Site icon Vistara News

Viral Video : ಸ್ಟೈಲಿಷ್‌ ಆಗಿ ಬೈಕ್‌ ರೈಡ್‌ ಹೊರಟ ನಾಯಿ! ಈ ವಿಡಿಯೊಗೆ ಮರುಳಾಗದವರಿಲ್ಲ!

#image_title

ಬೆಂಗಳೂರು: ನಾಯಿಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಅದೇ ರೀತಿ ಇದೀಗ ಮತ್ತೊಂದು ನಾಯಿಯ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ಭಾರೀ ವೈರಲ್‌ (Viral Video) ಆಗಿದೆ. ನಾಯಿಯೊಂದು ತನ್ನ ಮಾಲೀಕನ ಜತೆ ಸ್ಟೈಲಿಷ್‌ ಆಗಿ ಬೈಕ್‌ ರೈಡ್‌ ಹೋಗುವ ವಿಡಿಯೊ ಅದಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ಸಜಿತ್‌ ಸಲಾಜರ್‌ ಹೆಸರಿನ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಬೈಕ್‌ ಮಾಲೀಕ ತನ್ನ ನಾಯಿಗೆ ಕೋಟ್‌, ಹೆಲ್ಮೆಟ್‌ ಹಾಗೂ ಸನ್‌ಗ್ಲಾಸ್‌ ಹಾಕಿದ್ದಾನೆ. ರಸ್ತೆಯ ಬದಿಯಲ್ಲಿ ಬೈಕ್‌ನ್ನು ನಿಲ್ಲಿಸಿಕೊಂಡಿದ್ದಾನೆ. ನಾಯಿ ಮಾಲೀಕನ ಮುಂಭಾಗದಲ್ಲಿ ಕುಳಿತುಕೊಂಡು ರಸ್ತೆ ನೋಡುತ್ತಿದೆ. ಪಕ್ಕದಲ್ಲಿ ಕಾರಿನಲ್ಲಿ ಬರುವವರು ಈ ದೃಶ್ಯವನ್ನು ವಿಡಿಯೊ ಮಾಡಿದ್ದಾರೆ.

ಇದನ್ನೂ ಓದಿ: Viral Video: 2000 ರೂ. ನೋಟು ಕೊಟ್ಟ ಗ್ರಾಹಕ; ಸ್ಕೂಟರ್​​ನಿಂದ ಪೆಟ್ರೋಲ್​ ವಾಪಸ್ ತೆಗೆದ ಬಂಕ್​ ಸಿಬ್ಬಂದಿ
ವಿಡಿಯೊ ಮಾಡುತ್ತಿರುವುದು ತಿಳಿದ ತಕ್ಷಣ ನಾಯಿಯ ಮಾಲೀಕ ಅದರ ತಲೆಯ ಮೇಲಿದ್ದ ಸನ್‌ಗ್ಲಾಸ್‌ ಅನ್ನು ತೆಗದು ಕಣ್ಣಿಗೆ ಹಾಕುತ್ತಾನೆ. ಹಾಗೆಯೇ ನಾಯಿ ಕೂಡ ಕ್ಯಾಮೆರಾದತ್ತ ತಿರುಗುತ್ತದೆ. ಅಲ್ಲಿಗೆ ವಿಡಿಯೊ ಮುಕ್ತಾಯವಾಗುತ್ತದೆ.

ಈ ವಿಡಿಯೊವನ್ನು ಮೂರು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಲ್ಲಿಯವರೆಗೆ ವಿಡಿಯೊ 3.5 ಲಕ್ಷಕ್ಕೂ ಅಧಿಕ ಜನರಿಂದ ವೀಕ್ಷಣೆ ಪಡೆದುಕೊಂಡಿದೆ. ವಿಡಿಯೊವನ್ನು ನೋಡಿರುವ ಜನರು ನಾನಾ ರೀತಿಯಲ್ಲಿ ವಿಡಿಯೊಗೆ ಕಾಮೆಂಟ್‌ಗಳನ್ನು ಹಾಕಲಾರಂಭಿಸಿದ್ದಾರೆ. “ಅಮೇಜಿಂಗ್‌”, “ನಾಯಿಯೂ ಸ್ವಾಗ್‌ ಮೂಡ್‌ನಲ್ಲಿದೆ”, “ಈ ರೀತಿ ಜಾಲಿ ರೈಡ್‌ ಹೋಗುವುದೇ ಚಂದ” ಎನ್ನುವಂತಹ ಹಲವಾರು ಕಮೆಂಟ್‌ಗಳು ವಿಡಿಯೊಗೆ ಬಂದಿವೆ.

Exit mobile version