಗಳ ಹೆಸರೂ ದಾಖಲೆಯಲ್ಲಿ ಸೇರಿಸಲಾಗಿದ್ದು, ಎಮ್ಮಾ, ಫಿಲೋ, ಫಿನ್, ಸಿಮೊನ್, ಸುಸಿ, ಮಾಯಾ, ಉಲ್ಫ್, ಸ್ಪೆಕ್, ಬಿಬಿ, ಕ್ಯಾಟಿ, ಜೆನ್ನಿಫರ್, ಎಲ್ವಿಸ್, ಚಾರ್ಲಿ ಹಾಗೂ ಕ್ಯಾಥಿ ಎಂಬವೇ ಈ ಹದಿನಾಲ್ಕು ನಾಯಿಗಳಾಗಿವೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಮೋಡಿ ಮಾಡುತ್ತಿದ್ದು, ನಾಯಿಗಳ ನೃತ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಿಂದೆಯೂ ಈ ನಾಯಿಗಳು ಮತ್ತೊಂದು ದಾಖಲೆಯಲ್ಲಿ ಹಸರು ಬರೆಸಿಕೊಂಡಿವೆ.
ಇದನ್ನೂ ಓದಿ: Hanuma vihari: ಮೂಳೆ ಮುರಿದರೂ ಬ್ಯಾಂಡೇಜ್ ಕಟ್ಟಿ ತಂಡದ ರಕ್ಷಣೆಗೆ ನಿಂತ ಹನುಮ ವಿಹಾರಿ; ವಿಡಿಯೊ ವೈರಲ್