ಬೆಂಗಳೂರು: ಕಾಡಿನ ರಾಜ ಸಿಂಹ ಎನ್ನುತ್ತೇವೆ. ಆದರೆ ದೈತ್ಯಾಕಾರದ ಆನೆಯನ್ನು ನೋಡಿದರೆ ಕೆಲವೊಮ್ಮೆ ಸಿಂಹ ಕೂಡ ಭಯದಿಂದ ಓಡಿಬಿಡುತ್ತದೆ. ಅಂತಹ ಆನೆಗಳು ಪ್ರವಾಸಿಗರ ಮೇಲೂ ದಾಳಿ ನಡೆಸಲು ಮುಂದಾಗುವ ಹಲವಾರು ವಿಡಿಯೊಗಳನ್ನು ನೀವು ನೋಡಿರುತ್ತೀರಿ. ಆದರೆ ಆನೆ ಇನ್ನೇನು ತಮ್ಮ ಮೇಲೆ ಕಾಲಿಟ್ಟೇ ಬಿಟ್ಟಿತು ಎನ್ನುವ ಸಮಯದಲ್ಲಿ ಪವಾಡ ರೀತಿಯಲ್ಲಿ ಬಚಾವಾಗುವುದನ್ನು ನೋಡಿದ್ದೀರಾ? ಅಂತದ್ದೊಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.
ಸಫಾರಿ ಗೈಡ್ ಒಬ್ಬರು ಓರ್ವ ಪ್ರವಾಸಿಯೊಂದಿಗೆ ಬಯಲಿನಲ್ಲಿ ನಡೆಯುತ್ತಿರುತ್ತಾರೆ. ಅಲ್ಲಿ ಹೋಗುತ್ತಿದ್ದ ದೊಡ್ಡ ಆನೆಯೊಂದನ್ನು ನೋಡುತ್ತಿರುತ್ತಾರೆ. ಸೀದಾ ಹೋಗುತ್ತಿದ್ದ ಆನೆ ಒಮ್ಮೆಲೆ ಅವರ ಕಡೆ ತಿರುಗಿ ದಾಳಿ ನಡೆಸುವುದಕ್ಕೆ ಜೋರಾಗಿ ಓಡಿ ಬರುತ್ತದೆ. ಇನ್ನೇನು ಆನೆ ಅವರಿಬ್ಬರನ್ನು ತುಳಿದೇ ಬಿಟ್ಟಿತು ಎನ್ನುವಷ್ಟರಲ್ಲಿ ಆ ಸಫಾರಿ ಗೈಡ್ ಕೈನಲ್ಲೇ ಆನೆಗೆ ಸನ್ನೆ ಮಾಡುತ್ತಾನೆ. ಆಗ ನಿಲ್ಲುವ ಆನೆ ಸುಮ್ಮನೆ ಹೆಜ್ಜೆಗಳನ್ನು ಹಿಂದೆ ಹಾಕುತ್ತಾ ಹೋಗುತ್ತದೆ.
ಇದನ್ನೂ ಓದಿ: Video Viral : ಸುರಪುರದಲ್ಲಿ ನಾಗರ ಹಾವುಗಳ ಸಲ್ಲಾಪ; ವೈರಲ್ ಆಯ್ತು ರಾಜ-ರಾಣಿಯ ವಿಡಿಯೊ!
ಈ ವಿಡಿಯೊವನ್ನು ಜೂನ್ 29ರಂದು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 15 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. 22 ಸಾವಿರಕ್ಕೂ ಅಧಿಕ ಮಂದಿ ಟ್ವೀಟ್‌ನ್ನು ಲೈಕ್ ಮಾಡಿದ್ದಾರೆ. 2800ಕ್ಕೂ ಅಧಿಕ ಮಂದಿ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ. ಹಾಗೆಯೇ ಈ ವಿಡಿಯೊಗೆ ಹಲವಾರು ರೀತಿಯ ಕಾಮೆಂಟ್‌ಗಳ ಸುರಿಮಳೆಯೇ ಹರಿದುಬಂದಿದೆ.
Safari guide stopping a charging elephant with his hand.
— Figen (@TheFigen_) June 29, 2023
pic.twitter.com/U6f85rWYZD
“ಒಂದು ಕ್ಷಣಕ್ಕೆ ನನ್ನ ಜೀವವೇ ನಿಂತಂತಾಗಿತ್ತು”, “ಅಯ್ಯಪ್ಪಾ, ನನ್ನ ಮುಂದೇನಾದರೂ ಈ ರೀತಿಯಲ್ಲಿ ಆನೆ ಓಡಿ ಬಂದರೆ ನನಗೆ ಅಲ್ಲೇ ಹೃದಯಾಘಾತ ಆಗಿಬಿಡುತ್ತದೆ”, “ಅವರಿಗೆ ಅದೆಷ್ಟು ಧೈರ್ಯವಿದೆ. ಚೂರೂ ಕದಲದೆ ಆನೆಯನ್ನೇ ಹಿಂದೆ ಓಡಿಸಿಬಿಟ್ಟರಲ್ಲಾ” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಹಾಗೆಯೇ “ವಾವ್”, “ಸೂಪರ್”, “ಅಮೇಜಿಂಗ್” ಎನ್ನುವಂತಹ ನೂರಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.